Advertisement
ಮಂಗಳೂರು ನಗರದಲ್ಲಿ ದಿನವಿಡೀ ಉತ್ತಮ ಮಳೆ ಸುರಿದಿದ್ದು, ಮಧ್ಯಾಹ್ನ ಗಾಳಿಯ ಅಬ್ಬರ ಹೆಚ್ಚಿತ್ತು. ಕೆಲವು ತಗ್ಗು ಪ್ರದೇಶದಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಯಿತು. ನಗರದ ಎಕ್ಕೂರು ಬಳಿ ಸಂಜೆ ಮರವೊಂದು ಹೆದ್ದಾರಿಗೆ ಬಿದ್ದು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಸುಳ್ಯದ ಜಾಲೂÕರು ಸಮೀಪ ಮರ ಹೆದ್ದಾರಿಗೆ ಬಿದ್ದಿದ್ದು, ಕೆಲ ಕಾಲ ಸಂಚಾರ ತಡೆ ಉಂಟಾಯಿತು. ಕೌಡಿಚ್ಚಾರು ಎಂಬಲ್ಲಿ ಮರವೊಂದು ವಿದ್ಯುತ್ ಲೈನ್‌ಗೆ ಬಿದ್ದು ಲೈನ್‌ಗೆ ಹಾನಿ ಉಂಟಾಗಿದೆ. ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯ ಮೆಸ್ಕಾಂ ತಡೆಗೋಡೆ ಕುಸಿದ ಘಟನೆ ನಡೆದಿದೆ. ಚಾರ್ಮಾಡಿಯಲ್ಲಿ ಮನೆಯೊಂದಕ್ಕೆ ಹಾನಿ ಉಂಟಾಗಿದೆ.
ಕರಾವಳಿಗೆ ಭಾರತೀಯ ಹವಾಮಾನ ಇಲಾಖೆಯು ಜು.15ರಂದು ರೆಡ್ ಅಲರ್ಟ್ ಘೋಷಿಸಿದೆ. ಈ ವೇಳೆ 204.5 ಮೀ.ಮೀ.ಗೂ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಮಳೆಯ ಜತೆ ಗಾಳಿ ಮತ್ತು ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುವ ನಿರೀಕ್ಷೆ ಇದೆ. ಜು.16ರಿಂದ 18ರ ವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸುಳ್ಯದಲ್ಲೂ ಮಳೆ
ಸುಳ್ಯ: ಸುಳ್ಯ ತಾಲೂಕಿನಾದ್ಯಂತ ರವಿವಾರ ದಿನವಿಡೀ ನಿರಂತರ ಧಾರಕಾರ ಮಳೆಯಾಗಿದ್ದು, ಮಾಣಿ- ಮೈಸೂರು ಹೆದ್ದಾರಿಯಲ್ಲಿ ಜಾಲೂÕರು ಸಮೀಪ ಮರ ಬಿದ್ದು ರಸ್ತೆ ತಡೆ ಉಂಟಾಗಿದ ಘಟನೆಯೂ ಸಂಭವಿಸಿದೆ.
Related Articles
ಉಡುಪಿ: ಜಿಲ್ಲೆಯಲ್ಲಿ ಜು.15ರಿಂದ 18ರ ವರೆಗೆ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ. ರವಿವಾರ ಜಿಲ್ಲಾದ್ಯಂತ ಬೆಳಗ್ಗಿನಿಂದ ರಾತ್ರಿಯವರೆಗೂ ನಿರಂತರವಾಗಿ ಮಳೆ ಸುರಿಯಿತು.
Advertisement
ಪಡುಬಿದ್ರಿ, ಉಚ್ಚಿಲ, ಕಾಪು, ಉದ್ಯಾವರ, ಮಲ್ಪೆ, ಉಡುಪಿ, ಮಣಿಪಾಲ, ಶಿರ್ವ, ಹೆಬ್ರಿ, ಕಾರ್ಕಳ ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿದಿದೆ.
ಕಾರ್ಕಳದಲ್ಲಿ 37.8, ಕುಂದಾಪುರ 97.6, ಉಡುಪಿ 35.2, ಬೈಂದೂರು 102.3, ಬ್ರಹ್ಮಾವರ 56.6, ಕಾಪು 37.6, ಹೆಬ್ರಿ 70.6 ಸಹಿತ ಜಿಲ್ಲೆಯಲ್ಲಿ ಸರಾಸರಿ 68.9ಮಿ.ಮೀ.ಮಳೆಯಾಗಿದೆ.
ಕುಂದಾಪುರ ಬೆಳ್ಳಾಲ ನಂದೊಳ್ಳಿಯ ಅಕ್ಕಯ್ಯ ಅವರ ಮನೆಯ ಗೋಡೆ ಕುಸಿದು 20 ಸಾವಿರ ರೂ., ಉಡುಪಿ ಮೂಡುತೋನ್ಸೆಯ ಸುಶೀಲಾ ಪೂಜಾರಿ ಅವರ ಮನೆಗೆ 15 ಸಾ. ರೂ., ಉಡುಪಿಯ ಬಾಲಚಂದ್ರ ಅವರ ಮನೆಗೆ 30 ಸಾ. ರೂ., ಅಂಜಾರಿನ ನೀತಾ ಶೆಟ್ಟಿ ಅವರ ಮನೆಗೆ 30 ಸಾ. ರೂ., ಉಡುಪಿಯ ನಾರಾಯಣ ಅವರ ಮನೆಗೆ 30 ಸಾ. ರೂ., ಅಲೆವೂರಿನ ಜಲಜಾ ಅವರ ಮನೆಗೆ 30 ಸಾ. ರೂ., ಗುಜ್ಜಾಡಿ ಕಂಚಗೋಡಿನ ವಲೇರಿಯನ್ ಡಯಾಸ್ ಅವರ ದನದ ಕೊಟ್ಟಿಗೆಗೆ 10 ಸಾ. ರೂ., ಜಪ್ತಿಕೆರೆಬೆಟ್ಟುವಿನ ಮೀನಾ ಅವರ ಮನೆಗೆ 35 ಸಾ. ರೂ.ನಷ್ಟ ಉಂಟಾಗಿದೆ.