Advertisement

Udayavani Interview: ಬೆಂಗಳೂರು-ಮಂಗಳೂರು ಮಧ್ಯೆ “ಕ್ಷಿಪ್ರ’ ಸಂಚಾರ ಸೌಕರ್ಯ: ಕ್ಯಾ| ಚೌಟ

12:11 AM Jun 05, 2024 | Team Udayavani |

ರಾಜಧಾನಿ ಬೆಂಗಳೂರಿನಿಂದ ಮಂಗಳೂರು ಮಧ್ಯೆ ರಸ್ತೆ ಹಾಗೂ ರೈಲು ಸಂಪರ್ಕ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಅಭಿವೃದ್ಧಿಪಡಿಸಿ ಕಡಿಮೆ ಅವಧಿಯಲ್ಲಿ ಜನರು-ಸರಕು ಸಾಗಣೆಗೆ ಅನುಕೂಲವಾಗಿಸಲು ವಿಶೇಷ ಕಾರ್ಯಯೋಜನೆ ಹಮ್ಮಿಕೊಳ್ಳುವುದು ನನ್ನ ಮೊದಲ ಆದ್ಯತೆ ಎನ್ನುತ್ತಾರೆ ನೂತನ ಸಂಸದ ಕ್ಯಾ| ಬ್ರಿಜೇಶ್‌ ಚೌಟ.

Advertisement

ಸಂಸದರಾಗಿ ನಿಮ್ಮ ಮೊದಲ ಪ್ರತಿಕ್ರಿಯೆ

ಸಂಭ್ರಮ ಹಾಗೂ ಹೆಮ್ಮೆಯ ಕ್ಷಣವಿದು. ಈ ಗೆಲುವು ನನ್ನದಲ್ಲ; ಕಾರ್ಯಕರ್ತರದು. ಪ್ರಧಾನಿ ನರೇಂದ್ರ ಮೋದಿ ಮೇಲೆ ಮತ ದಾರರು ಇಟ್ಟ ವಿಶ್ವಾಸದ ಗೆಲುವು. ನಮ್ಮ ವಿಚಾರ ಹಾಗೂ ಸಂಘಟನೆಗೆ ಸಿಕ್ಕಿದ ಗೆಲುವು. ತುಳುನಾಡಿನ ಮಣ್ಣಿನ ನಾರಿಶಕ್ತಿಯ ಆಶೀ ರ್ವಾದದ ಫಲ. ಹಿಂದುತ್ವದ ಭದ್ರಕೋಟೆ ಯನ್ನು ಉಳಿಸಿ-ಬೆಳೆಸುವ ಗೆಲುವಿದು.

ತಮ್ಮ ಮುಖ್ಯ ಸಂಕಲ್ಪ…

ಹಿಂದುತ್ವಕ್ಕೆ ಬದ್ಧತೆಯ ನ್ನಿಟ್ಟು, ಅಭಿವೃದ್ಧಿಗೆ ಆದ್ಯತೆಯನ್ನಿಟ್ಟು ಕೊಂಡು ತುಳುನಾಡಿನ ಮಣ್ಣಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಜನರ ನಿರೀಕ್ಷೆಗೆ ಅನುಗುಣವಾಗಿ ಜಿಲ್ಲೆ ಯ ಅಭಿವೃದ್ಧಿ ಮಾಡುವುದು. ಎಲ್ಲ ನಮ್ಮ ಶಾಸಕರ ಸಹಕಾರದಿಂದ ಈ ಭಾಗದ ಆಸಕ್ತ ಹಾಗೂ ಕಳಕಳಿ ಇರುವವರ ಸಲಹೆ ಸಹಕಾರ ಪಡೆದು ಕಾರ್ಯಯೋಜನೆ ರೂಪಿಸುವೆ. ಈಗಾಗಲೇ ನಡೆಯುತ್ತಿರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ವಿಶೇಷ ಆದ್ಯತೆ ನೀಡುವೆ.

Advertisement

ಜಿಲ್ಲೆಗೆ ನಿಮ್ಮ ಮೊದಲ ಆದ್ಯತೆ…

ಅಭಿವೃದ್ಧಿಯೇ ನನ್ನ ಆದ್ಯತೆ. ಪ್ರಗತಿ ಶೀಲ ಜಿಲ್ಲೆ ನಮ್ಮದು. ಕರ್ನಾಟಕದ ಆರ್ಥಿಕ ಶಕ್ತಿಯಾಗಿ ಬೆಳಯಬಲ್ಲ ಜಿಲ್ಲೆ ನಮ್ಮದು. ಇದಕ್ಕಾಗಿ ನವಯುಗ-ನವಪಥ ಎಂಬ ಪರಿಕಲ್ಪನೆಯಲ್ಲಿ 9 ಕ್ಷೇತ್ರವನ್ನು ಪ್ರಧಾ ನವಾಗಿಟ್ಟು 9 ಕಾರ್ಯಸೂಚಿಯೊಂದಿಗೆ  ವಿಭಾಗವಾರು ಕೆಲಸ ಮಾಡುವೆ. ಮಂಗ ಳೂರಿನಿಂದ ಬೆಂಗಳೂರು ಸಹಿತ ಎಲ್ಲ ಭಾಗಗಳಿಗೆ ಕಡಿಮೆ ಅವಧಿಯಲ್ಲಿ ಜನರು ಹಾಗೂ ಸರಕು ಸಾಗಣೆ ಮಾಡಬೇಕು. ಆ ನೆಲೆಯಲ್ಲಿ ಎಲ್ಲರ ಸಲಹೆ ಪಡೆದು ಯೋ ಜನೆ ಜಾರಿಗೊಳಿಸಲಾಗುವುದು.

