Advertisement

ವಿದ್ಯಾರ್ಥಿ ಹತ್ಯೆಗೆ ದಲಿತ ಸೇನೆ ಖಂಡನೆ

04:38 PM Aug 25, 2022 | Team Udayavani |

ಮಾದನಹಿಪ್ಪರಗಿ: ರಾಜಸ್ಥಾನದಲ್ಲಿ ನಡೆದ ವಿದ್ಯಾರ್ಥಿ ಹತ್ಯೆ ಖಂಡಿಸಿ ದಲಿತ ಸೇನೆ ಸ್ಥಳೀಯ ನಾಡ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿತು.

Advertisement

ಈ ವೇಳೆ ದಲಿತ ಸೇನೆ ವಿದ್ಯಾರ್ಥಿ ಒಕ್ಕುಟದ ಜಿಲ್ಲಾಧ್ಯಕ್ಷ ಶಿವಲಿಂಗಪ್ಪ ದೊಡ್ಡಮನಿ ಮಾತನಾಡಿ, ನೀರಿನ ಮಡಿಕೆ ಮುಟ್ಟಿದನೆಂದು ಶಿಕ್ಷಕನೊಬ್ಬ ದಲಿತ ವಿದ್ಯಾರ್ಥಿ ಹತ್ಯೆ ಮಾಡಿರುವುದು ಅಮಾನವೀಯ ಕೃತ್ಯ. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ದಲಿತ ಸೇನೆ ವಲಯದ ಅಧ್ಯಕ್ಷ ಶಿವಲಿಂಗ ಚೆನ್ನಗುಂಡ ಮಾತನಾಡಿ, ದಲಿತ ವಿದ್ಯಾರ್ಥಿ ಹತ್ಯೆ ಮಾಡಿದ ಶಿಕ್ಷಕನಿಗೆ ಗಲ್ಲು ಶಿಕ್ಷೆಯಾಗಬೇಕೆಂದು ರಾಷ್ಟ್ರಪತಿಗೆ ಮನವಿ ಪತ್ರ ಕಳಿಸಲಾ ಗುವುದು ಎಂದು ಹೇಳಿದರು.

ನಿಂಬಾಳ ಗ್ರಾಮ ಶಾಖೆ ಅಧ್ಯಕ್ಷ ಲಕ್ಷ್ಮಣ ತಳಕೇರಿ ಮನವಿ ಪತ್ರ ಓದಿದರು. ನಾಡಕಾರ್ಯಾಲಯದ ಉಪ ತಹಶೀಲ್ದಾರ್‌ ರವೀಂದ್ರ ಶೇರಿಕಾರ ಮನವಿ ಪತ್ರ ಸ್ವೀಕರಿಸಿದರು. ಕಂದಾಯ ನಿರೀಕ್ಷಕ ರಾಜಕುಮಾರ ಸರಸಂಬಿ, ಮುಖಂಡರಾದ ಹಣಮಂತ ಹೋಳಿಕೇರಿ, ರಮೇಶ ಪಾಟೀಲ ಕೇರೂರ, ಶರಣಬಸಪ್ಪ ಅಂಬೇವಾಡ, ಶಿವಲಿಂಗಪ್ಪ ಅಂಜುಟಗಿ, ಚನ್ನಮಲ್ಲಪ್ಪ ಮುಲಗೆ, ನಿಂಬಾಳ ಚಲಗೇರಾ, ಕೇರೂರ ಗ್ರಾಮ ಶಾಖೆಗಳ ದಲೆತ ಸೇನೆ ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next