Advertisement
ಜಿಲ್ಲೆಯ ಬೆಳ್ತಂಗಡಿ, ಧರ್ಮಸ್ಥಳ, ಬಂಟ್ವಾಳ, ಬಿ.ಸಿ.ರೋಡು, ಕಲ್ಲಡ್ಕ, ಪುಂಜಾಲಕಟ್ಟೆ, ನಾವೂರು, ಸರಪಾಡಿ, ಅಳಕೆ ಮಜಲು, ಇರುವೈಲು, ಕನ್ಯಾನ, ಸುಳ್ಯ, ಸುಬ್ರಹ್ಮಣ್ಯ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಉತ್ತಮ ಮಳೆ ಸುರಿದಿದೆ. ಮಂಗಳೂರು ನಗರದಲ್ಲಿ ಸಂಜೆ ವೇಳೆಗೆ ತುಂತುರು ಮಳೆಯಾಗಿತ್ತು. ಸೆಕೆ ಮತ್ತು ಬಿಸಿಲಿನಿಂದ ಕೂಡಿದ ವಾತಾವರಣ ಇತ್ತು.ಸುಳ್ಯದ ಪರಿವಾರಕಾನ ಬಳಿ ಚಿಕನ್ ಸೆಂಟರ ಮೇಲೆ ಮರ ಬಿದ್ದು ಹಾನಿಯಾಗಿದೆ. ಅಜ್ಜಾವರದಲ್ಲಿ ಮರ ಬಿದ್ದು ಮನೆಗೆ ಹಾನಿಯಾಗಿದೆ. ಪೆರಾಜೆಯಲ್ಲಿ ತೆಂಗಿನ ಮರ ಬಿದ್ದು, ಮನೆ, ಕಾರಿಗೆ ಹಾನಿಯಾಗಿದೆ.
ಗಾಳಿ-ಮಳೆಯ ಪರಿಣಾಮ ಜಿಲ್ಲೆಯ ಕೆಲವು ಕಡೆಗಳಲ್ಲಿ ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಎ. 28ರಿಂದ “ಎಲ್ಲೋ ಅಲರ್ಟ್’
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಕರಾವಳಿ ಭಾಗದಲ್ಲಿ ಎ.28 ರಿಂದ ಎ.30ರವರೆಗೆ ಭಾರೀ ಮಳೆ ಸುರಿಯುವ ನಿರೀಕ್ಷೆ ಇದ್ದು, “ಎಲ್ಲೋ ಅಲರ್ಟ್’ ಘೋಷಿಸಲಾಗಿದೆ.
Related Articles
ಕಳೆದ ಕೆಲವು ದಿನಗಳ ಹಿಂದೆ ದ.ಕ. ಜಿಲ್ಲೆಯಲ್ಲಿ ದಾಖಲಾಗುತ್ತಿದ್ದ ಗರಿಷ್ಠ ಉಷ್ಣಾಂಶದಲ್ಲಿ ತುಸು ಇಳಿಕೆ ಕಂಡಿದೆ. ಮಂಗಳೂರು ನಗರದಲ್ಲಿ ಗುರುವಾರ 34.6 ಡಿ.ಸೆ. ಗರಿಷ್ಠ ಮತ್ತು 24.9 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು. ಇದು ವಾಡಿಕೆಯ ತಾಪಮಾನವಾಗಿದೆ.
