Advertisement

ಪೂರೈಕೆ ಸರಪಳಿ ಕಡಿತವೇ ಮೊದಲ ಗುರಿ

01:04 AM Mar 01, 2023 | Team Udayavani |

ಮಾದಕ ವಸ್ತು ಮಾರಾಟ ಜಾಲದ ಸರಪಳಿಯನ್ನು ಕಡಿಯುವ ಪ್ರಾಥಮಿಕ ಹೊಣೆಗಾರಿಕೆ ಪೊಲೀಸರದ್ದೇ. ಆದರೆ ಅವರಿಗೆ ಎಲ್ಲರ ಸಹಕಾರ ಅವಶ್ಯ. ಈ ಎಲ್ಲರೂ ಎಂಬ ವರ್ಗದಲ್ಲಿ ಶಿಕ್ಷಣ ಸಂಸ್ಥೆಗಳು, ನಾಗರಿಕರು, ಸಮಾಜ ಹಾಗೂ ಜನಪ್ರತಿನಿಧಿಗಳು ಸೇರುತ್ತಾರೆ. ಇವರಲ್ಲಿ ಯಾರೇ ಒಬ್ಬರೂ ಉದಾಸೀನ ಅಥವಾ ನಿರ್ಲಕ್ಷ್ಯ ತೋರಿದರೂ ಸಮಸ್ಯೆಯನ್ನು ತಾರ್ಕಿಕ ಅಂತ್ಯಕ್ಕೆ ತಲುಪಿಸಲಾಗದು. ಹಾಗಾಗಿ ಇನ್ನು ವಿಳಂಬ ಸಲ್ಲದು.

Advertisement

ಉಡುಪಿ: ಈಗಾಗಲೇ ವಿವರಿಸಿರುವಂತೆ ಮಾದಕ ವಸ್ತು ವಿನ ಮಾರಾಟ ಜಾಲದ ದಂಧೆ ಕೋರರು (ಡ್ರಗ್ಸ್‌ ಪೆಡ್ಲರ್‌ಗಳು) ನಾವಂದುಕೊಂಡುವಂತೆ ಊರಿನ ಬಾಗಿಲ ಎದುರು ನಿಂತಿಲ್ಲ, ಬದಲಾಗಿ ನಮ್ಮ ಅಂಗಳಕ್ಕೇ ಬಂದು ಬಿಟ್ಟಿದ್ದಾರೆ!

ಇದು ಆತಂಕದ ಸಂಗತಿ. ಆಘಾತ ಕರವಾದುದೂ ಸಹ. ಈ ಮಾದಕ ವಸ್ತು ಪೂರೈಕೆ ಸರಪಳಿ ಯನ್ನು ಕಡಿಯಲು ಶಿಕ್ಷಣ ಸಂಸ್ಥೆಗಳು, ಜಿಲ್ಲಾ ಡಳಿತ, ಜನಪ್ರತಿನಿಧಿಗಳು, ಸಮಾಜ ಹಾಗೂ ಪೊಲೀಸರು ಸಜ್ಜಾಗಬೇಕಿದೆ.

ಉಡುಪಿ ಜಿಲ್ಲೆಯಲ್ಲಿ ನಶಾ ಮುಕ್ತ ಅಭಿಯಾನದ ಮೂಲಕ ಹಲವು ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಲಾಗಿದೆ. ಅಷ್ಟೇ ಏಕೆ? ಕಾಲೇಜೊಂದರ 42 ಮಂದಿ ವಿದ್ಯಾರ್ಥಿಗಳನ್ನು ಅಮಾ ನತು ಮಾಡಲಾಗಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಕೆ ಅಕ್ಷಯ್‌ ಮಚ್ಚೀಂದ್ರ ಅವರು ಹೇಳುವಂತೆ, ಮಣಿಪಾಲ ಠಾಣೆ ವ್ಯಾಪ್ತಿಯಲ್ಲಿ ಹಲವು ಡ್ರಗ್ಸ್‌ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಈ ಕಾರ್ಯಾ
ಚರಣೆಯಲ್ಲಿ ಹಲವು ದಂಧೆ ಕೋರರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

Advertisement

ಪೆಡ್ಲರ್‌ಗಳ ವ್ಯವಹಾರದ ವಿವರ ವನ್ನು ಕಲೆ ಹಾಕಲಾಗುತ್ತಿದ್ದು, ಗ್ರಾಹ ಕರು ಹಾಗೂ ನಂತರದ ಸರಪಳಿಯ ಆಳ ಅಗಲವನ್ನು ಅಳೆಯಲಾಗುತ್ತಿದೆ.

