Advertisement

ಮಂಗಳೂರು: ಕಡಲಲ್ಲಿ ಕಂಡು ಬಾರದ ಅಬ್ಬರ

11:52 PM Feb 16, 2023 | Team Udayavani |

ಮಂಗಳೂರು: ಕರ್ನಾಟಕ ಕರಾವಳಿ ಸೇರಿದಂತೆ ಕೇರಳ, ಲಕ್ಷದ್ವೀಪ ತಮಿಳುನಾಡು, ಮಹಾರಾಷ್ಟ್ರ, ಗೋವಾ ರಾಜ್ಯಗಳ ತೀರ ಪ್ರದೇಶದಲ್ಲಿ ಕಡಲು ಪ್ರಕ್ಷಬ್ಧವಾಗಿ ಅಬ್ಬರ ಹೆಚ್ಚಿರುವ ಸಾಧ್ಯತೆಯಿದೆ ಎಂದು ಕೇಂದ್ರ ಸಮುದ್ರ ಸ್ಥಿತಿ ಅಧ್ಯಯನ ಕೇಂದ್ರ (ಐಎನ್‌ಸಿಒಐಎಸ್‌) ಎಚ್ಚರಿಕೆ ನೀಡಿದೆಯಾದರೂ ಗುರುವಾರ ಸಮುದ್ರ ಶಾಂತವಾಗಿತ್ತು.

Advertisement

ಎಚ್ಚರಿಕೆ ಇತ್ತು, ಆದರೆ ಮೀನುಗಾರಿಕೆಗೆ ತೆರಳಿದ ಸಂದರ್ಭ ಸಮುದ್ರದಲ್ಲಿ ಯಾವುದೇ ರೀತಿಯ ಅಬ್ಬರ ಇರಲಿಲ್ಲ ಎಂದಿನಂತೆ ಶಾಂತವಾಗಿಯೇ ಇತ್ತು ಎಂದು ಮೀನುಗಾರರು ತಿಳಿಸಿದ್ದಾರೆ. ಈ ನಡುವೆ ಶುಕ್ರವಾರವೂ ಕಡಲಬ್ಬರ ಇರಲಿದೆ ಎಂದು ಐಎನ್‌ಸಿಒಐಎಸ್‌ ಪ್ರಕಟನೆಯಲ್ಲಿ ತಿಳಿಸಿದ್ದು, 1.2ರಿಂದ 1.8 ಮೀ. ಎತ್ತರದ ಅಲೆಗಳು ಏಳುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಮುಂಜಾನೆ ಮಂಜು
ದ.ಕ. ಜಿಲ್ಲೆಯಲ್ಲಿ ಮುಂಜಾನೆ ಮಂಜು ಕವಿದ ವಾತಾವರಣವಿತ್ತು. ಹೊತ್ತೇರುತ್ತಿದ್ದಂತೆ ಬಿಸಿಲ ಧಗೆ ಹೆಚ್ಚಾಗಿದೆ. ಬಹುತೇಕ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 33.5 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ ತಾಪಮಾನ 21.3 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next