Advertisement

ದ.ಕ. ದಲ್ಲಿ 3, ಉಡುಪಿಯಲ್ಲಿ 1ಹೊಸ ಇಎಸ್‌ಐ ಚಿಕಿತ್ಸಾಲಯ

01:19 AM Apr 24, 2022 | Team Udayavani |

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಉಜಿರೆ, ಗಂಜಿಮಠ ಹಾಗೂ ಉಡುಪಿಯ ಪಡುಬಿದ್ರಿಯಲ್ಲಿ ಹೊಸ ಇಎಸ್‌ಐ ಚಿಕಿತ್ಸಾಲಯಗಳು ಆರಂಭವಾಗಲಿವೆ. ಕಾರ್ಮಿಕ ಸಚಿವ ಶಿವರಾಮ್‌ ಹೆಬ್ಟಾರ್‌ ಈ ವಿಷಯ ತಿಳಿಸಿದ್ದಾರೆ.

Advertisement

ರಾಜ್ಯದಲ್ಲಿ 19 ಇಎಸ್‌ಐ ಹೊಸ ಚಿಕಿತ್ಸಾಲಯಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಅದರಂತೆಯೇ ದಕ್ಷಿಣ ಕನ್ನಡ ಹಾಗೂ ಉಡುಪಿ ಹೊರತುಪಡಿಸಿ ಕಲಬುರ್ಗಿ ಜಿಲ್ಲೆಯ ಚಿಂಚೊಳ್ಳಿ, ಹಾಸನದ ಅರಸೀಕರೆ, ಕೋಲಾರ ಜಿಲ್ಲೆಯ ಕೋಲಾರ ಮತ್ತು ನರಸಾಪುರ, ಬಳ್ಳಾರಿಯ ಸಂಡೂರು, ರಾಮನಗರದ ಕನಕಪುರ, ಬೀದರ್‌ನ ನೌಬಾದ್‌, ಯಾದಗಿರಿ, ಬೆಳಗಾವಿಯ ಹತ್ತರಗಿ, ಹಾವೇರಿಯ ರಾಣೆಬೆನ್ನೂರು, ಬಾಗಲಕೋಟೆಯ ಮುಧೋಳ, ಚಿಕ್ಕಬಳ್ಳಾಪುರದ ಗೌರಿಬಿದನೂರು, ತುಮಕೂರಿನ ವಸಂತನರಸಾಪುರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮತ್ತು ಕುಮಟಾದಲ್ಲಿ ಹೊಸ ಚಿಕಿತ್ಸಾಲಯಗಳು ಬರಲಿವೆ.

ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ 13 ಅಕ್ರಮ ರೋಹಿಂಗ್ಯಾ ವಲಸಿಗರ ಬಂಧನ

ಇತ್ತೀಚಿನ ಬಜೆಟ್‌ನಲ್ಲಿ ಕಾರ್ಮಿಕರ ಸಂಕ್ಷೇಮ ಯೋಜನೆಗಳ ಕುರಿತು ಪ್ರಸ್ತಾವಿಸಲಾಗಿತ್ತು.ಚಿಕಿತ್ಸಾಲಯಗಳಲ್ಲದೆ, ಹುಬ್ಬಳ್ಳಿ ಹಾಗೂ ದಾವಣಗೆರೆಯಲ್ಲಿರುವ ಇಎಸ್‌ಐ ಆಸ್ಪತ್ರೆಗಳ ಸಾಮರ್ಥ್ಯ ವನ್ನು 50 ಹಾಸಿಗೆಯಿಂದ 100ಕ್ಕೆ ಏರಿಸಲಾಗುವುದು. ಈ ಹಿನ್ನೆಲೆಯಲ್ಲಿ ಇಲಾಖೆಯು ಯೋಜನೆಯ ತ್ವರಿತ ಜಾರಿಗೆ ಸಂಪೂರ್ಣ ಪ್ರಯತ್ನ ಮಾಡಲಿದೆ ಎಂದು ಸಚಿವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next