Advertisement

ಮಂಗಳೂರು: ಚಿನ್ನದ ಸರ ಸುಲಿಗೆ ಪ್ರಕರಣ…ಪೊಲೀಸ್‌ ಕಾನ್‌ಸ್ಟೆಬಲ್‌ ನಿರ್ದೋಷಿ

10:46 PM Jan 30, 2023 | Team Udayavani |

ಮಂಗಳೂರು: ಮಹಿಳೆಯ ಸರ ಸುಲಿಗೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ ನಿರ್ದೋಷಿ ಎಂದು ಮಂಗಳೂರಿನ ನ್ಯಾಯಾಲಯ ತೀರ್ಪು ನೀಡಿದೆ.

Advertisement

ಬೆಂಗಳೂರಿನ ಮಹಾಲಕ್ಷ್ಮೀ ಲೇ ಔಟ್‌ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ಸಂದೇಶ ದೋಷಮುಕ್ತರಾದವರು. ಅವರು 2016ರ ಎ.12ರಂದು ಮಂಗಳೂರಿಗೆ ಆಗಮಿಸಿದ್ದರು. ಆ ವೇಳೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಶ್ರೀ ದೇವಿ ಕಾಲೇಜು ಕಡೆಗೆ ಹೋಗುವ ರಸ್ತೆಯಲ್ಲಿ ಮಹಿಳೆಯೋರ್ವರಲ್ಲಿ ಕುಡಿಯಲು ನೀರು, ಪೋನ್‌ ನಂಬರ್‌ ಕೇಳುವ ನೆಪದಲ್ಲಿ ಆಕೆಯ ಕುತ್ತಿಗೆಯಿಂದ ಚಿನ್ನದ ಸರ ಸುಲಿಗೆ ಮಾಡಲು ಯತ್ನಿಸಿದ್ದರು. ಆ ವೇಳೆ ಮಹಿಳೆ ದೂಡಿ ಹಾಕಿದ್ದರು. ಆಗ ಆರೋಪಿ ಸಂದೇಶ ಮಹಿಳೆಯನ್ನು ಗಾಯಗೊಳಿಸಿ ಚಿನ್ನದ ಸರದ ತುಂಡುಗಳನ್ನು ಸುಲಿಗೆ ಮಾಡಿದ್ದರೆಂದು ಆರೋಪಿಸಿ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ 6ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ಎಸ್‌.ವಿ ಅವರು ಆರೋಪಿ ಸಂದೇಶ್‌ನನ್ನು ನಿರ್ದೋಷಿ ಎಂದು ಸೋಮವಾರ ತೀರ್ಪು ನೀಡಿದ್ದಾರೆ. ಅರೋಪಿಯ ಪರವಾಗಿ ಮಂಗಳೂರಿನ ವಕೀಲರಾದ ಜಗದೀಶ್‌ ಕೆ.ಆರ್‌ ಮತ್ತು ಪ್ರಸಾದ್‌ ಪಾಲನ್‌ ವಾದ ಮಂಡಿಸಿದ್ದರು.

ಇದನ್ನೂ ಓದಿ: ರಾಷ್ಟ್ರದ ಪ್ರಗತಿಗಾಗಿ ಜಾತಿ ಮತ್ತು ಪ್ರಾದೇಶಿಕ ತಾರತಮ್ಯವನ್ನು ತೊಡೆದುಹಾಕಿ: ಯೋಗಿ ಆದಿತ್ಯನಾಥ್

Advertisement

Udayavani is now on Telegram. Click here to join our channel and stay updated with the latest news.

Next