Advertisement
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಗರಗಳ ವ್ಯಾಪ್ತಿಯಲ್ಲಿ ನಗರ ಸಾರಿಗೆ ಬಸ್ ಓಡಾಟಕ್ಕೆ ಕಳೆದ ವರ್ಷ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಬಸ್ ಲೋಕಾರ್ಪಣೆಗೆ ಚಾಲನೆ ನೀಡಿತ್ತು. ಡಿಸೆಂಬರ್ ವೇಳೆಗೆ ಪುತ್ತೂರು ಡಿಪೋಗೆ ಬಸ್ ಬರುವ ಭರವಸೆ ನೀಡಲಾಗಿತ್ತು. ಆದರೆ ಇನ್ನೂ ಬಸ್ ಪುತ್ತೂರು ಡಿಪೋದತ್ತ ಮುಖ ಮಾಡಿಲ್ಲ.
ಜಿಲ್ಲೆಯಲ್ಲಿ ಮಂಗಳೂರು ಮತ್ತು ಪುತ್ತೂರಿಗೆ ಹೊಸ ಮಾದರಿಯ ಬಸ್ ಘೋಷಿಸಲಾಗಿತ್ತು. ಪುತ್ತೂರು ವಿಭಾಗೀಯ ಕೇಂದ್ರದ ಪುತ್ತೂರು ಡಿಪೋ ಮತ್ತು ಮಡಿಕೇರಿ ಡಿಪೋಗಳಿಗೆ ಒಟ್ಟು 44 ಬಸ್‌ಗಳು ಮಂಜೂರುಗೊಂಡಿತ್ತು. ಅದರಲ್ಲಿ ಪುತ್ತೂರು ಡಿಪೋಗೆ 26 ಬಸ್‌ಗಳು ಸೇರಿವೆ. ಹಸಿರು ಬಣ್ಣದ ಅತ್ಯಾಧುನಿಕ ಬಸ್ ಪುತ್ತೂರಿನಲ್ಲಿ ನಗರ ಮಾರ್ಗಗಳಲ್ಲಿ ಓಡಾಟ ನಡೆಸಲು ಬಳಸಲು ನಿರ್ಧರಿಸಲಾಗಿತ್ತು. ಪುತ್ತೂರು ಡಿಪೋ
ಸುಳ್ಯ ಮತ್ತು ಪುತ್ತೂರು ತಾಲೂಕು ಒಳಗೊಂಡ ಪುತ್ತೂರು ಡಿಪೋದಲ್ಲಿ 165 ಶೆಡ್ನೂಲ್‌ಗಳಿವೆ. ಈಗ 168 ಬಸ್‌ಗಳು ಇವೆ. ಅದರಲ್ಲಿ ಹೆಚ್ಚಿನವು ಹಳೆ ಬಸ್‌ಗಳಾಗಿವೆ. ಓಡಾಟಕ್ಕೆ ಕಷ್ಟ ಎಂದು ಚಾಲಕರು ಈ ಹಿಂದೆಯೇ ಸಂಬಂಧಪಟ್ಟವರಿಗೆ ಮನವಿ ನೀಡಿದ್ದರು. ಮಳೆಗಾಲದಲ್ಲಿ ಸೋರುವ ಬಸ್ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ಸಮಸ್ಯೆ ತೋಡಿಕೊಂಡಿದ್ದರು. ಕೆಲ ಬಸ್‌ಗಳು ಸೂಚಿತ ಕಿ.ಮೀ. ದಾಟಿ ಓಡಾಟಕ್ಕೆ ಅನರ್ಹವಾಗಿದ್ದರೂ ಸಂಚಾರ ನಡೆಸುತ್ತಿದ್ದ ಕಾರಣ ಕಪ್ಪು ಹೊಗೆಯೇಳುವ ಸಮಸ್ಯೆ ಕೂಡ ಇತ್ತು. ಈ ಮಧ್ಯೆ ಕಳೆದ ಸೆ. 27ರಂದು ಪುತ್ತೂರು ಡಿಪೋಗೆ 12 ಬಸ್ ಸೇರ್ಪಡೆಗೊಂಡಿದೆ. ಅದಕ್ಕೆ ಮೊದಲೇ 2016 ಆ. 26ರಂದು ಮಂಜೂರಾಗಿದ್ದ ಡಲ್ಟ್ ಮಾದರಿ ಬಸ್ ಇನ್ನೂ ಬಂದಿಲ್ಲ..!
