Advertisement

ಮಹಾ ಬೋಧಿ ದೇವಸ್ಥಾನಕ್ಕೆ ದಲಾಯಿ ಲಾಮಾ ಭೇಟಿ

04:27 PM Jan 02, 2018 | udayavani editorial |

ಗಯಾ, ಬಿಹಾರ : 2,500 ವರ್ಷಗಳ ಹಿಂದೆ ಗೌತಮ ಬುದ್ಧ ನಿಗೆ ಜ್ಞಾನೋದಯವಾದ ಬೋಧ್‌ ಗಯಾ ದಲ್ಲಿನ ಮಹಾ ಬೋಧಿ ದೇವಸ್ಥಾನದಲ್ಲಿ ಟಿಬೆಟ್‌ ಆಧ್ಯಾತ್ಮಿಕ ನಾಯಕ, ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ, ದಲಾಯಿ ಲಾಮಾ ಅವರಿಂದು ಪ್ರಾರ್ಥನೆ ಸಲ್ಲಿಸಿದರು.

Advertisement

ಬುದ್ಧನು ಜ್ಞಾನೋದಯ ಪಡೆದ ಬಳಿಕ ಮೊದಲ ಉಪನ್ಯಾಸ ನೀಡಿದ ತಾಣವಾದ ವಾರಾಣಸಿ ಸಾರಾನಾಥ ಪ್ರವಾಸವನ್ನು ಮುಗಿಸಿ ನಿನ್ನೆ ಸೋಮವಾರ ಇಲ್ಲಿಗೆ ಆಗಮಿಸಿದ ದಲಾಯಿ ಲಾಮಾ ಅವರು ಇಂದು ಮಂಗಳವಾರ ಬೆಳಗ್ಗೆ 10 ಗಂಟೆಯ ಹೊತ್ತಿಗೆ ಮಹಾ ಬೋಧಿ ದೇವಸ್ಥಾನವನ್ನು ಸಂದರ್ಶಿಸಿದರು. ದೇವಾಸ್ಥನದ ಅಧಿಕಾರಿಗಳ ಪರವಾಗಿ ದಲಾಯಿ ಲಾಮಾ ಅವರಿಗೆ ಸಾಂಪ್ರದಾಯಿಕ ಶಾಲನ್ನು  ಅರ್ಪಿಸಲಾಯಿತು. 

ದಲಾಯಿ ಲಾಮಾ ಅವರು ಸುಮಾರು 30 ನಿಮಿಷಗಳ ಕಾಲ ದೇವಳದ ಗರ್ಭಗುಡಿಯಲ್ಲಿದ್ದುಕೊಂಡು ಪ್ರಾರ್ಥನೆ, ಧ್ಯಾನಲ್ಲಿ ನಿರತರಾದರು ಎಂದು ಬೋಧ ಗಯಾ ದೇವಳದ ಆಡಳಿತ ಮಂಡಳಿ ಸದಸ್ಯ ಅರವಿಂದ ಕುಮಾರ್‌ ಸಿಂಗ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next