Advertisement

ದಲಿತರು ಸಹಕಾರ ಕ್ಷೇತ್ರದಲ್ಲಿ ತೊಡಗಿಕೊಳ್ಳಲಿ

12:40 PM Jul 23, 2018 | |

ಮೈಸೂರು: ದಲಿತ ಸಮುದಾಯದವರು ಸಹಕಾರ ಕ್ಷೇತ್ರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಸಹಕಾರ ಕ್ಷೇತ್ರದ ಲಾಭ ಪಡೆಯುವ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಬೇಕಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.
 
ಅಂಬೇಡ್ಕರ್‌ ವಿವಿಧೋದ್ದೇಶ ಸೇವಾ ಸಂಸ್ಥೆ ಮತ್ತು ಅಂಬೇಡ್ಕರ್‌ ವಿವಿಧೋದ್ದೇಶ ಸಹಕಾರ ಸಂಘದಿಂದ ನಗರದ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ 6ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

Advertisement

ಸಹಕಾರ ಕ್ಷೇತ್ರದಲ್ಲಿ ಮೇಲ್ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರೀಯವಾಗಿದ್ದಾರೆ. ಆದರೆ ದಲಿತರು ಮೊದಲಿನಿಂದಲೂ ಸಹಕಾರ ಕ್ಷೇತ್ರದಿಂದ ಹೆಚ್ಚಿನ ಲಾಭ ಪಡೆದಿಲ್ಲ. ಹೀಗಾಗಿ ದಲಿತರು ಸಹ ಮೇಲ್ವರ್ಗದವರಂತೆ ಸಹಕಾರ ಕ್ಷೇತ್ರದ ಪ್ರಯೋಜನ ಪಡೆಯಬೇಕಿದ್ದು,

ಸಹಕಾರ ಕ್ಷೇತ್ರದ ಮೂಲಕ ನಮ್ಮ ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸಿಕೊಳ್ಳಲು ಅವಕಾಶ ಇದೆ. ಈ ನಿಟ್ಟಿನಲ್ಲಿ ದಲಿತರು ಸಹಕಾರ ಕ್ಷೇತ್ರದತ್ತ ಮುಖಮಾಡಿದಾಗ ಮಾತ್ರ ಅವರ ಆರ್ಥಿಕ ಅಭಿವೃದ್ಧಿ ಸಾಧ್ಯವಿದೆ ಎಂದು ಹೇಳಿದರು. 

ಪ್ರಯೋಜನ ಪಡೆಯಿರಿ: ಸಹಕಾರ ಸಂಘ ಎಂದರೆ ದಲಿತರೂ ತಪ್ಪಾಗಿ ತಿಳಿಯಬಾರದು. ಬದಲಿಗೆ ಇದು ನಮ್ಮ ಸಂಘ, ನಮ್ಮ ಸಂಸ್ಥೆ, ನಾವೇ ಸಾಲ ನೀಡುತ್ತಿದ್ದೇವೆ ಎಂದು ಭಾವಿಸಿ ಸಹಕಾರ ಸಂಘಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಿದ್ದು, ಆ ಮೂಲಕ ಸಹಕಾರ ಸಂಘಗಳನ್ನು ನಾವೆಲ್ಲರೂ ಒಟ್ಟಾಗಿ ಸೇರಿ ಬೆಳೆಸಬೇಕಿದೆ. ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡವರೆಲ್ಲರೂ ಸಾಲ ಪಡೆಯುತ್ತಿಲ್ಲ.

ಬದಲಿಗೆ ಸಾಲ ಪಡೆದವರೇ ಹೆಚ್ಚು ಅದರ ಲಾಭ ಪಡೆಯುತ್ತಿದ್ದು, ಈ ಕಾರಣದಿಂದ ಸರ್ಕಾರ ಸಾಲಮನ್ನಾ ಮಾಡಿದರೆ ಅದರ ಪ್ರಯೋಜನವನ್ನು ಕೆಲವರು ಮಾತ್ರವೇ ಪಡೆಯುತ್ತಿದ್ದಾರೆ. ಆದ್ದರಿಂದ ಒಮ್ಮೆ ಸಾಲ ಪಡೆದವರು, ಇತರರಿಗೂ ಅವಕಾಶ ಮಾಡಿಕೊಡಬೇಕಿದ್ದು, ಸಾಲ ಪಡೆದವರು ಸಕಾಲಕ್ಕೆ ಮರು ಪಾವತಿಸುವ ಮೂಲಕ ಸಂಘದ ಬೆಳವಣಿಗೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.

