Advertisement

Dakshina Kannada; ಅಕ್ರಮ ಮದ್ಯ,ಡ್ರಗ್ಸ್‌ ಪ್ರಕರಣ ಏರಿಕೆ

01:14 AM Mar 25, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣ ನೀತಿ ಸಂಹಿತೆ ಜಾರಿಯಾದಂದಿನಿಂದ ಅಕ್ರಮವಾಗಿ ಮಾರಾಟ ಮಾಡುವ ಮದ್ಯ ಮತ್ತು ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದ್ದು, ಈ ಪ್ರಮಾಣ ಏರಿಕೆಯಾತ್ತಿದೆ.

Advertisement

ಮಾ. 24ರ ವರೆಗೆ ಜಿಲ್ಲೆಯಲ್ಲಿ 5,08,296 ರೂ. ಮೌಲ್ಯದ 938.65 ಲೀ. ಮದ್ಯ ಮತ್ತು 5,94,950 ರೂ. ಮೌಲ್ಯದ 1.97 ಕೆ.ಜಿ. ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾದೆ. ಅಬಕಾರಿ ಇಲಾಖೆಯವರು 4,87,621 ರೂ. ಮೌಲ್ಯದ 895.09 ಲೀ. ಮದ್ಯ ಮತ್ತು ಪೊಲೀಸ್‌ ಇಲಾಖೆಯವರು 20,675 ರೂ. ಮೌಲ್ಯದ 43.56 ಲೀ. ಮದ್ಯ ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next