Advertisement
ಡಿ. 8ರ ವರೆಗೆ ಮತದಾರರ ಪಟ್ಟಿ ಪರಿಷ್ಕರಣೆಯ ಹಿನ್ನೆಲೆಯಲ್ಲಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ರವಿ ಕುಮಾರ್ ಎಂ.ಆರ್. ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
Related Articles
Advertisement
ಬೂತ್ ಮಟ್ಟದ ಏಜೆಂಟ್ ನೇಮಕಾತಿ
ಪ್ರತೀ ವಿಧಾನಸಭಾ ಕ್ಷೇತ್ರದ ಪ್ರತೀ ಮತಗಟ್ಟೆಗೆ ಒಬ್ಬರಂತೆ ಬೂತ್ ಲೆವೆಲ್ ಏಜೆಂಟ್ (ಬಿಎಲ್‌ಎ) ನೇಮಕಾತಿ ಮಾಡಿ ಮತಗಟ್ಟೆ ಅಧಿಕಾರಿಗಳಿಗೆ ಅರ್ಹ ಮತದಾರರ ನೋಂದಣಿ ಕಾರ್ಯದಲ್ಲಿ ಸಹಕಾರ ನೀಡಲು ಕೋರಲಾಗಿದೆ. ಎಲ್ಲ ಅರ್ಹ ಮತದಾರರನ್ನು ಪಟ್ಟಿಯಲ್ಲಿ ಸೇರಿಸಲು ಹಾಗೂ ದೋಷ ರಹಿತ ಮತದಾರರ ಪಟ್ಟಿಯನ್ನು ತಯಾರಿಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಅಗತ್ಯ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಮದನ್ ಮೋಹನ್ ಉಪಸ್ಥಿತರಿದ್ದರು. ಸೇರ್ಪಡೆಗೆ ವರ್ಷಕ್ಕೆ ನಾಲ್ಕು ಹೆಚ್ಚು ಅವಕಾಶ
ಈ ಹಿಂದೆ ಮತದಾರರ ಪಟ್ಟಿ ಸೇರ್ಪಡೆಗೆ ಪರಿಷ್ಕರಣೆ ಸಂದರ್ಭ ಜ. 1ರೊಳಗೆ ಒಂದು ಬಾರಿ 18 ವರ್ಷ ಪೂರ್ಣಗೊಳಿಸಿದವರನ್ನು ನೋಂದಾಯಿಸಲು ಅವಕಾಶವಿತ್ತು. ಇದೀಗ 17 ವರ್ಷ ದಾಟಿದ ಯುವ ಮತದಾರರು ಒಂದು ವರ್ಷ ಮುಂಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮೂರು ತಿಂಗಳಿಗೊಮ್ಮೆ ಅಂದರೆ ಜ. 1, ಎ. 1, ಜುಲೈ 1 ಹಾಗೂ ಅ. 1 ಅರ್ಹತಾ ದಿನಾಂಕವಾಗಿದ್ದು ಆ ದಿನಗಳಂದು 18 ವರ್ಷ ಪೂರ್ಣಗೊಳಿಸುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗುತ್ತದೆ. ಈ ಪ್ರಕಾರ 17 ವರ್ಷ ದಾಟಿದ ಅರ್ಜಿದಾರರು ನ. 9ರಿಂದ ನಮೂನೆ 6ರ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಒಂದು ಮತಗಟ್ಟೆ ಇಳಿಕೆ
ದ.ಕ. ಜಿಲ್ಲೆಯಲ್ಲಿ ಈ ಹಿಂದೆ ಒಟ್ಟು ಮತಗಟ್ಟೆಗಳ ಸಂಖ್ಯೆ 1,861 ಆಗಿತ್ತು. ಕರಡು ಮತದಾರರ ಪಟ್ಟಿಯ ಅನುಸಾರ ಜಿಲ್ಲೆಯಲ್ಲಿ ಒಟ್ಟು ಮತಗಟ್ಟೆಗಳ ಸಂಖ್ಯೆ 1,860ಕ್ಕೆ ಇಳಿಕೆಯಾಗಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿನ ಮತಗಟ್ಟೆ ಸಂಖ್ಯೆ 6ರಲ್ಲಿ 29 ಮತದಾರರಿದ್ದು, ಅದನ್ನು ಮತಗಟ್ಟೆ 5ರಲ್ಲಿ ವಿಲೀನಗೊಳಿಸಲಾಗಿದೆ. ಪ್ರಸ್ತುತ ಮತಗಟ್ಟೆ ಸಂಖ್ಯೆ 5ರಲ್ಲಿ ಒಟ್ಟು 456 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.