Advertisement
ನೂತನ ಲೋಕಾಯುಕ್ತ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಲೋಕಾಯುಕ್ತದ ಮಂಗಳೂರು ವಿಭಾಗವು ದ.ಕ. ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿದೆ. ಈಗಾಗಲೇ ಎಸಿಬಿಯಲ್ಲಿರುವ ಹಳೆಯ ಪ್ರಕರಣಗಳನ್ನು ಲೋಕಯುಕ್ತಕ್ಕೆ ವರ್ಗಾವಣೆ ಮಾಡುವ ಕಾರ್ಯ ನಡೆಯುತ್ತಿದೆ. ವರ್ಗಾವಣೆಯಾದ ಬಳಿಕ ಇರುವ ಪ್ರಕರಣಗಳ ತನಿಖೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಈಗಾಗಲೇ ಮಂಗಳೂರು ವಿಭಾಗದಲ್ಲಿ 2 ಡಿವೈಎಸ್ಪಿ ಹಾಗೂ 1 ಇನ್‌ಸ್ಪೆಕ್ಟರ್ ಹುದ್ದೆ ಇದ್ದರೆ 1 ಇನ್‌ಸ್ಪೆಕ್ಟರ್ ಹಾಗೂ 6 ಪಿಸಿಗಳ ಹುದ್ದೆಗಳು ಖಾಲಿ ಉಳಿದಿವೆ. ಉಡುಪಿಯಲ್ಲಿ 1 ಡಿವೈಎಸ್ಪಿ ಹಾಗೂ 1 ಇನ್‌ಸ್ಪೆಕ್ಟರ್ ಹುದ್ದೆಗಳಿದ್ದು 1 ಇನ್‌ಸ್ಪೆಕ್ಟರ್ ಹುದ್ದೆ ಖಾಲಿಯಿದೆ. ಅವುಗಳನ್ನು ಶೀಘ್ರದಲ್ಲಿಯೇ ಭರ್ತಿ ಮಾಡಲಾಗುತ್ತದೆ ಎಂದರು.
Related Articles
Advertisement
ಲೋಕಾಯುಕ್ತಕ್ಕೆ ಈಗ ಹೆಚ್ಚಿನ ಅಧಿಕಾರ ನೀಡುವ ಜತೆಯಲ್ಲಿ ಪಿಸಿ ಕಾಯಿದೆ(ಭ್ರಷ್ಟಾಚಾರ ನಿರ್ಮೂಲನೆ ಕಾಯಿದೆ)ಯ ಹೊಣೆಗಾರಿಕೆ ಕೂಡ ಲೋಕಾಯುಕ್ತಕ್ಕೆ ಬಂದಿದ್ದು, ಪೊಲೀಸ್ ಠಾಣೆಯ ರೀತಿಯಲ್ಲಿ ಇನ್ನು ಮುಂದೆ ಲೋಕಾಯುಕ್ತ ಕಾರ್ಯಾಚರಣೆ ನಡೆಸುತ್ತದೆ. ಭ್ರಷ್ಟಾಚಾರದ ವಿರುದ್ಧ ದೂರು ನೀಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಎಸಿಬಿಗಿಂತ ಮೊದಲು ಲೋಕಾಯುಕ್ತ ಇದ್ದಾಗ ಮಂಗಳೂರು ವಿಭಾಗದಲ್ಲಿ 12 ಪ್ರಕರಣಗಳಿಗೆ ಶಿಕ್ಷೆ ವಿಧಿಸ ಲಾಗಿತ್ತು ಎಂದು ಮಾಹಿತಿ ನೀಡಿದರು.
ಲೋಕಾಯುಕ್ತದ ಉಡುಪಿ ಡಿವೈಎಸ್ಪಿ ಜಗದೀಶ್, ಮಂಗಳೂರು ಡಿವೈಎಸ್ಪಿಗಳಾದ ಚಲುವರಾಜು ಹಾಗೂ ಕಲಾವತಿ, ಉಡುಪಿ ಇನ್‌ಸ್ಪೆಕ್ಟರ್ ಜಯರಾಮ ಡಿ. ಗೌಡ ಹಾಗೂ ಮಂಗಳೂರು ಇನ್‌ಸ್ಪೆಕ್ಟರ್ ಅಮಾನುಲ್ಲಾ ಉಪಸ್ಥಿತರಿದ್ದರು.