Advertisement

ದಕ್ಷಿಣ ಕನ್ನಡ: ಮತದಾನಕ್ಕೆ ಜಿಲ್ಲೆ ಸರ್ವ ಸನ್ನದ್ಧ

01:01 AM May 10, 2023 | Team Udayavani |

ಮಂಗಳೂರು: ರಾಜ್ಯ ವಿಧಾನಸಭೆಗೆ ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಲು ದಕ್ಷಿಣ ಕನ್ನಡ ಜಿಲ್ಲೆಯ ಮತದಾರರು ಸಿದ್ಧಗೊಂಡಿದ್ದು, ಜಿಲ್ಲಾಡ ಳಿತ ಮತದಾನ ಪ್ರಕ್ರಿಯೆಗೆ ಸಿದ್ಧತೆ ಕೈಗೊಂಡಿದೆ.

Advertisement

ಜಿಲ್ಲೆಯ 8 ಕ್ಷೇತ್ರಗಳ 1,860 ಮತಗಟ್ಟೆಗಳಲ್ಲಿ ಮತದಾರರು ಮತ ಚಲಾಯಿಸುವರು. ಇದಕ್ಕಾಗಿ 2,235 ಬ್ಯಾಲೆಟ್‌ ಯೂನಿಟ್‌ ಗಳು, 2,235 ಕಂಟ್ರೋಲ್‌ ಯೂನಿಟ್‌ಗಳು ಹಾಗೂ 2,422 ವಿವಿಪ್ಯಾಟ್‌ಗಳನ್ನು ಸಿದ್ಧಪಡಿಸಲಾಗಿದೆ. ಜಿಲ್ಲೆಯಲ್ಲಿ 8,70,991 ಪುರುಷರು ಹಾಗೂ 9,10,314 ಮಹಿಳೆಯರು, 84 ಮಂದಿ ತೃತೀಯ ಲಿಂಗಿಗಳ ಸಹಿತ ಒಟ್ಟು 17,81,389 ಮತದಾರರಿದ್ದಾರೆ. 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 60 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

100 ಮಾದರಿ ಮತಗಟ್ಟೆಗಳು
ಜಿಲ್ಲೆಯ 100 ಮತಗಟ್ಟೆಗಳನ್ನು ಈ ಬಾರಿ ವಿವಿಧ ರೀತಿಯ ಬಣ್ಣ, ಚಿತ್ತಾರಗಳೊಂದಿಗೆ ಮಾದರಿ ಮತಗಟ್ಟೆಗಳಾಗಿ ರೂಪಿಸಲಾಗಿದ್ದು, ಮತದಾನಕ್ಕೆ ಆಗಮಿಸುವ ಮತದಾರರನ್ನು ಸ್ವಾಗತಿಸಲು ಸಿದ್ಧಗೊಂಡಿವೆ.
8940 ಚುನಾವಣ ಅಧಿಕಾರಿ- ಸಿಬಂದಿ ಪ್ರತಿ ಮತಗಟ್ಟೆಗೆ ಒಬ್ಬ ಅಧ್ಯಕ್ಷಾಧಿಕಾರಿ, 3 ಮತಗಟ್ಟೆ ಅಧಿಕಾರಿ ಮತ್ತು ಒಬ್ಬ ಗ್ರೂಪ್‌ ಡಿ ಸಿಬಂದಿಯನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 8,940 ಚುನಾವಣ ಅಧಿಕಾರಿ ಮತ್ತು ಸಿಬಂದಿ ಮತದಾನದ ದಿನದಂದು ಕರ್ತವ್ಯ ನಿರ್ವಹಿಸಲಿ ದ್ದಾರೆ. ಇದಲ್ಲದೆ, ಪ್ರತಿ ಕ್ಷೇತ್ರದಲ್ಲಿ ವಿವಿಧ ವಿಭಾಗ ಗಳಲ್ಲಿ ಶೇ. 20 ರಷ್ಟು ಅಧಿಕಾರಿ, ಸಿಬಂದಿಯನ್ನು ಮೀಸಲು ಇರಿಸಲಾಗಿದೆ.

