Advertisement
ದೇಶದಲ್ಲಿ ದಾಖಲೆಮಧ್ಯಪ್ರದೇಶದ ಇಂದೋರ್ ಕ್ಷೇತ್ರ2ನೇ ಅತಿ ಹೆಚ್ಚು ನೋಟಾ ಮತ ಗಳಿಸಿದೆ. 2,18,674 ನೋಟಾ ಬಿದ್ದಿದ್ದು 2019ರ ಚುನಾವಣೆ ಯಲ್ಲಿ ಬಿಹಾರದ ಗೋಪಾಲ್‌ಗಂಜ್ ಕ್ಷೇತ್ರದ ನೋಟಾ ದಾಖಲೆಯನ್ನು ಇಂದೋರ್ ಮುರಿದಿದೆ.
ರಾಜ್ಯದಲ್ಲಿ ಬಿಜೆಪಿ ಶೇ. 46.06, ಕಾಂಗ್ರೆಸ್ ಶೇ. 45.43, ಜೆಡಿಎಸ್ ಶೇ. 5.6 ಮತಗಳನ್ನು ಪಡೆದರೆ ಪಕ್ಷಗಳಾದ ಬಿಎಸ್‌ಪಿ (0.33), ಸಿಪಿಐ (0.01) ಗಳಿಸಿದ್ದಕ್ಕಿಂತ ಅಧಿಕ ಮತ ಶೇ. 0.56 ಮತ ನೋಟಾಗೆ ಬಿದ್ದಿದೆ. ಅತಿಹೆಚ್ಚು ನೋಟಾ ಮತ ಚಲಾವಣೆಯಾದುದು ದ.ಕ. ಜಿಲ್ಲೆಯಲ್ಲಿ. ಅನಂತರದ ಸ್ಥಾನ ಬೆಂಗಳೂರು ಉತ್ತರಕ್ಕೆ. ಉಳಿದಂತೆ 10 ಸಾವಿರಕ್ಕಿಂತ ಹೆಚ್ಚು ನೋಟಾ ಮತ ಬಿದ್ದ ಕ್ಷೇತ್ರಗಳೆಂದರೆ ಬೆಂಗಳೂರು ಸೆಂಟ್ರಲ್, ಬೆಂಗಳೂರು ಗ್ರಾಮಾಂತರ, ಹಾವೇರಿ, ಉಡುಪಿ ಚಿಕ್ಕಮಗಳೂರು, ಉತ್ತರಕನ್ನಡ. ಅತಿ ಕಡಿಮೆ ನೋಟಾ ಮತ ಚಲಾವಣೆಯಾದುದು ಚಿಕ್ಕೋಡಿಯಲ್ಲಿ.
Related Articles
ಬಿದ್ದ ಮತಗಳ ವಿವರ
ಬಾಗಲಕೋಟೆ 3,420, ಬೆಂಗಳೂರು ಸೆಂಟ್ರಲ್ 12,126, ಬೆಂಗಳೂರು ಉತ್ತರ 13,554, ಬೆಂ. ಗ್ರಾ. 10,649, ಬೆಂ. ದಕ್ಷಿಣ 7,857, ಬೆಳಗಾವಿ 5,726, ಬಳ್ಳಾರಿ 7,889, ಬೀದರ್ 4,686, ವಿಜಯಪುರ 7,502, ಚಾಮರಾಜನಗರ 8,143, ಚಿಕ್ಕಬಳ್ಳಾಪುರ 6,596, ಚಿಕ್ಕೋಡಿ 2,608, ಚಿತ್ರದುರ್ಗ 3,190, ದಕ್ಷಿಣ ಕನ್ನಡ 23,576, ದಾವಣಗೆರೆ 3,176, ಧಾರವಾಡ 6,147, ಗುಲ್ಬರ್ಗ 8,429, ಹಾಸನ 8,541, ಹಾವೇರಿ 10,865, ಕೋಲಾರ 5,831, ಕೊಪ್ಪಳ 3,519, ಮಂಡ್ಯ 7,736, ಮೈಸೂರು 4,490, ರಾಯಚೂರು 9,850, ಶಿವಮೊಗ್ಗ 4,332, ತುಮಕೂರು 6,460, ಉಡುಪಿ ಚಿಕ್ಕಮಗಳೂರು 11,269, ಉತ್ತರಕನ್ನಡ 10,176.
Advertisement
ಕಳೆದ ಬಾರಿ2019ರಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಶೇ. 51.38, ಕಾಂಗ್ರೆಸ್‌ಗೆ ಶೇ. 31.88, ಜೆಡಿಎಸ್‌ಗೆ ಶೇ. 9.67, ಬಿಎಸ್‌ಪಿಗೆ ಶೇ. 1.17 ಮತ ಚಲಾವಣೆಯಾಗಿದ್ದರೆ ನೋಟಾ ಪ್ರಭಾವ ಶೇ. 71ರಷ್ಟಿತ್ತು. ಈ ಬಾರಿ ಪ್ರಮಾಣ ಇಳಿಕೆಯಾಗಿದೆ. ಕಳೆದ ಬಾರಿ ಸಿಪಿಐ ಹಾಗೂ ಸಿಪಿಎಂ ತಲಾ ಶೇ. 0.05ರಷ್ಟು ಮತಗಳಿಸಿದ್ದವು. ಕಳೆದ ಬಾರಿ ದ.ಕ.ದಲ್ಲಿ 7,380, ಉಡುಪಿಯಲ್ಲಿ 7,518 ನೋಟಾ ಮತ ಚಲಾವಣೆಯಾಗಿತ್ತು.