Advertisement

Dakshina Kannada ಉಡುಪಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ

04:08 PM Nov 01, 2024 | Team Udayavani |

ದ.ಕ.: 56 ಸಾಧಕರು, 20 ಸಂಸ್ಥೆಗಳಿಗೆ ಪ್ರಶಸ್ತಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ 56 ಸಾಧಕರು ಹಾಗೂ 20 ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

Advertisement

ಸಮಾಜಸೇವೆ: ಮರ್ಸಿ ವೀಣಾ ಡಿ’ಸೋಜಾ, ಶ್ರೀಕೃಷ್ಣ ಹೆಗ್ಡೆ, ಜೆ.ಆನಂದ ಸೋನ್ಸ್‌, ದಯಾನಾಥ ಕೋಟ್ಯಾನ್‌, ಹರ್ಬರ್ಟ್‌ ಡಿ’ಸೋಜಾ, ಆರೂರು ಲಕ್ಷ್ಮೀರಾವ್‌, ಪ್ರಭಾಕರ ಶ್ರೀಯಾನ್‌, ಅಬ್ದುಲ್ಲ ಮೊಯ್ದಿನ್‌, ರೊನಾಲ್ಡ್‌ ಮಾರ್ಟಿನ್‌, ಬಾಬು ಪಿಲಾರ್‌, ಕೆ. ಹುಸೈನ್‌, ಮಹಮ್ಮದ್‌ ಹಾಜಿ ಕುಕ್ಕುವಳ್ಳಿ, ಎಂ. ಮೊಹಮ್ಮದ್‌ ಬಡಗನ್ನೂರು, ಬಿ.ಟಿ.ಮಹೇಶ್ಚಂದ್ರ ಸಾಲ್ಯಾನ್‌, ಕುತ್ತಿಕಾರು ಕಿಂಞಣ್ಣ ಶೆಟ್ಟಿ, ಜಯಾನಂದ.

ಕಲಾಕ್ಷೇತ್ರ: ಕಡಬ ಶ್ರೀನಿವಾಸ ರೈ, ಸದಾಶಿವ ಡಿ.ತುಂಬೆ, ಎಂ.ವೇಣುಗೋಪಾಲ್‌ ಪುತ್ತೂರು, ಕೇಶವ ಮಚ್ಚಿಮಲೆ, ಬಿ.ಶೇಖರ ಭಂಡಾರಿ ಬನ್ನೂರು, ನಾರಾಯಣ ಪರವ, ರಾಜೇಂದ್ರ ಶೇರಿಗಾರ್‌, ಗಂಗಾಧರ ದೇವಾಡಿಗ, ಜಯರಾಮ್‌, ಲಕ್ಷ್ಮಣ ಗೌಡ, ದಯಾನಂದ ರೈ ಕೋರ್ಮಂಡ.

