Advertisement
ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು 389 ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಕರ್ತವ್ಯಕ್ಕೆ ಅಧಿಕಾರಿ, ಸಿಬಂದಿ ಹಾಗೂ ಪೊಲೀಸ್ ಸಿಬಂದಿ ಸೇರಿ ಒಟ್ಟು 2,101 ಮಂದಿಯನ್ನು ಉಭಯ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ.ದ.ಕ.ದಲ್ಲಿ 231 ಮತಗಟ್ಟೆಗಳಿದ್ದು 254 ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, 254 ಮತಗಟ್ಟೆ ಅಧಿಕಾರಿಗಳು, 254 ಮೈಕ್ರೊ ಅಬ್ಸರ್ವರ್, 254 ಗ್ರೂಪ್ ಡಿ ನೌಕರರನ್ನು ನಿಯೋಜಿಸಲಾಗುತ್ತಿದೆ. ಪ್ರತೀ ವಿಭಾಗದಲ್ಲಿ ಶೇ. 10 ಮಂದಿ ಯನ್ನು ಮೀಸಲು ಸಿಬಂದಿಯಾಗಿ ಕಾದಿರಿಸಲಾಗಿದೆ. 231 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ದ.ಕ.ದಲ್ಲಿ ಮೂಡುಬಿದಿರೆ, ಬೆಳ್ತಂಗಡಿ, ಪುತ್ತೂರು, ಸುಳ್ಯಗಳಲ್ಲಿ ತಾಲೂಕು ಕಚೇರಿಗಳು, ಮಂಗಳೂರಿನಲ್ಲಿ ತಾಲೂಕು ಪಂಚಾಯತ್, ಬಂಟ್ವಾಳದಲ್ಲಿ ಇನ್‌ಫೆಂಟ್ ಜೀಸಸ್ ಹಿ.ಪ್ರಾ. ಕನ್ನಡ ಮಾಧ್ಯಮ ಶಾಲೆ ಮೊಡಂಕಾಪು, ಕಡಬದಲ್ಲಿ ಪಟ್ಟಣ ಪಂಚಾಯತ್ ಕಚೇರಿ ಮಸ್ಟರಿಂಗ್, ಡಿ ಮಸ್ಟರಿಂಗ್ ಕೇಂದ್ರಗಳಾಗಿರುತ್ತವೆ. ಉಡುಪಿಯಲ್ಲಿ ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾಪು, ಹೆಬ್ರಿ ಹಾಗೂ ಕಾರ್ಕಳದಲ್ಲಿ ತಾಲೂಕು ಕಚೇರಿಗಳು ಮಸ್ಟರಿಂಗ್, ಡಿ ಮಸ್ಟರಿಂಗ್ ಕೇಂದ್ರಗಳಾಗಿವೆ.
Related Articles
Advertisement
ಡಿ. 14ರಂದು ಮಂಗಳೂರಿನಲ್ಲಿ ಮತ ಎಣಿಕೆಪಾಂಡೇಶ್ವರದ ರೊಸಾರಿಯೋ ಪದವಿ ಪೂರ್ವ ಕಾಲೇಜಿ ನಲ್ಲಿ ಡಿ. 14ರಂದು ಮತ ಎಣಿಕೆಯ ನಡೆಯಲಿದೆ. ಕಣದಲ್ಲಿ ಮೂವರು ಸ್ಪರ್ಧಿಗಳು
ದ್ವಿಸದಸ್ಯ ಸ್ಥಾನಕ್ಕಾಗಿನ ಚುನಾವಣೆಯಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಮತ್ತು ಎಸ್‌ಡಿಪಿಐಯ ಶಾಫಿ ಬೆಳ್ಳಾರೆ ಕಣದಲ್ಲಿದ್ದಾರೆ. ಇಬ್ಬರು ಮಾತ್ರ ಇರುತ್ತಿದ್ದರೆ ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು. ರಾಜಕೀಯ ಪಕ್ಷಗಳ ಬಲಾಬಲವನ್ನು ನಿಖರವಾಗಿ ಲೆಕ್ಕಹಾಕುವುದು ಕಷ್ಟಸಾಧ್ಯ. ಮೂಲಗಳ ಪ್ರಕಾರ ಬಿಜೆಪಿ -3,592, ಕಾಂಗ್ರೆಸ್- 1,900, ಎಸ್‌ಡಿಪಿಐ 220 ಹಾಗೂ ಜೆಡಿಎಸ್, ಪಕ್ಷೇತರರು ಸೇರಿ ಉಳಿದಂತೆ 328 ಮತದಾರರಿದ್ದಾರೆ. ಈ ಲೆಕ್ಕಾಚಾರದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಜಯ ಸಾಧಿಸುವುದು ಸುಲಭವಾಗಲಿದೆ. ಇನ್ನು ಎಲ್ಲ ಪಕ್ಷಗಳ ಒಂದಷ್ಟು ಅಸಮಾಧಾನಿತರು ತಮಗೆ ಮತ ನೀಡುತ್ತಾರೆ ಎಂಬ ನಿರೀಕ್ಷೆಯನ್ನು ಎಸ್‌ಡಿಪಿಐ ಹೊಂದಿದೆ.