ನವದೆಹಲಿ: ಟಿಬೆಟಿಯನ್ ಆಧ್ಯಾತ್ಮಿಕ ಮುಖಂಡ ದಲೈ ಲಾಮಾ ಅವರ ಭದ್ರತೆಗಾಗಿ ಸುಮಾರು 12 ವರ್ಷಗಳಿಂದ ನಿಯೋಜನೆಗೊಂಡಿದ್ದ ಶ್ವಾನ 1,550 ರೂಪಾಯಿಗೆ ಮಾರಾಟವಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಟಾಪ್ ಲೆಸ್ ನಲ್ಲಿ ಬಾಯ್ ಫ್ರೆಂಡ್‌ನನ್ನು ಅಪ್ಪಿಕೊಂಡು ಬರ್ತ್ ಡೇ ವಿಶ್ ಮಾಡಿದ ನಟಿ ಪಾಯಲ್
ದಲೈಲಾಮಾ ಅವರ ಭದ್ರತೆಗಾಗಿ ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ನಿಯೋಜನೆಗೊಂಡಿದ್ದ “ಡುಕಾ” ಎಂಬ ಸ್ನಿಫ್ಪರ್ ಲ್ಯಾಬ್ರಡಾರ್ ಶ್ವಾನವನ್ನು ಈ ವಾರ ಹರಾಜಿಗೆ ಹಾಕಲಾಯಿತು ಎಂದು ಹಿಮಾಚಲಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಈ ಶ್ವಾನ(ಡುಕಾ)ವನ್ನು ಪೊಲೀಸರು ದಲೈಲಾಮಾ ಅವರ ಅಧಿಕೃತ ನಿವಾಸದಲ್ಲಿ ಗಸ್ತು ತಿರುಗಲು ಮತ್ತು ಸ್ಫೋಟಕ ಪತ್ತೆ ಹಚ್ಚಲು ಬಳಸಿಕೊಂಡಿದ್ದರು. ಡುಕಾ ಶ್ವಾನ ವಿಶೇಷವಾಗಿ ಸ್ಫೋಟಕದ ಬಗ್ಗೆ ಎಚ್ಚರಿಸುವ ತರಬೇತಿ ಪಡೆದಿತ್ತು ಎಂದು ದಲೈಲಾಮಾ ಅವರ ಭದ್ರತೆಗೆ ನಿಯೋಜಿತರಾಗಿರುವ ಡೆಪ್ಯುಟಿ ಸೂಪರಿಟೆಂಡೆಂಟ್ ಆಫ್ ಪೊಲೀಸ್ ನಿತೀನ್ ಚೌಹಾಣ್ ತಿಳಿಸಿದ್ದಾರೆ.
ಡುಕಾ ದಲೈಲಾಲಾ ಅವರ ಅತ್ಯಂಕ ನಂಬಿಕಸ್ಥ ಶ್ವಾನವಾಗಿತ್ತು ಎಂದು ಚೌಹಾಣ್ ಐಎಎನ್ ಎಸ್ ಗೆ ಮಾಹಿತಿ ನೀಡಿದ್ದಾರೆ. ಇದೀಗ ದಲೈಲಾಮಾ ಅವರ ರಕ್ಷಣೆಗಾಗಿ 9 ತಿಂಗಳ ಟಾಮಿಯನ್ನು ನಿಯೋಜಿಸಲಾಗಿದೆ. 3 ಲಕ್ಷ ರೂಪಾಯಿಗೆ ಖರೀದಿಸಿರುವ ಟಾಮಿಗೆ ಪಂಜಾಬ್ ಗೃಹರಕ್ಷಕ ದಳ ತರಬೇತಿ ನೀಡಿರುವುದಾಗಿ ವರದಿ ವಿವರಿಸಿದೆ.
2010ರಲ್ಲಿ 7 ತಿಂಗಳ ಡುಕಾ ನಾಯಿ ಮರಿಯನ್ನು ಸೇನಾ ತರಬೇತಿ ಕೇಂದ್ರದಿಂದ 1.23 ಲಕ್ಷ ರೂಪಾಯಿ ಖರೀದಿಸಲಾಗಿತ್ತು. ಪ್ರಾಥಮಿಕ ತರಬೇತಿಯ ನಂತರ ಡುಕಾ ಶ್ವಾನವನ್ನು ದಲೈಲಾಮಾ ಅವರ ಭದ್ರತೆಗೆ ನಿಯೋಜಿಸಲಾಗಿದ್ದು, ಡುಕಾ ಯೋಧನಂತೆ ಸೇವೆ ಸಲ್ಲಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
12 ವರ್ಷಗಳಿಂದ ಸೇವೆ ಸಲ್ಲಿಸಿದ್ದ ಡುಕಾ ಶ್ರವಣ ಶಕ್ತಿ ಕಳೆದುಕೊಂಡಿದ್ದು, ಇದೀಗ ಹರಾಜಿನಲ್ಲಿ ರಾಜೀವ್ ಕುಮಾರ್ ಎಂಬವರು 1,550 ರೂಪಾಯಿಗೆ ಶ್ವಾನವನ್ನು ಖರೀದಿಸಿರುವುದಾಗಿ ವರದಿ ಹೇಳಿದೆ.