Related Articles
ವಿದ್ಯಾರ್ಥಿಗಳಿಗೆ ಗರಿಷ್ಠ ಬಸ್ ವಿತರಿಸಿರುವ ಪುತ್ತೂರು ಡಿಪೋ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಪುತ್ತೂರು ವಿಭಾಗದಲ್ಲಿ 44,564 ಪಾಸ್ ವಿತರಿಸಿದ್ದು, ಇದರಲ್ಲಿ 20,861 ಪಾಸ್‌ಗಳನ್ನು ಪುತ್ತೂರಿನಲ್ಲೇ ನೀಡಲಾಗಿದೆ. ಉಳಿದಂತೆ ಧರ್ಮಸ್ಥಳ 9,118, ಬಿ.ಸಿ. ರೋಡ್-5,560., ಮಡಿಕೇರಿ-9,925 ವಿದ್ಯಾರ್ಥಿಗಳು ಬಸ್ ಪಾಸ್ ಹೊಂದಿದ್ದಾರೆ. ವಿಭಾಗದ ಪುತ್ತೂರು, ಬೆಳ್ತಂಗಡಿ, ಬಿ.ಸಿ.ರೋಡ್ ಮತ್ತು ಮಡಿಕೇರಿ ಡಿಪೋಗಳಲ್ಲಿ 1,664 ಚಾಲಕ-ನಿರ್ವಾಹಕರು, 357 ಮೆಕ್ಯಾನಿಕ್‌ಗಳು ಇದ್ದಾರೆ. ವಿಭಾಗ ವ್ಯಾಪ್ತಿಯಲ್ಲಿ 538 ಬಸ್ ಇದ್ದು, ಬಿ.ಸಿ. ರೋಡ್-108., ಧರ್ಮಸ್ಥಳ-159 ಮತ್ತು ಮಡಿಕೇರಿ ಡಿಪೋದಲ್ಲಿ 103 ಬಸ್‌ಗಳು ಇವೆ.
Advertisement
ಏನಿದು ಡಲ್ಟ್ ಮಾದರಿನಗರ ಸಾರಿಗೆ ಬಸ್ ಅತ್ಯಾಧುನಿಕ ಸೌಲಭ್ಯವನ್ನು ಒಳಗೊಂಡಿದೆ, ಬಸ್‌ನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಸಿ.ಸಿ ಟಿವಿ ಕ್ಯಾಮರಗಳು, ವಿದ್ಯುತ್ ಸ್ವಯಂಚಾಲಿತ ಬಾಗಿಲು, ಬಾಗಿಲು ತೆರೆದಿರುವಾಗ ವಾಹನ ಚಾಲನೆಯಾಗದೆ, ಬಾಗಿಲು ಮುಚ್ಚಿದಾಗ ಮಾತ್ರ ಚಾಲನೆಯಾಗುವ ವ್ಯವಸ್ಥೆ, ತುರ್ತು ಸಂದರ್ಭದಲ್ಲಿ ಆಪಾಯದ ಸಂದೇಶವನ್ನು ನಿಯಂತ್ರಣ ಕೇಂದ್ರಕ್ಕೆ ಕಳುಹಿಸಲು ಅನುಕೂಲವಾಗುವಂತೆ ಚಾಲಕರು ಬಳಸಬಹುದಾದ ಅಪಾಯ ಗುಂಡಿ, ಚಾಲನಾ ಸುರಕ್ಷತೆಗಾಗಿ ಹಿಂಬದಿ ನೋಟದ ಕ್ಯಾಮರ, ಧ್ವನಿ ಪ್ರಸರಣ ಮತ್ತು ಎಲ್‌ಇಡಿ ಪ್ರದರ್ಶನ ವ್ಯವಸ್ಥೆ, ಪ್ರಯಾಣಿಕರಿಗೆ ಮುಂಬರುವ ನಿಲುಗಡೆಗಳ ಮಾಹಿತಿ, ಆಸರೆ ಕಂಬಗಳಲ್ಲಿ ಪ್ರಯಾಣಿಕರು ಕೋರಿಕೆ ನಿಲುಗಡೆ ಪಡೆಯಲು ನಿಲುಗಡೆ ಗುಂಡಿ, ವಿಶೇಷಚೇತನರು ಹತ್ತಲು ಮತ್ತು ಇಳಿಯಲು ರ್‍ಯಾಂಪ್ ವ್ಯವಸ್ಥೆ ಮೊದಲಾದ ಸೌಲಭ್ಯಗಳು ಡಲ್ಟ್ ಮಾದರಿ ಬಸ್‌ನಲ್ಲಿ ಇರಲಿದೆ ಎಂದು ಸಾರಿಗೆ ಇಲಾಖೆ ಹೇಳಿತ್ತು. – ಕಿರಣ್ ಪ್ರಸಾದ್ ಕುಂಡಡ್ಕ