655 ವಾಹನಗಳ ನಿಯೋಜನೆ
ಮತಗಟ್ಟೆ ಅಧಿಕಾರಿ, ಸಿಬಂದಿಯನ್ನು ಅವರವರ ಮತ ಗಟ್ಟೆಗಳಿಗೆ ತಲುಪಿಸಿ ಚುನಾವಣ ಕರ್ತವ್ಯದ ಬಳಿಕ ಡಿ ಮಸ್ಟರಿಂಗ್‌ ಕೇಂದ್ರಕ್ಕೆ ಕರೆತರಲು ಜೀಪುಗಳು, ಕೆಎಸ್‌ಆರ್‌ಟಿಸಿ ಬಸ್ಸುಗಳು, ಖಾಸಗಿ ಮ್ಯಾಕ್ಸಿ ಕ್ಯಾಬ್‌ಗಳು, ಇತರ ಖಾಸಗಿ ವಾಹನಗಳ ಸಹಿ ತ 655 ವಾಹನಗಳನ್ನು ನಿಯೋಜಿಸಲಾಗಿದೆ.

ಮಸ್ಟರಿಂಗ್‌ ಕಾರ್ಯ
ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮತಗಟ್ಟೆ ಸಿಬಂದಿಗಳಿಗೆ ಮತ ಯಂತ್ರಗಳು ಹಾಗೂ ಚುನಾವಣ ಸಾಮಗ್ರಿ ವಿತರಿಸುವ ಪ್ರಮುಖ ಘಟ್ಟವಾದ ಮಸ್ಟರಿಂಗ್‌ ಕಾರ್ಯ ಮಂಗಳವಾರ ಅಚ್ಚುಕಟ್ಟಾಗಿ ನೆರವೇರಿದ್ದು, ನಿಯೋಜಿತ ಅಧಿಕಾರಿ, ಸಿಬ್ಬಂದಿ ಮತಗಟ್ಟೆಗಳತ್ತ ತೆರಳಿದರು. ಇವರಿಗೆ ಚುನಾವಣಾ ಸಾಮಗ್ರಿ, ಇವಿಎಂ ಯಂತ್ರಗಳ ಪೆಟ್ಟಿಗೆ, ವಿವಿ ಪ್ಯಾಟ್‌ ಯಂತ್ರದ ಪೆಟ್ಟಿಗೆ ಹಾಗೂ ವಿಶೇಷ ಕಿಟ್‌ ಬ್ಯಾಗ್‌ ಅನ್ನು ಕೌಂಟರ್‌ಗಳ ಮೂಲಕ ವಿತರಿಸಲಾಯಿತು. ಕೇಂದ್ರಗಳ ಆವರಣದಲ್ಲಿ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಹಾಗೂ ಉಟೋಪಹಾರದ ವ್ಯವಸ್ಥೆ ಕೈಗೊಳ್ಳಲಾಗಿತ್ತು.

Advertisement

ವೇತನ ಸಹಿತ ರಜೆ
ಅರ್ಹ ಮತದಾರರು ತಮ್ಮ ಹಕ್ಕು ಚಲಾಯಿ ಸಲು ಅನುಕೂಲವಾಗುವಂತೆ ಜಿಲ್ಲೆಯ ಎಲ್ಲ ಸರ ಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ (ಅನು ದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಹಾಗೂ ಸರಕಾರಿ ಸ್ವಾಮ್ಯದ ಸಂಸ್ಥೆಗಳು ಒಳ ಗೊಂಡಂತೆ ವೇತನ ಸಹಿತ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

ಎಲ್ಲ ವ್ಯಾವಹಾರಿಕ ಸಂಸ್ಥೆಗಳು ಔದ್ಯಮಿಕ ಸಂಸ್ಥೆಗಳು, ಅಪಾರ್ಟ್‌ಮೆಂಟ್‌ಗಳಲ್ಲಿರುವ ವಲಸೆ ಕಾರ್ಮಿಕರು, ಹೋಟೆಲ್‌, ಬಾರ್‌, ಹೋಂಸ್ಟೇಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರು, ಕೈಗಾ ರಿಕಾ ಉದ್ಯಮ ಮಾಹಿತಿ ತಂತ್ರಜ್ಞಾನ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸುವ ಸಿಬಂದಿ ಮತ್ತು ಇನ್ನಿತರ ಸಂಸ್ಥೆಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆ ನೀಡಲು ಆದೇಶಿಸಲಾಗಿದೆ. ಈ ರಜೆಯು ತುರ್ತು ಸೇವೆಗಳಿಗೆ ಅನ್ವಯಿಸದು. ಹಾಗಿದ್ದರೂ ಅಂತಹ ನೌಕರರಿಗೆ ಮತ ಚಲಾ ಯಿಸಲು ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸ ಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next