ಪಾಣಿಲ ಸತೀಶ್ಚಂದ್ರ ಸಾಲ್ಯಾನ್‌, ಜೋನ್‌ ಸಿರಿಲ್‌ ಡಿ’ಸೋಜಾ (ಕಂಬಳ), ಡಾ| ಬಿ.ಎಸ್‌.ಸಚ್ಚಿದಾನಂದ ರೈ, ಡಾ| ಆನಂದ್‌ ವೇಣುಗೋಪಾಲ್‌ (ವೈದ್ಯಕೀಯ), ಪದ್ಮನಾಭ ಕೋಟ್ಯಾನ್‌, ರೊನಾಲ್ಡ್‌ ಫೆರ್ನಾಂಡಿಸ್‌ (ಕೃಷಿ), ಮಹಮ್ಮದ್‌ ಹನೀಫ್‌, ಸೋಹೆಲ್‌ ಕಂದಕ್‌ (ಕ್ರೀಡೆ), ನಾಗೇಂದ್ರ ಕುಡುಪು (ಪಂಚವಾದ್ಯ ಕಲಾವಿದ), ವಿಲಿಯಂ ಆಂಟನಿ ಡಿ’ಸೋಜಾ (ಪ್ರವಾಸೋದ್ಯಮ), ಮುನಿತ ವೇಗಸ್‌ ರೋವ್‌(ಸಂಗೀತ), ಲೀಲಾಧರ (ಕಲೆ), ಪುಷ್ಪರಾಜ್‌ ಬಿ.ಎನ್‌., ರಾಜೇಶ್‌ ರಾವ್‌ (ಪತ್ರಿಕೋದ್ಯಮ), ಚಂದ್ರಹಾಸ ಶೆಟ್ಟಿ ಮೋರ್ಲ(ಕೃಷಿ/ಸಾಮಾಜಿಕ), ಜಯಪ್ರಕಾಶ್‌ ಶೆಟ್ಟಿ ಪೆರ್ಮುದೆ, ಪದ್ಮನಾಭ ಶೆಟ್ಟಿಗಾರ್‌(ಯಕ್ಷಗಾನ), ರಶ್ಮಿತಾ ಜೈನ್‌, ಕೆ.ಎನ್‌.ಗಂಗಾಧರ ಆಳ್ವ (ಶಿಕ್ಷಣ), ಪ್ರಕಾಶ್‌ ಆಚಾರ್ಯ (ಸಂಗೀತ), ಉದಯಕುಮಾರ್‌ ಲಾಯಿಲ (ಜಾನಪದ ಕಲೆ), ವಸಂತಿ ನಿಡ್ಲೆ (ಕವಯತ್ರಿ/ಯಕ್ಷಗಾನ), ಜ್ಞಾನ ರೈ (ಬಹುಮುಖ ಪ್ರತಿಭೆ), ಶೇಖರ ಪರವ(ದೈವಾರಾಧನೆ), ಸಂಜೀವ ಪೂಜಾರಿ(ಸಹಕಾರಿ), ಮೊಹಮ್ಮದ್‌ ಯಾಸಿರ್‌ ಕಲ್ಲಡ್ಕ (ಪುರಾತನ ವಸ್ತು ಸಂಗ್ರಹಾಲಯ), ಗೋಪಾಲ ಜೋಗಿ (ನಾಗಸ್ವರ ವಾದಕ), ಸುಖಪಾಲ್‌ ಪೊಳಲಿ (ದೃಶ್ಯ ಮಾಧ್ಯಮ), ಮೊಹ ಮ್ಮದ್‌ ಹನೀಫ್‌ (ಸಾಮಾಜಿಕ/ಕ್ರೀಡೆ).

