Advertisement

ದ.ಕ. ಪೊಲೀಸ್‌ ಬಲವರ್ಧನೆ: ಎಡಿಜಿಪಿ ಕಮಲ್‌ ಪಂತ್‌

10:12 AM Aug 31, 2018 | |

ಮಂಗಳೂರು: ಹೆಚ್ಚು ಸೂಕ್ಷ್ಮ ಪ್ರದೇಶವಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚುವರಿ ಪೊಲೀಸರ ಆವಶ್ಯಕತೆ ಇರುವುದು ಇಲಾಖೆಯ ಗಮನಕ್ಕೆ ಬಂದಿದೆ. ಮಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಗಳೂರು ಮಾದರಿಯಲ್ಲಿ ಹೆಚ್ಚುವರಿ ಪೊಲೀಸರನ್ನು ಒದಗಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಎಡಿಜಿಪಿ ಕಮಲ್‌ ಪಂತ್‌ ತಿಳಿಸಿದರು.
ಎರಡು ದಿನಗಳ ಮಂಗಳೂರು ಭೇಟಿಗೆ ಆಗಮಿಸಿದ್ದ ಅವರು ಗುರು ವಾರ ಇಲ್ಲಿನ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಸುದ್ದಿಗಾರರ ಜತೆ ಔಪಚಾರಿಕವಾಗಿ ಮಾತನಾಡಿದರು.

Advertisement

18 ವರ್ಷಗಳಿಂದಒಂದೇ ಮಾನದಂಡ
ಪೊಲೀಸ್‌ ಠಾಣೆ ಮತ್ತು ಸಿಬಂದಿ ಪ್ರಮಾಣಕ್ಕೆ ಸಂಬಂಧಿಸಿದ ಮಾನದಂಡಗಳು ಕಳೆದ 18 ವರ್ಷಗಳಿಂದ ಪರಿಷ್ಕರ
ಣೆಗೊಂಡಿಲ್ಲ. ಈ 18 ವರ್ಷಗಳಲ್ಲಿ ಜನಸಂಖ್ಯೆ ವೃದ್ಧಿ, ತಂತ್ರಜ್ಞಾನದಲ್ಲೂ ಬಹಳ ಬೆಳವಣಿಗೆಗಳಾಗಿವೆ. ಅದ ಕ್ಕನು ಗುಣವಾಗಿ ಠಾಣೆಗಳನ್ನು ಬಲಪಡಿಸಬೇಕಾಗಿದೆ ಎಂದರು. ಮಾದಕ ದ್ರವ್ಯ ಹಾವಳಿಯನ್ನು ತಡೆಗಟ್ಟಲು ಆದ್ಯತೆ ನೀಡಲಾಗುತ್ತಿದೆ. ಗೃಹ ಸಚಿವರು ಕೂಡ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಕಮಲ್‌ ಪಂತ್‌ ತಿಳಿಸಿದರು.
ಅಕ್ರಮ ಮರಳುಗಾರಿಕೆ ತಡೆಯಲು ಜನ ಸಹಕಾರ ನೀಡಬೇಕು ಎಂದರು.

ಶೀರೂರು ಶ್ರೀ ಪ್ರಕರಣ ತನಿಖೆ 
ಶೀರೂರು ಸ್ವಾಮೀಜಿ ನಿಗೂಢ ಸಾವು ಪ್ರಕರಣದ ಬಗ್ಗೆ ಮರಣೋತ್ತರ ಪರೀಕ್ಷೆಯ ವರದಿ ಮತ್ತು ಎಫ್‌ಎಸ್‌ಎಲ್‌ ವರದಿಗಳೆರಡೂ ಲಭಿಸಿವೆ. ಇನ್ನೂ ಗೊಂದಲಗಳಿರುವುದರಿಂದ ವರದಿಗಳೆರಡನ್ನೂ ಪುನಃ ಕೂಲಂಕಷ ಪರಿಶೀಲಿಸಿ ಅಂತಿಮ ವರದಿ ನೀಡುವಂತೆ ಫೂರೆನ್ಸಿಕ್‌ ತಜ್ಞರನ್ನು ಕೋರಲಾಗಿದೆ ಎಂದು ಎಡಿಜಿಪಿ ತಿಳಿಸಿದರು. ಮಂಗಳೂರು ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌, ಡಿಸಿಪಿ ಉಮಾ ಪ್ರಶಾಂತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ರವಿಕಾಂತೇ ಗೌಡ ಉಪಸ್ಥಿತರಿದ್ದರು.

ಜೋಡುಪಾಲ: ಸಾಹಸಿ ಪೊಲೀಸರಿಗೆ ಬಹುಮಾನ
ಕೊಡಗು ಜಿಲ್ಲೆಯ ಜೋಡುಪಾಲದಲ್ಲಿ ಪ್ರಕೃತಿ ವಿಕೋಪ ಸಂದರ್ಭ ಸಂಕಷ್ಟಕ್ಕೆ ಸಿಲುಕಿದ್ದ ಜನರನ್ನು ರಕ್ಷಿಸಿ ಸಾಹಸ ಮೆರೆದ ದ.ಕ. ಜಿಲ್ಲೆಯ ಪೊಲೀಸರಾದ ಗಣೇಶ್‌ ಗೌಡ ಮತ್ತು ಮಂಜುನಾಥ್‌ ಅವರಿಗೆ ಬಹುಮಾನ ಘೋಷಿಸಿರುವುದಾಗಿ ಎಡಿಜಿಪಿ ಕಮಲ್‌ ಪಂತ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next