Advertisement

ಮಹಿಳೆಯರ ಕುರಿತ ಹೇಳಿಕೆ: ದಲಾಯಿ ಲಾಮಾ ವಿಷಾದ, ಕ್ಷಮೆ ಯಾಚನೆ

11:49 AM Jul 03, 2019 | Sathish malya |

ಧರ್ಮಶಾಲಾ : ಬಿಬಿಸಿ ಸಂದರ್ಶನದಲ್ಲಿ ಮಹಿಳೆಯರ ಕುರಿತಾಗಿ ತಾನು ನೀಡಿದ್ದ ಹೇಳಿಕೆಗೆ ಬೌದ್ಧ ಧರ್ಮ ಗುರು ದಲಾಯಿ ಲಾಮಾ ವಿಷಾದ ವ್ಯಕ್ತಪಡಿಸಿದ್ದಾರೆ.

Advertisement

‘ನಿಮ್ಮ ಮುಂದಿನ ಅವತಾರವು ಮಹಿಳೆಯ ರೂಪದಲ್ಲಿ ಇದ್ದೀತೇ’ ಎಂಬ ಪ್ರಶ್ನೆಗೆ ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ದಲಾಯಿ ಲಾಮಾ ಅವರು ‘ಆಕೆ ನೋಡಲು ಸುಂದರಿಯಾಗಿರಬೇಕು’ ಎಂದು ಹಾಸ್ಯಭರಿತವಾಗಿ ಹೇಳಿದ್ದರು.

“ದಲಾಯಿ ಲಾಮಾ ಅವರು ಆ ರೀತಿ ಹೇಳಿರುವಲ್ಲಿ ಯಾವುದೇ ದುರಭಿಪ್ರಾಯ ಇದ್ದಿರಲಿಲ್ಲ; ಹಾಸ್ಯ ಭರಿತವಾಗಿ ಅವರು ಆ ಹೇಳಿಕೆ ನೀಡಿದ್ದರು. ಆದರೂ ಆ ಹೇಳಿಕೆ ಜನರ ಮನೋಭಾವನೆಯನ್ನು ನೋಯಿಸಿರುವುದಕ್ಕೆ ದಲಾಯಿ ಲಾಮಾ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದಾರೆ’ ಎಂದು ದಲಾಯಿ ಲಾಮಾ ಅವರ ಇಲ್ಲಿನ ಕಾರ್ಯಾಲಯ ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.

ಐರೋಪ್ಯ ದೇಶಗಳಲ್ಲಿ ಹೆಚ್ಚುತ್ತಿರುವ ಅಕ್ರಮ ವಲಸಿಗರ ಸಮಸ್ಯೆಯ ಬಗ್ಗೆ ದಲಾಯಿ ಲಾಮಾ ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ತಿಳಿಯಲಾಗಿದೆಎಂದು ಕಾರ್ಯಾಲಯ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next