ಸಂಘ ಸಂಸ್ಥೆಗಳು
ಬಂಟರ ಸಂಘ ಬಜಪೆ ವಲಯ(ಶೈಕ್ಷಣಿಕ/ಕ್ರೀಡೆ/ಸಾಮಾಜಿಕ), ಒಲವಿನ ಹಳ್ಳಿ ಪುನರ್ವಸತಿ ಮತ್ತು ಸಮುದಾಯ ಅಭಿವೃದ್ಧಿ ಕೇಂದ್ರ ಸೋಮೇಶ್ವರ, ದಿ ವಾಯ್ಸ ಆಫ್‌ ಬ್ಲಿಡ್‌ ಡೋನರ್ಸ್‌ ಮಂಗಳೂರು, ಫೈವ್‌ ಸ್ಟಾರ್‌ ಯಂಗ್‌ ಬಾಯ್ಸ ಅಡ್ಡೂರು ಮಂಗಳೂರು, ಶ್ರೀ ಜಯಲಕ್ಷ್ಮೀ ಫ್ರೆಂಡ್ಸ್‌ ಸರ್ಕಲ್‌ ಬೋಳೂರು ಮಂಗಳೂರು, ಕರ್ನಾಟಕ ಸೇವಾ ವೃಂದ ಸುರತ್ಕಲ್‌ , ಬಿಲ್ಲವ ಸಂಘ ಉರ್ವ ಅಶೋಕನಗರ, ನವೋದಯ ಫ್ರೆಂಡ್ಸ್‌ ಸರ್ಕಲ್‌ ಉಳ್ಳಾಲಬೈಲು, ಮುನ್ನೂರು ಯುವಕ ಮಂಡಲ ಕುತ್ತಾರು ಪದವು ಮಂಗಳೂರು, ದಯಾ ವಿಶೇಷ ಶಾಲೆ ಲಾಯಿಲ ಕೊಯ್ಯೂರು ಬೆಳ್ತಂಗಡಿ, ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಮಿತಿ ಬಳಂಜ ತೆಂಕಕಾರಂದೂರು, ಯುವಕ ಮಂಡಲ ನರಿಂಗಾನ ತೌಡುಗೋಳಿ, ಶ್ರೀ ರಕ್ತೇಶ್ವರಿ ಯುವಕ ಸಂಘ ನೇರಂಬೋಳು ಬಂಟ್ವಾಳ (ಸಮಾಜಸೇವೆ), ಯುನೈಟೆಡ್‌ ಫ್ರೆಂಡ್ಸ್‌ ಬಿಜೈ(ಶೈಕ್ಷಣಿಕ/ಕ್ರೀಡೆ/ಸಾಮಾಜಿಕ/ವೈದ್ಯಕೀಯ/ಸಾಂಸ್ಕೃತಿಕ), ಶ್ರೀ ದುರ್ಗಾಪರಮೇಶ್ವರಿ ಸೇವಾ ಸಂಘ ಯುವಕ ಮಂಡಲ ದೇವಿಪುರ ತಲಪಾಡಿ ಕಿನ್ಯಾ, ಬೆಂಗರೆ ವಿದ್ಯಾರ್ಥಿ ಯುವಕ ಮಂಡಲ ಬೆಂಗ್ರೆ ಮಂಗಳೂರು(ಸಾಮಾಜಿಕ ಕ್ಷೇತ್ರ), ಸಫರ್‌ ನ್ಪೋರ್ಟ್ಸ್ ಮತ್ತು ಕಲ್ಚರಲ್‌ ಅಸೋಸಿಯೇಶನ್‌ ಮಂಚಿಲ ಪೆರ್ಮನ್ನೂರು ಉಳ್ಳಾಲ(ಕ್ರೀಡಾ ಕ್ಷೇತ್ರ), ಮಂಗಳ ಗ್ರಾಮೀಣ ಯುವಕ ಸಂಘ ಕೊಣಾಜೆ(ಶೈಕ್ಷಣಿಕ/ಸಾಂಸ್ಕೃತಿಕ/ಧಾರ್ಮಿಕ/ಆರೋಗ್ಯ/ಸಾಮಾಜಿಕ), ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆ ಟ್ರಸ್ಟ್‌ ತೊಕ್ಕೊಟ್ಟು ಉಳ್ಳಾಲ(ಸಾಮಾಜಿಕ/ಧಾರ್ಮಿಕ/ಸಾಂಸ್ಕೃತಿಕ), ಶ್ರೀ ವಿದ್ಯಾಶ್ರೀ ಫ್ರೆಂಡ್ಸ್‌ ಚಾರಿಟೆಬಲ್‌ ಟ್ರಸ್ಟ್‌ ಆರ್ಲಪದವು, ಪಾಣಾಜೆ, ಪುತ್ತೂರು (ಕ್ರೀಡೆ, ಧಾರ್ಮಿಕ).

Advertisement

ಉಡುಪಿ: 44 ಸಾಧಕರು, 6 ಸಂಸ್ಥೆಗಳಿಗೆ ಪ್ರಶಸ್ತಿ
ಉಡುಪಿ: ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದ್ದು ವಿವಿಧ ಕ್ಷೇತ್ರಗಳ 44 ಸಾಧಕರು ಹಾಗೂ 6 ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

