Advertisement

Madhya Pradesh: ದಲಿತ ಮತಗಳ ಸೆಳೆಯುವ ತವಕ

11:15 PM Oct 29, 2023 | Pranav MS |

ಮಧ್ಯಪ್ರದೇಶದ ಮೊರೆನಾ 2018ರಲ್ಲಿ ದೊಡ್ಡ ಮಟ್ಟದ ಜಾತಿ ಹಿಂಸಾಚಾರವನ್ನು ಕಂಡ ಲೋಕಸಭಾ ಕ್ಷೇತ್ರ. ಇದು 6 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಸುಪ್ರೀಂ ಕೋರ್ಟ್‌ ಆದೇಶವೊಂದು ಎಸ್‌ಸಿ -ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ನಿಸ್ಸಾರಗೊಳಿಸಲಿದೆ ಎಂಬ ಊಹಾಪೋಹಗಳಿಂದ ಶುರುವಾದ ಗಲಭೆಯು 7 ಮಂದಿಯ ಸಾವಿನಲ್ಲಿ ಅಂತ್ಯಗೊಂಡಿತ್ತು. ಇದರ ಬೆನ್ನಲ್ಲೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಬೆಲೆ ತೆರಬೇಕಾಯಿತು.

Advertisement

ಮೊರೆನಾ ಇರುವಂಥ ಗ್ವಾಲಿಯರ್‌-ಚಂಬಲ್‌ ಪ್ರದೇಶದಲ್ಲಿ ಕಾಂಗ್ರೆಸ್‌ 34ರ ಪೈಕಿ 26 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಅಲ್ಲದೆ ರಾಜ್ಯದ ಒಟ್ಟಾರೆ 35 ಎಸ್‌ಸಿ ಮೀಸಲು ಕ್ಷೇತ್ರಗಳ ಪೈಕಿ 17ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದಿದ್ದರು. ಉಳಿದವುಗಳು ಬಿಜೆಪಿ ತೆಕ್ಕೆಗೆ ಬಂದಿದ್ದವು. ಆದರೆ ಈ ಬಾರಿ ಇಲ್ಲಿನ ರಾಜಕೀಯ ಲೆಕ್ಕಾಚಾರಗಳು ಬದಲಾಗಿವೆ. ಕಾಂಗ್ರೆಸ್‌ನ ಮತಗಳು ಬಿಎಸ್‌ಪಿ, ಎಸ್‌ಪಿ ಮತ್ತು ಆಮ್‌ ಆದ್ಮಿ ಪಕ್ಷದ ಕಡೆಗೆ ಹಂಚಿ ಹೋಗುವ ಸಾಧ್ಯತೆ ಹೆಚ್ಚಿದೆ. ಇನ್ನೊಂದೆಡೆ ಜೆಪಿಯು ವಿವಿಧ ಯೋಜನೆಗಳು, ಸ್ಕೀಮ್‌ಗಳ ಮೂಲಕ ದಲಿತರ ವಿಶ್ವಾಸವನ್ನು ಮತ್ತೆ ಗಳಿಸಲು ಪ್ರಯತ್ನ ಡುತ್ತಿದೆ. ಇಲ್ಲಿನ ಒಟ್ಟಾರೆ ಜನಸಂಖ್ಯೆಯ ಶೇ.16ರಷ್ಟು ದಲಿತರೇ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next