Advertisement

ವಾರಾಂತ್ಯಕ್ಕೆ 4.90 ಲಕ್ಷ ಕೋಟಿ ನಷ್ಟ

12:06 AM Sep 24, 2022 | Team Udayavani |

ಹೊಸದಿಲ್ಲಿ/ಮುಂಬಯಿ: ಬಾಂಬೆ ಷೇರು ಪೇಟೆಯಲ್ಲಿ ಹೂಡಿಕೆದಾರರಿಗೆ ವಾರಾಂತ್ಯದಲ್ಲಿ ಭಾರಿ ಆಘಾತ ಉಂಟಾಗಿದೆ. ಶುಕ್ರವಾರದ ದಿನಾಂತ್ಯಕ್ಕೆ ಬಿಎಸ್‌ಇನಲ್ಲಿ ಸೂಚ್ಯಂಕ 1,020.80 ಪಾಯಿಂಟ್ಸ್‌ ಪತನಗೊಂಡು, 58,098.92ರಲ್ಲಿ ಮುಕ್ತಾಯ ವಾಗಿದೆ. ಮಧ್ಯಾಂತರದಲ್ಲಿ ಸೂಚ್ಯಂಕ 1,137.77 ಪಾಯಿಂಟ್ಸ್‌ ವರೆಗೆ ಕುಸಿತ ಕಂಡಿತ್ತು. ಇದರಿಂದಾಗಿ ಬಿಎಸ್‌ಇ ಹೂಡಿಕೆದಾರರಿಗೆ ಬರೋಬ್ಬರಿ 4.90 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ. ಈ ವಾರದಲ್ಲಿ ಸತತ ಮೂರನೇ ದಿನವೂ ಹೂಡಿಕೆದಾರರಿಗೆ ನಷ್ಟ ಉಂಟಾ ಗಿದೆ. ಒಟ್ಟು ಮೂರು ದಿನಗಳಲ್ಲಿ ಹೂಡಿಕೆ ದಾರರಿಗೆ 6.77 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ.

Advertisement

ಇನ್ನು ನಿಫ್ಟಿ ಸೂಚ್ಯಂಕ 302.45 ಪಾಯಿಂಟ್ಸ್‌ ಕುಸಿತ ಅನುಭವಿಸಿದೆ. ಇದರಿಂದಾಗಿ ದಿನಾಂತ್ಯಕ್ಕೆ 17,327.45 ಪಾಯಿಂಟ್ಸ್‌ಗೆ ಸೂಚ್ಯಂಕ ಇಳಿಕೆ ಯಾಗಿದೆ. ಅಮೆರಿಕದ ಫೆಡರಲ್‌ ರಿಸರ್ವ್‌ನ ಬಡ್ಡಿ ದರದಲ್ಲಿ ಸತತವಾಗಿ ಏರಿಕೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನ ಷೇರುಪೇಟೆಯಲ್ಲಿ ಏರಿಳಿತ ಉಂಟಾಗುತ್ತಿದೆ.

ಮತ್ತೆ ರೂಪಾಯಿ ಕುಸಿತ
ಅಮೆರಿಕದ ಡಾಲರ್‌ ಎದುರು ರೂಪಾಯಿ 19 ಪೈಸೆ ಕುಸಿತ ಕಂಡಿದೆ. ಹೀಗಾಗಿ, ದಿನಾಂತ್ಯಕ್ಕೆ 80.98 ರೂ.ಗಳಿಗೆ ಮುಕ್ತಾಯವಾಗಿದೆ. ಸತತ ಮೂರನೇ ಬಾರಿಗೆ ಇಳಿಕೆಯ ಹಂತವನ್ನು ರೂಪಾಯಿ ಅನುಭವಿಸುತ್ತಿದೆ. ಒಟ್ಟಾರೆಯಾಗಿ ಮೂರು ದಿನಗಳ ಅವಧಿಯಲ್ಲಿ 124 ಪೈಸೆ ಇಳಿಕೆಯಾಗಿದೆ. ಗುರುವಾರ 90 ಪೈಸೆ ಕುಸಿತವನ್ನು ರೂಪಾಯಿ ಕಂಡಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next