Advertisement

ದಕ್ಷಿಣ ಕನ್ನಡ, ಉಡುಪಿ : ಜುಲೈ 11 ರಂದು ಪ್ರೌಢ ಶಾಲೆವರೆಗೆ ಮಾತ್ರ ರಜೆ

07:39 PM Jul 10, 2022 | Team Udayavani |

ಮಂಗಳೂರು/ ಉಡುಪಿ : ಹವಾಮಾನ ಇಲಾಖೆಯ ಮುನ್ಸೂಚನೆ ಯಂತೆ ಭಾರಿ ಮಳೆ ಕಾರಣ ಜಿಲ್ಲೆಯಲ್ಲಿ ಜುಲೈ 11 ರಂದು ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಪಿಯುಸಿಯಿಂದ ಕಾಲೇಜುಗಳು ಪುನರ್ ಆರಂಭವಾಗಲಿದೆ ಎಂದು ಜಿಲ್ಲಾಡಳಿತಗಳು ಸ್ಪಷ್ಟ ಪಡಿಸಿವೆ.

Advertisement

ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ಹವಾಮಾನ ವರದಿಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಜುಲೈ 11 ರಂದು ಶಾಲೆಗಳು ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಿದ್ದಾರೆ. ಪಿಯುಸಿ , ಪದವಿ ಮತ್ತು ಇತರ ವೃತ್ತಿಪರ ಕಾಲೇಜುಗಳು ತೆರೆದಿರುತ್ತವೆ.

ಉಡುಪಿ ಜಿಲ್ಲೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಕೂರ್ಮ ರಾವ್ ಅವರು ಇದೆ ರೀತಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಪಿಯುಸಿ , ಪದವಿ ಮತ್ತು ಇತರ ವೃತ್ತಿಪರ ಕಾಲೇಜುಗಳು ಸೋಮವಾರ ತೆರೆದಿರುತ್ತವೆ.

ಇದನ್ನೂ ಓದಿ : ಆಗುಂಬೆ ಘಾಟಿಯಲ್ಲಿ ಗುಡ್ಡ‌ ಕುಸಿತ : ಜುಲೈ 12ರವರೆಗೆ ವಾಹನ ಸಂಚಾರ ನಿರ್ಬಂಧ

Advertisement

Udayavani is now on Telegram. Click here to join our channel and stay updated with the latest news.

Next