Advertisement

ಅಮೇಠಿ : ಕತ್ತು ಸೀಳಿ ದಲಿತ ತರುಣಿಯ ಬರ್ಬರ ಹತ್ಯೆ

12:36 PM Apr 12, 2018 | udayavani editorial |

ಅಮೇಠಿ : ಇಲ್ಲಿನ ಸಂಗ್ರಾಮಪುರ ಪೊಲೀಸ್‌ ಠಾಣೆ ವ್ಯಾಪ್ತಿಗೆ ಒಳಪಡುವ ನೈನಾಹ ಬರ್ತಾಲಿ ಗ್ರಾಮದಲ್ಲಿ 22ರ ಹರೆಯದ ದಲಿತ ಮಹಿಳೆಯೋರ್ವಳು ಕತ್ತು ಸೀಳಲ್ಪಟ್ಟು ಕೊಲೆಯಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಕತ್ತು ಸೀಳಲ್ಪಟ್ಟು ಕೊಲೆಗೈಯಲಾದ ಮಹಿಳೆಯ ಶವವು ಆಕೆಯ ಮನೆಯಿಂದ ಸುಮಾರು 100 ಮೀಟರ್‌ ದೂರದಲ್ಲಿ ಇಂದು ಬೆಳಗ್ಗೆ ಪತ್ತೆಯಾಯಿತು. ಈಕೆ ಬಿಎ ಮೊದಲ ವರ್ಷದ ವಿದ್ಯಾರ್ಥಿನಿ ಎಂದು ಗೊತ್ತಾಗಿದೆ.

ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ; ಪ್ರಕರಣದ ತನಿಖೆಗೆ ಪೊಲೀಸ್‌ ತಂಡವನ್ನು ರಚಿಸಲಾಗಿದೆ ಎಂದು ಹೆಚ್ಚುವರಿ ಎಸ್‌ಪಿ ಬಿ ಸಿ ದುಬೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next