Advertisement

ನೆಹರು ಕುರಿತ ಆತ್ಮಕೇಂದ್ರಿತ ಹೇಳಿಕೆಗೆ ದಲೈಲಾಮಾ ಕ್ಷಮೆ

06:15 AM Aug 11, 2018 | Team Udayavani |

ಬೆಂಗಳೂರು: ಮಾಜಿ ಪ್ರಧಾನಿ ಪಂಡಿತ್‌ ಜವಾಹರಲಾಲ್‌ನೆಹರು ಅವರು ಆತ್ಮ ಕೇಂದ್ರಿತ  ಸ್ವಭಾವ ಹೊಂದಿದ್ದರು ಎಂಬ ಹೇಳಿಕೆಗೆ ಟಿಬೆಟ್‌ ಧರ್ಮಗುರು ದಲೈಲಾಮಾ ಕ್ಷಮೆ ಕೇಳಿದ್ದಾರೆ. 

Advertisement

ನಗರದಲ್ಲಿ ಶುಕ್ರವಾರ ಟಿಬೆಟಿಯನ್ನರು ಹಮ್ಮಿಕೊಂಡಿದ್ದ  ಧನ್ಯವಾದ ಕರ್ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇನಾದರೂ ತಪ್ಪು ಹೇಳಿದ್ದರೆ ಹಾಗೂ ನನ್ನ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದರೆ,  ಕ್ಷಮೆ ಕೇಳುತ್ತೇನೆ ಎಂದು ಹೇಳಿದರು. 

ಈಚೆಗೆ ಗೋವಾ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ ಸಂಖಾಲಿಂನಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ದಲೈಲಾಮಾ ಅವರು, ಮೊಹಮ್ಮದ್‌ ಅಲಿ ಜಿನ್ನಾ ಪ್ರಧಾನಿಯಾಗಲಿ ಎಂದು ಗಾಂಧೀಜಿ ಬಯಸಿದ್ದರು. ಆದರೆ, ನೆಹರು ಅವರ ಆತ್ಮ ಕೇಂದ್ರಿತ ಸ್ವಭಾವದಿಂದ ತಮ್ಮ ಅಭಿಪ್ರಾಯ ಬದಲಿಸಿದರು ಎಂದು ಹೇಳಿದ್ದರು. ಇದು ವಿವಾದದ ಕಿಡಿ ಹೊತ್ತಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next