Advertisement
ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಿ. ನಿರಂಜನ್, ಮಂಗಳೂರು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಹಾಗೂ ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ಉಮೇಶ್ ಟಿ. ಕರ್ಕೇರ ಆಯ್ಕೆಯಾದವರು.
ಮಂಗಳೂರು ತಾಲೂಕು ಬಡಗ ಎಕ್ಕಾರಿನ ಮೋನಪ್ಪ ಶೆಟ್ಟಿ ಅವರು ಪ್ರಗತಿ ಪರ ಕೃಷಿಕರಾಗಿದ್ದು ಸಹಕಾರಿ, ರಾಜಕೀಯ ಕ್ಷೇತ್ರ ವನ್ನು ಪ್ರವೇಶಿಸಿ ಜವಾಬ್ದಾರಿ ನಿರ್ವಹಿಸಿದವರು. 1977 ರಲ್ಲಿ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಮೊದಲು ಆಯ್ಕೆಯಾದರು. 1978 ರಿಂದ 83ರ ವರೆಗೆ ಇದರ ಅಧ್ಯಕ್ಷರಾಗಿ, 1983ರಿಂದ 1997ರ ವರೆಗೆ ನಿರ್ದೇಶಕರಾಗಿದ್ದವರು. 1997ರಿಂದ ಸುದೀರ್ಘ 25 ವರ್ಷ ಅಧ್ಯಕ್ಷರಾದರು. ಸಂಸ್ಥೆಯನ್ನು ನಿರಂತರ ಯಶಸ್ಸಿನತ್ತ ತೆಗೆದುಕೊಂಡು ಹೋದವರು.
Related Articles
ತಣ್ಣೀರುಪಂಥ ಬಾವಂತಬೆಟ್ಟು ನಿವಾಸಿ ಬಿ. ನಿರಂಜನ ಅವರು ಜಿಲ್ಲಾ ಪಂಚಾಯತ್ ಸದಸ್ಯರಾಗಿ,
ಉಪಾಧ್ಯಕ್ಷರಾಗಿ ಇದ್ದವರು. ತಣ್ಣೀರುಪಂಥ ಪ್ರಾಥಮಿಕ ಕೃಷಿ ಸಹಕಾರಿ ಸಂಘ ಆರಂಭಗೊಂಡ 1983ನೇ ಇಸವಿಯಿಂದ ಅಧ್ಯಕ್ಷರಾಗಿ ಸುದೀರ್ಘ 41 ವರ್ಷ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ, ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾಗಿ ಸುದೀರ್ಘವಾಗಿ ಸಹಕಾರಿ ಮತ್ತು ರಾಜಕೀಯ ರಂಗ ದಲ್ಲಿ ಸೇವೆ ಸಲ್ಲಿಸಿರುತ್ತಾರೆ.
Advertisement
ಅನಿಲ್ ಲೋಬೋಮಂಗಳೂರಿನ ಎಂಸಿಸಿ ಬ್ಯಾಂಕ್ ಎರಡನೇ ಬಾರಿಗೆ ಅಧ್ಯಕ್ಷರಾಗಿ ಈಚೆಗೆ ಕಾರ್ಯಭಾರ
ವಹಿಸಿಕೊಂಡಿರುವ ಅನಿಲ್ ಲೋಬೊ ಅವರು ಸಹಕಾರ ಚಳವಳಿಯಲ್ಲಿ ನಾಯಕತ್ವ ಹಾಗೂ ಕಾರ್ಯ ಕೌಶಲದಿಂದ ಗಮನ ಸೆಳೆದವರು. ಅವರ ಅವಧಿಯಲ್ಲಿ ಬ್ಯಾಂಕ್ ಪ್ರಗತಿ, ಲಾಭ, ವಿಸ್ತರಣೆಯನ್ನು ಕಂಡಿದೆ. ಗ್ರಾಹಕ ಸ್ನೇಹಿ ಕ್ರಮಗಳೊಂದಿಗೆ ಗಮನ ಸೆಳೆದವರು. ಕ್ರೈಸ್ತ ಸಮುದಾಯದಿಂದ ಸಹಕಾರ ರತ್ನ ಪಡೆಯುತ್ತಿರುವವರಲ್ಲಿ ಮೊದಲಿಗರು. ಉಮೇಶ್ ಟಿ. ಕರ್ಕೇರ
ಕುಳಾçಯವರಾದ ಉಮೇಶ್ ಅವರು ಕರ್ನಾಟಕ ಕರಾವಳಿ ಹಾಗೂ ಕೇರಳ, ಮಹಾರಾಷ್ಟ್ರದಾದ್ಯಂತ ತಮ್ಮ ಮತ್ಸ éರಾಜ್ ಫಿಶರೀಸ್ ಸಂಸ್ಥೆ ವತಿಯಿಂದ ನ್ಯಾಯ ಸಮ್ಮತ ಮೌಲ್ಯ ಸಿಗಲು ಶ್ರಮಿಸಿದವರು. ನಾಡದೋಣಿ ಮೀನುಗಾರರ ಸಂಘದ ಸ್ಥಾಪಕ ಅಧ್ಯಕ್ಷರಾಗಿ 1985ರಿಂದ 1991ರ ವರೆಗೆ ಇದ್ದವರು. ಕರ್ನಾಟಕ ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷರಾಗಿದ್ದರು. ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾಗಿ, ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸಂಚಾಲಕ ರಾಗಿ ಸೇವೆ ಸಲ್ಲಿಸಿದ್ದಾರೆ.