Advertisement
ಕುಕ್ಕೆಯಲ್ಲಿ ಉತ್ತಮ ಮಳೆಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಭಾಗದ ಹಲವೆಡೆ ಬುಧವಾರವೂ ಮಳೆಯಾಗಿದೆ. ಸುಬ್ರಹ್ಮಣ್ಯದಲ್ಲಿ ಮಂಗಳವಾರವೂ ಗಾಳಿ ಸಹಿತ ಭಾರೀ ಮಳೆಯಾಗಿತ್ತು. ಕುಕ್ಕೆ ಸುಬ್ರಹ್ಮಣ್ಯ, ಬಳ್ಪ, ಯೇನೆಕಲ್ಲು, ಐನೆಕಿದು, ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು ಬಿಳಿನೆಲೆ ಸೇರಿದಂತೆ ಹಲವೆಡೆ ಬುಧವಾರ ಅಪರಾಹ್ನ ಬಳಿಕ ಭಾರೀ ಮಳೆಯಾಗಿದೆ. ಬೆಳ್ತಂಗಡಿ: ಎರಡನೇ ದಿನವೂ ಉತ್ತಮ ಮಳೆ
ಬೆಳ್ತಂಗಡಿ: ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸಂಜೆ ಉತ್ತಮ ಮಳೆಯಾಗುತ್ತಿದೆ. ಬುಧವಾರ ತಾಲೂಕಿನ ಬಹುತೇಕ ಕಡೆ ಒಂದು ತಾಸಿಗೂ ಅಧಿಕ ಕಾಲ ಹಗುರ ಮಳೆಯಾಗಿದೆ. ಬೆಳ್ತಂಗಡಿ, ಗುರುವಾಯನಕೆರೆ, ಉಜಿರೆ, ಮುಂಡಾಜೆ, ಕಲ್ಮಂಜ, ಉಜಿರೆ, ಲಾೖಲ, ದಿಡುಪೆ, ಗೇರುಕಟ್ಟೆ, ಮಡಂತ್ಯಾರು, ಕರಾಯ, ಕಲ್ಲೇರಿ, ಉರುವಾಲು, ಉಪ್ಪಿನಂಗಡಿ ಪರಿಸರ, ಕಣಿಯೂರು, ನಾರಾವಿ, ವೇಣೂರು, ಅಳದಂಗಡಿ, ಮದ್ದಡ್ಕ, ಪಾರೆಂಕಿ, ಮಚ್ಚಿನ, ಕೊಯ್ಯೂರು ಸಹಿತ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಕೆರೆ, ಕೊಳವೆಬಾವಿ, ನದಿ ಬರಿದಾಗಿದ್ದರಿಂದ ಕೃಷಿಕರು ಅಡಿಕೆ ತೋಟಗಳಿಗೆ ನೀರಿಲ್ಲದೆ ಒಣಗುವ ಪರಿಸ್ಥಿತಿ ಎದುರಾಗಿತ್ತು. 2 ದಿನಗಳ ಮಳೆಯಿಂದಾಗಿ ಕೆಲವು ದಿನಗಳ ಮಟ್ಟಿಗೆ ಕೃಷಿ ಚೇತರಿಸಿಕೊಂಡಿದೆ. ವಾತಾವರಣ ತಂಪಾಗಿದ್ದು, ಬಿಸಿಲ ಬೇಗೆಯಿಂದ ಬಸವಳಿದಿದ್ದ ಜನತೆಗೆ ಸ್ವಲ್ಪ ನಿರಾಳವೆನಿಸಿದೆ. ಸುಳ್ಯದಲ್ಲಿ ಭಾರೀ ಗಾಳಿ ಮಳೆ ; ಹಲವು ಕಡೆ ಹಾನಿ
ಸುಳ್ಯ/ಅರಂತೋಡು: ಸುಳ್ಯ ತಾಲೂಕಿನ ಹಲವೆಡೆ ಬುಧವಾರ ಅಪರಾಹ್ನ ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದ್ದು, ಹಲವೆಡೆ ಹಾನಿ ಸಂಭವಿಸಿದೆ. ಬಿಸಿಲ ಬೇಗೆಗೆ ಕಾದು ಬೆಂದು ಬರಡಾಗಿದ್ದ ಇಳೆಗೆ ಮಳೆ ತಂಪೆರೆದಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಮಳೆ ಸುರಿಯಿತು. ಸುಳ್ಯದಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಅಪರಾಹ್ನ ಗಾಳಿ, ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಮಳೆ ಸುರಿಯಿತು. ಸುಳ್ಯ ನಗರ, ಐವರ್ನಾಡು, ಗುತ್ತಿಗಾರು, ಅರಂತೋಡು, ಕಲ್ಲುಗುಂಡಿ, ಸಂಪಾಜೆ, ಬೆಳ್ಳಾರೆ, ಎಣ್ಮೂರು, ಕಲ್ಮಡ್ಕ ಸೇರಿದಂತೆ ತಾಲೂಕಿನ ಹಲವೆಡೆ ಉತ್ತಮ ಮಳೆಯಾಗಿದೆ. ಕುಕ್ಕುಜಡ್ಕ, ಅಜ್ಜಾವರ, ಪಂಜದಲ್ಲಿ ಸಾಧಾರಣ ಮಳೆಯಾಗಿದೆ. ಮನೆ, ಕಾರಿಗೆ ಹಾನಿ
ಬುಧವಾರ ಸುರಿದ ಗಾಳಿ ಮಳೆಗೆ ಸುಳ್ಯಕ್ಕೆ ಬರುವ 33 ಕೆವಿ ವಿದ್ಯುತ್ ಕಡಿತಗೊಂಡಿದೆ. ಪರಿವಾರಕಾನ ಬಳಿ ಚಿಕನ್ ಸೆಂಟರ್‌ವೆುàಲೆ ಮರ ಬಿದ್ದು ಹಾನಿಗೊಂಡಿದೆ. ಹಲವಾರು ಕಡೆಗಳಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು ಮುರಿದಿವೆ. ಭಾರೀ ಗಾಳಿ ಮಳೆಗೆ ಪೆರಾಜೆ ಅಮೇಚೂರ್‌ಬಳಿ ಸುಕುಮಾರ ಅವರ ಮನೆಗೆ ಹಾಗೂ ಅವರ ಆಮ್ನಿ ಕಾರ್‌ನ ಮೇಲೆ ಮರ ಬಿದ್ದು ಅಪಾರ ಹಾನಿ ಸಂಭವಿಸಿದೆ. ಅಜ್ಜಾವರ ಗ್ರಾಮದ ದೊಡ್ಡೇರಿಯಲ್ಲಿ ರತ್ನಾವತಿ ಅವರ ಮನೆಗೆ ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದೆ. ದೊಡ್ಡತೋಟ ಸಮೀಪದ ಚೆನ್ನಡ್ಕದಲ್ಲಿ ಮರ ವಿದ್ಯುತ್ ಲೈನ್ ಮೇಲೆ ಬಿದ್ದು ಮುರಿದು ವಿದ್ಯುತ್ ಕಂಬ ಮುರಿದು ರಸ್ತೆಗೆ ಬಿದ್ದು, ರಸ್ತೆ ಬಂದ್ ಅಗಿದೆ. ಹಲವೆಡೆ ವಿದ್ಯುತ್ ಲೈನ್, ಕಂಬಗಳಿಗೆ ಹಾನಿಯಾಗಿದೆ. ಹಲವೆಡೆ ರಸ್ತೆಗೆ ಮರದ ಗೆಲ್ಲು ಬಿದ್ದಿದೆ.
ಸಂಪಾಜೆಯ ಗೂನಡ್ಕ ದರ್ಕಾಸ್ ಉಷಾ ರಾಮ್ ನಾಯ್ಕ…, ವಿಶ್ವನಾಥ ಪೋಕ್ಲ, ಗೂನಡ್ಕ ಅಶ್ರಫ್ ಅವರ ಮನೆ ಗಳಿಗೆ ಹಾನಿಯಾಗಿದೆ. ತೊಡಿಕಾನ
ಗ್ರಾಮದಲ್ಲಿ ವಿದ್ಯುತ್ ತಂತಿ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಮುರಿದಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಇಲ್ಲದ ಪರಿಣಾಮ ಬಿಎಸ್ಸೆನ್ನೆಲ್ ದೂರವಾಣಿ ಸಂಪರ್ಕವೂ ಸೇವೆಯೂ ಸ್ಥಗಿತವಾಗಿದೆ.