ನ.1ರ ಬೆಳಗ್ಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಕನ್ನಡ ರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಸಾಧಕರ ಪಟ್ಟಿ
ಸಮಾಜ ಸೇವಾ ವಿಭಾಗದಲ್ಲಿ ಕೊರ್ಗಿ ವಿಟ್ಠಲ ಶೆಟ್ಟಿ, ಕೆ.ತಾರಾನಾಥ ಹೊಳ್ಳ, ಶೇಖರ ಹೆಜಮಾಡಿ, ಕುಂದಾಪುರದ ಉದಯ್‌ ಆಚಾರ್ಯ, ಅಭಿನಂದನ ಎ. ಶೆಟ್ಟಿ, ಬಸ್ರೂರಿನ ಪ್ರದೀಪ್‌ ಕುಮಾರ್‌, ಹಟ್ಟಿಯಂಗಡಿಯ ಉದಯ ಕುಮಾರ್‌, ಹೆಬ್ರಿ ನವ ಗ್ರಾಮದ ಎಚ್‌. ಜನಾರ್ದನ, ಉಡುಪಿ ಪಡುತೋನ್ಸೆಯ ಮಹೇಶ್‌ ಪೂಜಾರಿ, ಕಟಪಾಡಿಯ ಕೆ. ಮಹೇಶ್‌ ಶೆಣೈ.

ಯಕ್ಷಗಾನ ವಿಭಾಗದಲ್ಲಿ ಬೈಂದೂರು ತಾಲೂಕಿನ ಸಂಜೀವ ಶೆಟ್ಟಿ, ಕುಂದಾಪುರ ತಾಲೂಕು ಮೊಗಬೆಟ್ಟು ಬೇಳೂರು ವಿಷ್ಣುಮೂರ್ತಿ ನಾಯಕ್‌, ಬ್ರಹ್ಮಾವರ ತಾಲೂಕಿನ ಹೊಸಾಳದ ಉದಯ ಕುಮಾರ್‌, ಸಾಲಿಗ್ರಾಮದ ಪಿ.ವಿ.ಆನಂದ.

ರಂಗಭೂಮಿ ವಿಭಾಗದಲ್ಲಿ ಕಟಪಾಡಿಯ ಬಾಸುಮ ಕೊಡಗು, ಕಾರ್ಕಳ ಜೋಡುರಸ್ತೆಯ ಹರೀಶ್‌, ಕಾರ್ಕಳದ ಹರೀಶ್‌ ಶೆಟ್ಟಿ, ಕಾರ್ಕಳ ಕಾಬೆಟ್ಟು ಸದಾಶಿವ ಶೆಟ್ಟಿ.

ಸಾಹಿತ್ಯ ವಿಭಾಗದಲ್ಲಿ ಕೋಟ ಮಣೂರಿನ ಶಂಕರ ಯು. ಮಂಜೇಶ್ವರ, ಸಿದ್ದಾಪುರದ ಮುಷ್ತಾಕ್‌ ಹೆನ್ನಾಬೈಲ್‌, ಬ್ರಹ್ಮಾವರ ಹಾವಂಜೆಯ ಪ್ರದೀಪ್‌ ಎಂ.ಡಿ.

ನಾಟಕ ವಿಭಾಗದಲ್ಲಿ ಮಣಿಪಾಲದ ಜಯಕರ ಹಾಗೂ ವಿನೋದ್‌ ಮಂಚಿ.

ಕೃಷಿ ವಿಭಾಗದಲ್ಲಿ ಕಾವ್ರಾಡಿಯ ಮುಂಬಾರು ದಿನಕರ ಶೆಟ್ಟಿ, ಕಾಪು ಶಂಕರಪುರದ ಜೋಸೆಫ್ ಲೋಬೋ.

ಸಂಗೀತ ವಿಭಾಗದಲ್ಲಿ ಉಡುಪಿಯ ಅಶೋಕ್‌ ಸೇರಿಗಾರ್‌, ಕಾರ್ಕಳ ಸೂಡದ ಸುನೀಲ್‌ ದೇವಾಡಿಗ, ನಂದಳಿಕೆ ಸಚಿತ್‌ ಪೂಜಾರಿ.

ಶಿಲ್ಪಕಲೆ ಹಾಗೂ ಚಿತ್ರಕಲೆ ವಿಭಾಗ ದಲ್ಲಿ ಉಡುಪಿ ಕೊಡವೂರಿನ ಮಹೇಶ್‌ ಚೆಂಡ್ಕಳ, ಬೈಂದೂರು ತಾಲೂಕಿನ ಶಾಂತಾರಾಮ ಆಚಾರ್ಯ.

