Advertisement

ಆರೋಗ್ಯ, ಶಿಕ್ಷಣದಲ್ಲಿ ದಕ್ಷಿಣ ಕನ್ನಡ ಮುಂದೆ: ಕೋಟ

12:09 AM Oct 31, 2019 | Team Udayavani |

ಬಂಟ್ವಾಳ: ಎಂಆರ್‌ಪಿಎಲ್‌ ಸಂಸ್ಥೆಯು ತನ್ನ ಸಿಎಸ್‌ಆರ್‌ ನಿಧಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಿಗೆ ಕೊಡಮಾಡಿರುವ 52.62 ಲಕ್ಷ ರೂ. ಮೌಲ್ಯದ ನಾಲ್ಕು ಆ್ಯಂಬುಲೆನ್ಸ್‌ಗಳ ಹಸ್ತಾಂತರ ಕಾರ್ಯಕ್ರಮವು ಬುಧವಾರ ಬಂಟ್ವಾಳ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತ ನಾಡಿ, ರಾಜ್ಯದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಸುರಕ್ಷಿತ ಹೆರಿಗೆಯ ವಿಚಾರದಲ್ಲೂ ದ.ಕ. ಹಾಗೂ ಉಡುಪಿ ಜಿಲ್ಲೆಗಳು ಹೆಚ್ಚಿನ ಪ್ರಗತಿ ಸಾಧಿಸಿದ್ದು, ಅದನ್ನು ಉಳಿಸಿಕೊಂಡು ಇನ್ನಷ್ಟು ಶಕ್ತಿಯುತವಾಗಿ ಕೆಲಸ ನಿರ್ವಹಿಸಲು ಹೆಚ್ಚಿನ ಮೂಲಸೌಕರ್ಯಗಳ ಅಗತ್ಯ ವಿದೆ. ಅದಕ್ಕೆ ಸಹಕರಿಸುವ ಮೂಲಕ ಎಂಆರ್‌ಪಿಎಲ್‌ ಸರಕಾರಕ್ಕೆ ಸಹಾಯ ಮಾಡಿದೆ ಎಂದರು.

Advertisement

ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ತನ್ನ ಸಾಮಾಜಿಕ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿರುವ ಎಂಆರ್‌ಪಿಎಲ್‌ ಕಳೆದ ವರ್ಷ 40 ಕೋ.ರೂ.ಗಳ ಸಿಎಸ್‌ಆರ್‌ ಅನುದಾನ ನೀಡಿದೆ. ಹಿಂದೆ ಲೇಡಿಗೋಶನ್‌ ಆಸ್ಪತ್ರೆಗೆ ಕಟ್ಟಡದ ಆವಶ್ಯಕತೆಯಿದ್ದಾಗ ಅಂದಿನ ಶಾಸಕ ಯೋಗೀಶ್‌ ಭಟ್‌, ಸಚಿವ ವೀರಪ್ಪ ಮೊಲಿ ಅವರು ಎಂಆರ್‌ಪಿಎಲ್‌ನ ಸಹಕಾರಕ್ಕೆ ಮನವಿ ಮಾಡಿದಾಗ 24 ಕೋ.ರೂ.ಗಳನ್ನು ನೀಡಿ ಪ್ರಸ್ತುತ ಕಟ್ಟಡವು ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ ಎಂದರು.

ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು ಬಂಟ್ವಾಳ ಆಸ್ಪತ್ರೆಗೆ ತಜ್ಞ ವೈದ್ಯರು ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಶಾಸಕರು ಹಾಗೂ ಎಂಆರ್‌ಪಿಎಲ್‌ ಸಂಸ್ಥೆಯಲ್ಲಿ ಮನವಿ ಮಾಡಿದರು.

ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಸ್ಥಾಯೀ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಸದಸ್ಯರಾದ ತುಂಗಪ್ಪ ಬಂಗೇರ, ಎಂ.ಎಸ್‌. ಮಹಮ್ಮದ್‌, ರವೀಂದ್ರ ಕಂಬಳಿ, ಮಂಜುಳಾ ಮಾವೆ, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಟಾಸ್‌ ಆಲಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ಸದಸ್ಯ ಪ್ರಭಾಕರ ಪ್ರಭು, ಬಂಟ್ವಾಳ ಪುರಸಭಾ ಸದಸ್ಯ ಗೋವಿಂದ ಪ್ರಭು, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಎಂಆರ್‌ಪಿಎಲ್‌ನ ಜಿಜಿಎಂ (ಎಚ್‌ಆರ್‌) ಬಿ.ಎಚ್‌.ವಿ. ಪ್ರಸಾದ್‌, ಜಿಎಂ (ಸಿಎಸ್‌ಆರ್‌) ಸುಬ್ರಾಯ ಭಟ್‌, ಸೀನಿಯರ್‌ ಮ್ಯಾನೇಜರ್‌ (ಸಿಎಸ್‌ಆರ್‌) ರಾಮಸುಬ್ರಹ್ಮಣ್ಯ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಸುಲೋಚನಾ ಭಟ್‌, ದೇವದಾಸ್‌ ಶೆಟ್ಟಿ, ಬಂಟ್ವಾಳ ಟಿಎಚ್‌ಒ ಡಾ| ದೀಪಾ ಪ್ರಭು, ಬೆಳ್ತಂಗಡಿ ಟಿಎಚ್‌ಒ ಡಾ| ಕಲಾಮಧು, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಸದಾಶಿವ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್‌ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next