Advertisement
ಸೌದಿ ಅರೇಬಿಯಾದಿಂದ ಜೂ. 11ರಂದು ಆಗಮಿಸಿ ಕ್ವಾರಂಟೈನ್‌ನಲ್ಲಿದ್ದ 30 ವರ್ಷದ ಯುವಕ, ಕುವೈಟ್‌ನಿಂದ ಜೂ. 17ರಂದು ಆಗಮಿಸಿ ಕ್ವಾರಂಟೈನ್‌ನಲ್ಲಿದ್ದ 57 ವರ್ಷದ ವ್ಯಕ್ತಿ, ಮುಂಬಯಿಯಿಂದ ಜೂ. 9ರಂದು ಆಗಮಿಸಿ ಕ್ವಾರಂಟೈನ್‌ನಲ್ಲಿದ್ದ 21 ವರ್ಷದ ಯುವಕ ಹಾಗೂ ಈ ಹಿಂದೆ ಕೋವಿಡ್ ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 21 ವರ್ಷದ ಯುವಕನಿಗೆ ಕೋವಿಡ್ ದೃಢಪಟ್ಟಿದೆ. ಸೋಂಕು ಪೀಡಿತರನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 70 ವರ್ಷದ ವೃದ್ಧ ಮಧುಮೇಹ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರಿಗೆ ಐಸಿಯು ವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 52 ವರ್ಷದ ವ್ಯಕ್ತಿ ಮಧುಮೇಹ ಮತ್ತು ಅಬುìದ ರೋಗದಿಂದ ಬಳಲುತ್ತಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Related Articles
ಕೋವಿಡ್ ಆಸ್ಪತ್ರೆಯಲ್ಲಿ ಗುರುವಾರ ಸ್ವೀಕರಿಸಲಾದ 121 ಮಂದಿಯ ಗಂಟಲ ದ್ರವ ಮಾದರಿ ಪರೀಕ್ಷೆ ವರದಿ ಪೈಕಿ 4 ಪಾಸಿಟಿವ್, 117 ನೆಗೆಟಿವ್ ಆಗಿವೆ.
ಹೊಸದಾಗಿ 116 ಮಂದಿಯ ಮಾದರಿಯನ್ನು ಪರೀಕ್ಷೆಗೆ ಕಳುಹಿಸ ಲಾಗಿದ್ದು, ಈ ಹಿಂದಿನ 56 ಮಂದಿಯ ಪರೀಕ್ಷಾ ವರದಿಗಳು ಬರಲು ಬಾಕಿ ಇವೆ.
Advertisement
ಮನೆ ಬಿಡದ ವೃದ್ಧನಿಗೂ ತಗಲಿದ ಸೋಂಕು!ಪುತ್ತೂರು: ಜ್ವರ, ಕೆಮ್ಮು, ಶೀತದ ಕಾರಣಕ್ಕೆ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಚಿಕ್ಕಮುಟ್ನೂರು ರಾಗಿದಕುಮೇರಿನ ವೃದ್ಧರೊಬ್ಬರಿಗೆ ಕೋವಿಡ್ ಸೋಂಕು ತಗಲಿರುವುದು ಶನಿವಾರ ದೃಢಪಟ್ಟಿದೆ. ಅವರು ಹೊರದೇಶ ಅಥವಾ ಹೊರ ರಾಜ್ಯ ದಿಂದ ಬಂದವರಲ್ಲ. ಕೋವಿಡ್ ಸೋಂಕು ಪೀಡಿತ ವ್ಯಕ್ತಿಗಳ ಅಥವಾ ಪರಿಸರದ ಯಾರ ಸಂಪರ್ಕವನ್ನೂ ಹೊಂದಿದವರಲ್ಲ. ಮನೆಯಲ್ಲೇ ಇದ್ದ ಅವರನ್ನು ಕೊರೊನಾ ಬಾಧಿಸಿರುವುದು ಹೇಗೆ ಎಂದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಸೋಂಕಿನ ಮೂಲ ವನ್ನು ಶೋಧಿಸಲಾಗುತ್ತಿದೆ. ಅವರನ್ನು ಮಂಗಳೂರು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಈ ವ್ಯಕ್ತಿ ನಗರಸಭೆ ಸದಸ್ಯೆಯೋರ್ವರ ಮಾವನಾಗಿದ್ದು, ಒಂದೇ ಮನೆಯಲ್ಲಿ ವಾಸವಾಗಿದ್ದರು. ಪಾಸಿಟಿವ್ ಕಂಡು ಬಂದ ಕಾರಣ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಜನಪ್ರತಿನಿಧಿ ಹಾಗೂ ಅವರ ಸಂಪರ್ಕದಲ್ಲಿದ್ದ ಇತರರನ್ನು ಗುರುತಿಸಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ನಗರಸಭಾ ಸದಸ್ಯೆಯ ಗಂಟಲ ದ್ರವ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಪರೀಕ್ಷಾ ವರದಿ ಇನ್ನಷ್ಟೇ ಬರಬೇಕಿದೆ.