ಧಾರ್ಮಿಕ ವಿಭಾಗದಲ್ಲಿ ಕಾಪು ತಾಲೂಕಿನ ಶ್ರೀನಿವಾಸ ತಂತ್ರಿ.

ದೈವಾರಾಧನೆ/ಭೂತಾರಾಧನೆ ವಿಭಾಗದಲ್ಲಿ ಮಣಿಪುರದ ರಾಘು ಪೂಜಾರಿ, ಹೆಬ್ರಿ ತಾಲೂಕಿ ಆರ್ಡಿಯ ಸಂತೋಷ್‌ ಕುಮಾರ್‌, ಕಾರ್ಕಳ ಕುಕ್ಕುಂದೂರಿನ ಸಂಜೀವ ಪರವ.

ಕ್ರೀಡಾ ವಿಭಾಗದಲ್ಲಿ ಉಡುಪಿಯ ಸುರೇಶ್‌ ಕೆಳಾರ್ಕಳಬೆಟ್ಟು, ಹೆರ್ಗದ ರಾಜಶೇಖರ್‌ ಎ. ಶಾಮರಾವ್‌, ಉಡುಪಿ ಕಿದಿಯೂರಿನ ಗೋವರ್ಧನ ಎನ್‌. ಬಂಗೇರ.

ಶಿಕ್ಷಣ ವಿಭಾಗದಲ್ಲಿ ಬ್ರಹ್ಮಾವರ ಕೆಂಜೂರು ಗ್ರಾಮದ ಡಾ| ದಿನಕರ.

ಪತ್ರಿಕೋದ್ಯಮ: ಚಿತ್ತೂರು ಪ್ರಭಾಕರ ಆಚಾರ್ಯ.

ಸಂಕೀರ್ಣ ವಿಭಾಗದಲ್ಲಿ ಕಾರ್ಕಳ ತಾಲೂಕಿನ ಸುಬ್ರಹ್ಮಣ್ಯ ಬೈಪಾಡಿತ್ತಾಯ.

ಹೈನುಗಾರಿಕೆ ವಿಭಾಗದಲ್ಲಿ ಕುಂದಾಪುರ ಹಣ್ಸಮಕ್ಕಿಯ ಕೆ.ಜಗನ್ನಾಥ ಪೂಜಾರಿ.

ಬಾಲಪ್ರತಿಭೆ ವಿಭಾಗದಲ್ಲಿ ಬ್ರಹ್ಮಾವರ ತಾಲೂಕಿನ ಸಮೃದ್ಧಿ ಎಸ್‌. ಮೊಗವೀರ.

ಸಂಘ ಸಂಸ್ಥೆ ವಿಭಾಗದಲ್ಲಿ ಕಾಪು ತಾಲೂಕಿನ ಶಿರ್ವ ಮಹಿಳಾ ಮಂಡಲ, ಉಡುಪಿ ದೊಡ್ಡಣ ಗುಡ್ಡೆಯ ವಿಷ್ಣುಮೂರ್ತಿ ಫ್ರೆಂಡ್ಸ್‌, ಅಂಬಲಪಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಯೂತ್‌ ನ್ಪೋರ್ಟ್ಸ್ ಆ್ಯಂಡ್‌ ಕಲ್ಚರಲ್‌ ಕ್ಲಬ್‌, ಕುಂದಾಪುರ ತಾಲೂಕಿನ ಹೊಸಂಗಡಿ ಬೆಚ್ಚಳ್ಳಿ ಭೋಜು ಪೂಜಾರಿ ಚಾರಿಟೆ ಬಲ್‌ ಟ್ರಸ್ಟ್‌, ಕಾರ್ಕಳದ ವಿಜಯ ಯುವಕ ಸಂಘ ಹಾಗೂ ಖುಷಿ ಮಹಿಳಾ ಮಂಡಲ, ಉಡುಪಿ ಬಡನಿಡಿಯೂರಿನ ಗಜಾನನ ಯಕ್ಷಗಾನ ಕಲಾಸಂಘ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ.

Advertisement

Udayavani is now on Telegram. Click here to join our channel and stay updated with the latest news.

Next