ಉಡುಪಿ ಜಿಲ್ಲೆಯ ಕೆಲವು ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಕೂಡ ಪೆಡ್ಲರ್‌ಗಳಾಗಿದ್ದು, ಅವರಿಂದ ಹೆಚ್ಚಿನ ಪ್ರಮಾಣದ ಮಾದಕ ವಸ್ತುಗಳನ್ನು ಪತ್ತೆ ಮಾಡಲಾಗಿತ್ತು. ಕಾಲೇಜು ಮತ್ತು ಹಾಸ್ಟೆಲ್‌ ಆವ ರಣದಲ್ಲಿ ಡ್ರಗ್ಸ್‌ ವ್ಯವಹಾರ ನಡೆದ ಬಗ್ಗೆ ವಿದ್ಯಾರ್ಥಿಗಳನ್ನು ಗುರುತಿಸಿ ಪಟ್ಟಿ ನೀಡಿದ್ದೇವೆ. ಪರೀಕ್ಷೆ ಮೂಲಕ ಸಾಬೀತಾದ‌ ಪ್ರಕರಣಗಳ ವಿವರ ವನ್ನು ಆಯಾ ಶಿಕ್ಷಣ ಸಂಸ್ಥೆಗೆ ನೀಡಲಾಗಿದೆ. ಈ ವಿಷಯದಲ್ಲಿ ಪೊಲೀಸ್‌ ಇಲಾಖೆ ಹಾಗೂ ಶಿಕ್ಷಣ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎನ್ನುತ್ತಾರೆ ಉಡುಪಿ ಎಸ್‌ ಪಿ ಯವರು. ಇದೇ ಪರಿಸ್ಥಿತಿ ಮಂಗಳೂರಿನಲ್ಲೂ ಇದೆ.

ಸಮಾಧಾನಕರ ಸಂಗತಿಯೆಂದರೆ, ಡ್ರಗ್ಸ್‌ ವಿರುದ್ಧ ಸಮರ ಸಾರಲು ಈಗ ಕೆಲವು ಶಿಕ್ಷಣ ಸಂಸ್ಥೆಗಳು ಪೊಲೀಸರೊಂದಿಗೆ ಕೈ ಜೋಡಿಸಿವೆ. ಈ ಪ್ರಯತ್ನ ಯಶಸ್ವಿಯಾದಲ್ಲಿ, ಮಾದಕ ವಸ್ತು ಮಾರಾಟ ಜಾಲವನ್ನು ಶಾಲೆಯ ಆವರಣದಿಂದ ಹೊರಗಟ್ಟಬಹುದು. ಬಳಿಕ ಊರಿಂದಲೇ ಹೊರಗೆ ಅಟ್ಟಲು ಎಲ್ಲರೂ ಒಟ್ಟಾಗಬೇಕಿದೆ.

ಪೂರೈಕೆ ಸರಪಳಿ ಕಡಿಯವುದು ಹೇಗೆ?
ಪೆಡ್ಲರ್‌ಗಳು ಆರಂಭದಲ್ಲಿ ಒಬ್ಬ ಗ್ರಾಹಕನನ್ನು ಹುಡುಕುತ್ತಾರೆ. ಅವನ ಮೂಲಕ ಅವನ ಸ್ನೇಹಿತ ವರ್ಗ, ಸುತ್ತಮುತ್ತಲಿನ ವ್ಯಸನಿಗಳನ್ನು ಪಟ್ಟಿ ಮಾಡಿ ಅವರಿಗೂ ಇವನ ಮೂಲಕ ಮಾದಕ ವಸ್ತುಗಳನ್ನು ಪೂರೈಸುತ್ತಾರೆ. ಆ ಮೂಲಕ ತಮ್ಮ ಪೂರೈಕೆ ಸರಪಳಿಯನ್ನು ವಿಸ್ತರಿಸುತ್ತಾರೆ. ಇದು ಸಾಮಾನ್ಯವಾಗಿ ಇಂಥ ಅಕ್ರಮ ಜಾಲ ನಡೆಯುವ ಕ್ರಮ. ಒಂದು ಸಂದರ್ಭದಲ್ಲಿ ಗ್ರಾಹಕರಾದವರೇ ನಂತರ ಸಬ್‌ ಡೀಲರ್‌ಗಳ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಇತ್ತೀಚೆಗೆ ಮಂಗಳೂರು ಮತ್ತಿತರ ಕಡೆ ಸಿಕ್ಕಿಬಿದ್ದ ವಿದ್ಯಾರ್ಥಿಗಳ ವಿವರ ಗಮನಿಸಿದರೆ ಇದು ಹೌದೆಂಬುದು ಸಾಬೀತಾಗಿದೆ.

ಪ್ರಮುಖ ಗುರಿ
ಡ್ರಗ್ಸ್‌ ಪೆಡ್ಲರ್‌ಗಳು ತಮ್ಮ ಗ್ರಾಹಕರಾಗಿ ಹೆಚ್ಚಾಗಿ ಹುಡುಕುವುದು ವಿದ್ಯಾರ್ಥಿ ಗಳು, ಐಟಿ-ಬಿಟಿ ಉದ್ಯೋಗಸ್ಥರು, ಕೆಲವು ಆಟೋ, ಟಾಕ್ಸಿ ಚಾಲಕರು ಹಾಗೂ ವಿದೇಶೀ ಪ್ರವಾಸಿಗರನ್ನೇ. ಕಾಲೇಜು, ಕೊಳೆಗೇರಿ ಪ್ರದೇಶ, ನೂತನವಾಗಿ ನಿರ್ಮಿಸುತ್ತಿರುವ ಹಾಗೂ ಹಳೆಯ ಪಾಳು ಕಟ್ಟಡಗಳ ಆವರಣ, ಕ್ಲಬ್‌ಗಳು, ಪ್ರವಾಸಿ ತಾಣಗಳೂ ಈಗ ಡ್ರಗ್ಸ್‌ ಸೇವನೆ ಹಾಗೂ ಮಾರಾಟದ ತಾಣ ಗಳಾಗುತ್ತಿವೆ. ಕ್ರಮೇಣ ಇವು ಅನೈತಿಕ ಚಟುವಟಿಕೆಗಳ ತಾಣಗಳಾಗುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next