Advertisement

ದಲಿತ ಮಹಿಳೆಯ ರೇಪ್‌, ಕೊಲೆ: ಅಪರಾಧಿಗೆ ಮರಣದಂಡನೆ ಶಿಕ್ಷೆ

12:17 PM Dec 14, 2017 | Team Udayavani |

ಕೊಚ್ಚಿ : ಕೇರಳದಲ್ಲಿ ಕಳೆದ ವರ್ಷ ನಡೆದಿದ್ದ 30ರ ಹರೆಯದ ದಲಿತ ಕಾನೂನು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಯಾಗಿರುವ ಅಮೀರುಲ್‌ ಇಸ್ಲಾಮ್‌ ಗೆ ಇಲ್ಲಿನ ನ್ಯಾಯಾಲಯ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿದೆ.

Advertisement

ಅಸ್ಸಾಂ ವಲಸಿಗ ಅಮೀರುಲ್‌ ಇಸ್ಲಾಂ, ಕಾನೂನು ವಿದ್ಯಾರ್ಥಿಯ ಮೇಲೆ ಪೆರಂಬವೂರ್‌ ಸಮೀಪ ಅತ್ಯಾಚಾರ ಎಸಗಿದ್ದ. ಆತನಿಗೆ ಎರ್ನಾಕುಲಂ ಸೆಶನ್ಸ್‌ ಕೋರ್ಟ್‌ ನ್ಯಾಯಾಧೀಶ ಎನ್‌ ಅನಿಲ್‌ ಕುಮಾರ್‌ ಅವರು ಮರಣ ದಂಡನೆಯ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದರು. 

ಕಾನೂನು ವಿದ್ಯಾರ್ಥಿನಿ ಮೇಲಿನ ರೇಪ್‌ ಪ್ರಕರಣ ಅಪರೂಪದಲ್ಲೇ ಅಪರೂಪದ ಪೈಶಾಚಿಕ ಕೃತ್ಯವಾಗಿದ್ದು ವಿಕೃತ ಕಾಮಿಯಾಗಿರುವ ಆರೋಪಿಗೆ ಮರಣ ದಂಡನೆಯನ್ನು ವಿಧಿಸಬೇಕು ಎಂದು ಪ್ರಾಸಿಕ್ಯೂಶನ್‌ ವಾದಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next