Advertisement

ದೈವ ಕೋಲವು ಪ್ರದರ್ಶನದ ವಸ್ತುವಲ್ಲ, ಪ್ರತಿಭಾಕಾರಂಜಿಯಲ್ಲಿ ಅವಕಾಶ ಕೊಡಬಾರದು: ಸುನಿಲ್ ಕುಮಾರ್

05:57 PM Jul 06, 2023 | Team Udayavani |

ಬೆಂಗಳೂರು: ತುಳುನಾಡಿನ ಧಾರ್ಮಿಕ ಆರಾಧನೆಯಾದ ದೈವ ಕೋಲವು ಪ್ರದರ್ಶನದ ವಸ್ತು ಅಲ್ಲ ಎಂದು ಮಾಜಿ ಸಚಿವ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ವಿಧಾನಸಭೆಯಲ್ಲಿ ಹೇಳಿದ್ದಾರೆ.

Advertisement

ಶಿಕ್ಷಣ ಇಲಾಖೆಯ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ದೈವದ ಕೋಲ ಪ್ರದರ್ಶನಕ್ಕೆ‌ ಅವಕಾಶ ನೀಡಿ ಆದೇಶ ನೀಡಿರುವ ವಿಚಾರಕ್ಕೆ ಸಂಬಂಧಿಸಿ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಸುನಿಲ್ ಕುಮಾರ್ ಪ್ರಸ್ತಾಪ ಮಾಡಿದರು.

ಇದನ್ನೂ ಓದಿ:Team India ಸತ್ಯವಾಯ್ತು ಕೋಚ್ ದ್ರಾವಿಡ್ ಮಾತು…; ವಿರಾಟ್- ರೋಹಿತ್ ಟಿ20 ಆಟ ಮುಗಿಯಿತು

ಪ್ರತಿಭಾ ಕಾರಂಜಿಯಲ್ಲಿ ಜಾನಪದ ವಿಭಾಗದಲ್ಲಿ ದೈವಕೋಲಕ್ಕೆ ಶಿಕ್ಷಣ ಇಲಾಖೆ ಅವಕಾಶ ನೀಡಿದೆ. ದೈವದ ಕೋಲ ಪ್ರದರ್ಶನದ ವಸ್ತು ಅಲ್ಲ. ಕೂಡಲೇ ಈ ಆದೇಶವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪ್ರಾಥಮಿಕ ಮತ್ತು ಶಿಕ್ಷಣ ಸಚಿವ‌‌ ಮಧು ಬಂಗಾರಪ್ಪ ಅವರು ಇದರ ಬಗ್ಗೆ ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next