ನವಯುಗ-ನವಪಥ?

ಸಂಪರ್ಕ, ಮೂಲಸೌಕರ್ಯ ಅಭಿ ವೃದ್ಧಿಯಲ್ಲಿ ದಾಪುಗಾಲು, ಕೈಗಾರಿಕೆ ಮತ್ತು ಬಂಡವಾಳ ಆಕರ್ಷಣೆ, ಸ್ಟಾರ್ಟ್‌ ಅಪ್‌ ಮತ್ತು ಉದ್ಯಮಶೀಲತೆ, ಪ್ರವಾ ಸೋದ್ಯಮ, ನಾರಿಶಕ್ತಿ, ಸಂಸ್ಕೃತಿ ಹಾಗೂ ಪರಂಪರೆ, ಕೃಷಿ, ಪಶು ಸಂಗೋಪನೆ, ಮೀನುಗಾರಿಕೆ, ಯುವಜನತೆ ಮತ್ತು ಸಂವಹನ, ಕರಾವಳಿ ಅಭಿವೃದ್ಧಿ ಮತ್ತು ಭದ್ರತೆ ಎಂಬ 9 ಕ್ಷೇತ್ರಗಳನ್ನು ಕಾರ್ಯ ಸೂಚಿಯಲ್ಲಿ ಅಳವಡಿಸಲಾಗಿದೆ.

ನಿರೀಕ್ಷೆಯಷ್ಟು ಮತಗಳು ಸಿಕ್ಕವೇ?

ದೇಶವನ್ನು ಸೋಲಿಸಬೇಕು, ಪ್ರಧಾನಿ ಮೋದಿಯವರನ್ನು ಹಾಗೂ ನಮ್ಮ ವಿಚಾರ ವನ್ನು ಸೋಲಿಸಬೇಕು ಎಂಬ ನೆಲೆಯಿಂದ ಎಲ್ಲ ಶಕ್ತಿಗಳು ಒಟ್ಟಾಗಿದ್ದವು. ಇದರಂತೆ ಈ ನೆಲದಲ್ಲಿ ಹಿಂದುತ್ವ ಗೆದ್ದು ಬರಬೇಕು. ಅದರ ಆಧಾರದಲ್ಲಿ ಅಭಿವೃದ್ಧಿ ಆಗಬೇಕು ಎಂಬ ದೃಷ್ಟಿಯಿಂದ ನಾವು ಜನರನ್ನು ತಲುಪಿದ್ದೇವೆ. ಜನರ ಮನಸ್ಸು ಗೆದ್ದಿದ್ದೇವೆ ಎಂಬುದೇ ಮುಖ್ಯ.

ಪಕ್ಷ ಸಂಘಟನೆಗೆ ಆದ್ಯತೆ ಏನು?

ಸಂಘಟನಾತ್ಮಕವಾಗಿ ಮಂಗಳೂರು ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಕೈವಶ ಮಾಡುವ ಮೂಲಕ ಜಿಲ್ಲೆಯಾದ್ಯಂತ ತೆರಳಿ ಪಕ್ಷದ ಕಾರ್ಯಕರ್ತರ ಭಾವನೆ ಅರ್ಥಮಾಡುವ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಅವರ ಮೂಲಕ ಸಂಘಟನೆ ಗಟ್ಟಿಗೊಳಿಸಲಾಗುವುದು.

ಯುವ ಮನಸ್ಸು ಗಳನ್ನು ಜೋಡಿಸಿ ಕೊಂಡು ಜಿಲ್ಲೆಯನ್ನು ಹಿಂದುತ್ವದ ಭದ್ರಕೋಟೆಯಾಗಿಯೇ ಉಳಿಸುವುದು ನಮ್ಮ ಜವಾಬ್ದಾರಿ.

ಜಿಲ್ಲೆಯಲ್ಲಿ ಬಿಜೆಪಿಗೆ ಗೆಲುವಾದರೂ ಕೇಂದ್ರದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಗಲಿಲ್ಲ ಎಂಬ ಆಕ್ಷೇಪವೂ ಇದೆ. ಏನನ್ನುತ್ತೀರಿ?

ಫಲಿತಾಂಶದ ಬಗ್ಗೆ ಅವಲೋಕನವನ್ನು ಕೇಂದ್ರದ ನಮ್ಮ ನಾಯಕರು ಮಾಡಲಿ ದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿ ಪಟ್ಟಕ್ಕೆR ಏರಲಿದ್ದಾರೆ ಎಂಬ ಪೂರ್ಣ ವಿಶ್ವಾಸ ನನಗಿದೆ.

ಸಂದರ್ಶನ: ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next