Advertisement

ಪುರಸ್ಕಾರ: ಕಾರ್ಯಕ್ರಮದ ಅಂಗವಾಗಿ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ಪ.ಜಾತಿ, ಪ.ಪಂಗಡದ ಬಿಪಿಎಲ್‌ ಕಾರ್ಡ್‌ ಹೊಂದಿರುವ 500 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಂತೆಯೇ ನಾಗಾಪುರ ದೀûಾ ಭೂಮಿ ಯಾತ್ರೆಯ ನೋಂದಣಿ, ಎವಿಎಸ್‌ಎಸ್‌ ವೆಬ್‌ಸೈಟ್‌ಗೆ ಚಾಲನೆ ಮತ್ತು ಸಹಕಾರ ಸಂಘದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಬಂತೇ ಬೋದಿದತ್ತ, ಬಂತೆ ಬೋದಿರತ್ನ, ಹಿಂದುಳಿದ ವರ್ಗ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ, ಮಾಜಿ ಸಚಿವ ಸತೀಶ್‌ ಜಾರಕಿಹೊಳಿ, ಶಾಸಕ ಅಶ್ವಿ‌ನ್‌ಕುಮಾರ್‌, ಚಾಮರಾಜನಗರ ಜಿಪಂ ಅಧ್ಯಕ್ಷೆ ಶಿವಮ್ಮ ಕೃಷ್ಣ, ಮೈಸೂರು ಜಿಪಂ ಮಾಜಿ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್‌, ಮಾಜಿ ಮೇಯರ್‌ ಪುರುಷೋತ್ತಮ್‌, ಸಂಘ ಅಧ್ಯಕ್ಷ ತುಂಬಲ ರಾಮಣ್ಣ ಇನ್ನಿತರರು ಹಾಜರಿದ್ದರು.

ಚೀನಾ ಮಾದರಿ: ಚೀನಾ ಸಹಕಾರ ತತ್ವದಡಿಯಲ್ಲೇ ಅಭಿವೃದ್ಧಿ ಹೊಂದಿದ ದೇಶವಾಗಿದ್ದು, ನಮ್ಮಲ್ಲಿ ಸಹಕಾರ ಕ್ಷೇತ್ರದ ಮೂಲಕ ಅಭಿವೃದ್ಧಿ ಹೊಂದಬೇಕೆಂಬ ಭಾವನೆ ಕಡಿಮೆ. ಚೀನಾದಲ್ಲಿ ಆಸ್ತಿ ಸಂಪಾದನೆಗೆ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಅಲ್ಲಿನ ಜನರು ಸಹಕಾರ ಕ್ಷೇತ್ರದ ಮೂಲಕ ಅರ್ಥಿಕ ಚಟುವಟಿಕೆ ಹೆಚ್ಚಾಗಿ ಕೈಗೊಳ್ಳುತ್ತಾರೆ.

ಅಲ್ಲಿ ಎಲ್ಲರೂ ಸಹಕಾರ ಕ್ಷೇತ್ರದ ಮೇಲೆ ನಂಬಿಕೆ ಇಟ್ಟು ಅಭಿವೃದ್ಧಿ ಹೊಂದುತ್ತಿದ್ದಾರೆ. ಅದೇ ಹಾದಿಯನ್ನು ನಾವು ಕೂಡ ತುಳಿಯಬೇಕಿದೆ. ಸಹಕಾರ ಕ್ಷೇತ್ರದ ಮೂಲಕ ಪ್ರಗತಿ ಹೊಂದಲು ಸಾಕಷ್ಟು ಅವಕಾಶ ಇರುವುದರಿಂದ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ಕ್ಷೇತ್ರದತ್ತ ಮುಖ ಮಾಡಬೇಕು ಎಂದು ಸಂಸದ ಆರ್‌. ಧ್ರುವನಾರಾಯಣ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next