Advertisement
ಬಾಗಲಕೋಟೆ ಜಿಲ್ಲೆಯ ನವ ನಗರ ಐಟಿಐ ಕಾಲೇಜು ಬಳಿ ನಿವಾಸಿ ಮುದುಕಪ್ಪ ಬಾಳಪ್ಪ ಬಿದರಿ (23) ಸಿಕ್ಕಿಬಿದ್ದ ಆರೋಪಿ.
ಕಾಣಿಕೆ ಡಬ್ಬ ಕಳವು ಸಂಬಂಧ ದೈವಸ್ಥಾನದ ಆಡಳಿತ ಮಂಡಳಿಯು ಜು. 6ರಂದು ಸಾಮೂಹಿಕ ಪ್ರಾರ್ಥನೆಯೊಂದಿಗೆ ದೈವ ದರ್ಶನ ನಡೆಸಿ, ದೈವದ ಬಳಿ ಉಯಿಲು ನೀಡಿತ್ತು. ಈ ಸಂದರ್ಭ ದೈವವು 24 ಗಂಟೆಯೊಳಗೆ ಕಳ್ಳನನ್ನು ತೋರಿಸಿಕೊಡುತ್ತೇನೆ ಎಂಬ ಅಭಯ ನೀಡಿತ್ತು.
Related Articles
ಜು. 7ರಂದು ಬೆಳಗ್ಗೆ ಆರೋಪಿ ಬಿದರಿ ಉಡುಪಿ ಕೆಎಸ್ಸಾರ್ಟಿಸಿ ನಿಲ್ದಾಣದ ಬಳಿ ಮಲಗಿದ್ದು, ಅಲ್ಲಿಗೆ ಪ್ರಯಾಣಿಕರೋರ್ವರನ್ನು ಬಿಡಲು ಬಂದಿದ್ದ ಚಿಟಾ³ಡಿ ಕುಕ್ಕಿಕಟ್ಟೆ ದೈವಸ್ಥಾನದ ಆಡಳಿತ ಸಮಿತಿ ಸದಸ್ಯರೋರ್ವರು ಬೆಳಗ್ಗೆ 8 ಗಂಟೆಯವರೆಗೂ ಬಸ್ ನಿಲ್ದಾಣದಲ್ಲಿ ಯುವಕ ನೋರ್ವ ನಿದ್ದೆ ಮಾಡುತ್ತಿರುವುದನ್ನು ಗಮನಿಸಿದ್ದಾರೆ. ಹತ್ತಿರ ಹೋಗಿ ನೋಡಿದಾಗ ಕಾಣಿಕೆ ಡಬ್ಬಿ ಕಳವು ಮಾಡಿದ ವ್ಯಕ್ತಿಯನ್ನೇ ಹೋಲುತ್ತಿದ್ದು ಈ ಬಗ್ಗೆ ತತ್‌ಕ್ಷಣ ಉಡುಪಿ ಪೊಲೀಸರಿಗೆ ಮಾಹಿತಿ ನೀಡಿದರು. ಕೂಡಲೇ ಗಸ್ತು ನಿರತ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
Advertisement
ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ತಾನು ಚಿಟಾ³ಡಿ ಮತ್ತು ಕಟಪಾಡಿಯಲ್ಲಿನ ದೈವಸ್ಥಾನದ ಕಾಣಿಕೆ ಡಬ್ಬಿಯನ್ನು ಎಗರಿಸಿರುವುದಾಗಿ ಹೇಳಿದ್ದಾನೆ. ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ಈ ಹಿಂದೆ ದೊಡ್ಡಣ್ಣಗುಡ್ಡೆ ಮತ್ತು ಬೈಲೂರು ದೈವಸ್ಥಾನದ ಕಾಣಿಕೆ ಡಬ್ಬಿಯನ್ನೂ ತಾನೇ ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ದೈವದ ಪವಾಡ ಪ್ರಬಲಕಾಣಿಕೆ ಡಬ್ಬ ಕಳ್ಳ 24 ತಾಸಿನ ಒಳಗಡೆ ಪತ್ತೆಯಾಗುವ ಮೂಲಕ ತುಳುನಾಡಿನಲ್ಲಿ ದೈವದ ಪವಾಡ ಮತ್ತು ಕಾರಣಿಕ ಇನ್ನೂ ಪ್ರಬಲವಾಗಿದೆ ಎಂಬುದನ್ನು ತೋರಿಸಿಕೊಟ್ಟಂತಾಗಿದೆ ಎಂದು ಚಿಟಾ³ಡಿ ದೈವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀನಿವಾಸ್ ಹೇಳಿದ್ದಾರೆ.