Advertisement
40 ವರ್ಷ ಪ್ರಾಯದ ಮಹಿಳೆ, 40 ವರ್ಷ ಪ್ರಾಯದ ಪುರುಷ, 35 ವರ್ಷ ಪ್ರಾಯದ ಮಹಿಳೆ, 42 ವರ್ಷ ಪ್ರಾಯದ ಪುರುಷ, 18 ವರ್ಷ ಪ್ರಾಯದ ಯುವತಿ, 25 ವರ್ಷ ಪ್ರಾಯದ ಯುವತಿ, 35 ವರ್ಷ ಪ್ರಾಯದ ಪುರುಷ, 60 ವರ್ಷ ಪ್ರಾಯದ ಪುರುಷ, 26 ವರ್ಷ ಪ್ರಾಯದ ಯುವತಿ, 22 ವರ್ಷ ಪ್ರಾಯದ ಯುವಕ, 39 ವರ್ಷ ಪ್ರಾಯದ ಪುರುಷ, 45 ವರ್ಷ ಪ್ರಾಯದ ಮಹಿಳೆ ಹಾಗೂ 63 ವರ್ಷ ಪ್ರಾಯದ ಮಹಿಳೆ ಬಿಡುಗಡೆಗೊಂಡವರು. ಈ ಪೈಕಿ 40 ವರ್ಷ ಪ್ರಾಯದ ಮಹಿಳೆ ಕೋವಿಡ್ ನೊಂದಿಗೆ ಮೂತ್ರಕೋಶದ ತೊಂದರೆ, ಮಧುಮೇಹದಿಂದ ಬಳಲುತ್ತಿದ್ದರು. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಜೂ. 1ರಂದು ಅವರ ಗಂಟಲ ದ್ರವ ಮಾದರಿಯನ್ನು ಪರೀಕ್ಷೆ ನಡೆಸಲಾಗಿದ್ದು, ಕೋವಿಡ್ ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ. ಬಿ. ರೂಪೇಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಂಗಳವಾರ ಸ್ವೀಕರಿಸಲಾದ 113 ಮಂದಿಯ ಗಂಟಲ ದ್ರವ ಮಾದರಿ ನೆಗೆಟಿವ್ ಆಗಿದೆ. 50 ಮಾದರಿಯನ್ನು ಹೊಸದಾಗಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಒಟ್ಟು 80 ಮಂದಿಯ ಪರೀಕ್ಷಾ ವರದಿ ಬರಲು ಬಾಕಿ ಇದೆ. ಇಬ್ಬರು ತೀವ್ರ ಉಸಿರಾಟದ ಸಮಸ್ಯೆಗಾಗಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. 64 ಮಂದಿಯನ್ನು ಹೊಸದಾಗಿ ತಪಾಸಣೆಗೊಳಪಡಿಸಲಾಗಿದೆ.