Advertisement

Dakshina Kannada: 14 ಗ್ರಾ.ಪಂ.ಗಳಲ್ಲಿ ಶೇಕಡಾ 100 ತೆರಿಗೆ ಸಂಗ್ರಹ

11:48 PM May 15, 2024 | Team Udayavani |

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ 14 ಗ್ರಾಮ ಪಂಚಾಯತ್‌ಗಳಲ್ಲಿ 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ ಶೇ. 100 ತೆರಿಗೆ ಸಂಗ್ರಹವಾಗಿದೆ. ಒಟ್ಟಾರೆಯಾಗಿ ಜಿಲ್ಲೆಯ 9 ತಾಲೂಕು ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಬರುವ 223 ಗ್ರಾಮ ಪಂಚಾಯತ್‌ಗಳಲ್ಲಿ ಶೇ. 81.34 ತೆರಿಗೆ ಸಂಗ್ರಹಗೊಂಡಿದೆ.

Advertisement

ಮನೆ ತೆರಿಗೆ, ಶಿಕ್ಷಣ ಕರ, ಸ್ವತ್ಛತೆ ಕರ, ಆರೋಗ್ಯ ಕರ, ಗ್ರಂಥಾಲಯ ಕರ, ಭಿಕ್ಷುಕರ ಕರ, ಬೀದಿದೀಪ ಕರ, ನೀರಿನ ಕರ, ನೀರು ನೈರ್ಮಲ್ಯ ಕರ, ಕಟ್ಟಡ ಪರವಾನಿಗೆ ಶುಲ್ಕ, ವ್ಯಾಪಾರ ಪರವಾನಿಗೆ ಶುಲ್ಕ, ಉದ್ದಿಮೆ ಶುಲ್ಕ, ಮಳಿಗೆಗಳ ಬಾಡಿಗೆ, ಸಂತೆ ಕರ ಮುಂತಾದವುಗಳನ್ನು ಒಳಗೊಂಡಿದೆ.

ಕಳೆದ ಬಾರಿಗಿಂತ ಕಡಿಮೆ
2022-23ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇ. 86.71ರಷ್ಟು ತೆರಿಗೆ ಸಂಗ್ರಹವಾಗಿತ್ತು. ಈ ಬಾರಿ ಶೇ. 81.34 ತೆರಿಗೆ ಸಂಗ್ರಹಗೊಂಡಿದ್ದು, ಶೇ. 5.37ರಷ್ಟು ಕುಸಿತ ಕಂಡಿದೆ. ಕಳೆದ ಬಾರಿ ಮೇಲುಗೈ ಸಾಧಿ ಸಿದ್ದ ಪುತ್ತೂರು (ಶೇ. 92.53) ಈ ಸಾಲಿನಲ್ಲಿ 3ನೇ ಸ್ಥಾನ (ಶೇ. 87.19)ದಲ್ಲಿದೆ. ಕಳೆದ ಬಾರಿ 3ನೇ ಸ್ಥಾನ (ಶೇ. 86.71)ದಲ್ಲಿದ್ದ ಸುಳ್ಯ ಈ ಬಾರಿ (ಶೇ. 90.84) ಮೇಲುಗೈ ಸಾಧಿಸಿದೆ.

ಸುಮಾರು ವರ್ಷಗಳಿಂದ ತೆರಿಗೆ ಪರಿಷ್ಕರಣೆ ಆಗಿರಲಿಲ್ಲ. ಸರಕಾರದ ನಿರ್ದೇಶನದಂತೆ ವೈಜ್ಞಾನಿಕವಾಗಿ ಸರ್ವೇ ನಡೆಸಿ ನಿಯಮಾನುಸಾರ ತೆರಿಗೆ ಪರಿಷ್ಕರಣೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ತೆರಿಗೆ ಸಂಗ್ರಹಣೆಯಲ್ಲಿ ಶೇಕಡವಾರು ಕುಸಿತ ಕಂಡಿರಬಹುದು. ಆದರೆ ಒಟ್ಟಾರೆ ತೆರಿಗೆ ಸಂಗ್ರಹ ಹೆಚ್ಚಳಗೊಂಡಿದೆ. ಎಲ್ಲ ಪಂಚಾಯತ್‌ಗಳಿಗೆ ಗುರಿ ನೀಡಲಾಗಿದ್ದು ಅದರಂತೆ ತೆರಿಗೆ ಸಂಗ್ರಹಿಸುವಂತೆ ಸೂಚಿಸಲಾಗಿದೆ.
– ಡಾ| ಆನಂದ್‌, ಜಿ.ಪಂ. ಸಿಇಒ, ದಕ್ಷಿಣ ಕನ್ನಡ

ಸುಳ್ಯ ಗರಿಷ್ಠ; ಬಂಟ್ವಾಳ ಕನಿಷ್ಠ
ತಾಲೂಕು ಕರ ಸಂಗ್ರಹ
ಸುಳ್ಯ ಶೇ. 90.84
ಬೆಳ್ತಂಗಡಿ ಶೇ. 88.80
ಪುತ್ತೂರು ಶೇ. 87.19
ಕಡಬ ಶೇ. 86.01
ಮಂಗಳೂರು ಶೇ. 81.86
ಮೂಡುಬಿದಿರೆ ಶೇ. 81.58
ಮೂಲ್ಕಿ ಶೇ. 81.11
ಉಳ್ಳಾಲ ಶೇ. 78.10
ಬಂಟ್ವಾಳ ಶೇ. 69.53
ಒಟ್ಟು ಶೇ. 81.34 (50,24,66,912 ರೂ.)

Advertisement

-ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next