Advertisement

ಆರ್ಥಿಕ ಸಬಲತೆಗೆ ಹೈನುಗಾರಿಕೆ ಸಹಕಾರಿ

11:05 AM Jul 22, 2019 | Team Udayavani |

ಹಿರೇಕೆರೂರ: ರೈತರು ಕೃಷಿ ಚಟುವಟಕೆ ಜತೆಗೆ ಹೈನುಗಾರಿಕೆ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಹೇಳಿದರು.

Advertisement

ರಟ್ಟೀಹಳ್ಳಿ ತಾಲೂಕಿನ ಮಕರಿ ಗ್ರಾಮದಲ್ಲಿ ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳಿ, ಧಾರವಾಡ ಹಾಲು ಒಕ್ಕೂಟ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಮತ್ತು ಮಕರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಆಶ್ರಯದಲ್ಲಿ ನಡೆದ ನೂತನ ಕಟ್ಟಡ ಹಾಗೂ ಬಲ್ಕ್ ಮಿಲ್ಕ್ ಕೂಲರ್‌ (ಬಿಎಂಸಿ) ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ವೈಜ್ಞಾನಿಕ ರೀತಿಯಲ್ಲಿ ಹೈನುಗಾರಿಕೆ ನಿರ್ವಹಣೆ ಮೂಲಕ ಲಾಭದಾಯಕ ಉದ್ಯೋಗವನ್ನಾಗಿ ಮಾಡಿಕೊಂಡರೆ ಜೀವನಕ್ಕೊಂದು ಆಧಾರವಾಗುವುದು. ಸರ್ಕಾರ ಹಾಲಿಗೆ ಪ್ರೋತ್ಸಾಹಧನ ಸಹ ಒದಗಿಸುತ್ತಿದೆ. ಧಾರವಾಡ ಹಾಲು ಒಕ್ಕೂಟಕ್ಕೆ ಹಾವೇರಿ ಜಿಲ್ಲೆಯಿಂದಲೇ ಅತೀ ಹೆಚ್ಚು ಹಾಲು ಸಂಗ್ರಹವಾಗುತ್ತದೆ. ಜಿಲ್ಲೆಯಲ್ಲಿ ಹಿರೇಕೆರೂರ ಮತ್ತು ರಟ್ಟೀಹಳ್ಳಿ ತಾಲೂಕಿನಿಂದ ಹಾಲು ಸಂಗ್ರಹವಾಗುತ್ತಿದೆ ಎಂದರು.

ಧಾರವಾಡ ಹಾಲು ಒಕ್ಕೂಟದ ಬಿಎಂಸಿ ವ್ಯವಸ್ಥಾಪಕ ಕೆ.ಆರ್‌.ಪಲ್ಲೇದ ಮಾತನಾಡಿ, ಸ್ಥಳೀಯ ರೈತರಿಗೆ ಅನಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಿಎಂಸಿ ಘಟಕ ಸ್ಥಾಪಿಸಲಾಗಿದೆ. ತಕ್ಷಣ ಹಾಲನ್ನು ತಂಪು ಮಾಡಿದರೆ ಹಾಲಿನ ಗುಣಮಟ್ಟ ಕಾಪಾಡಿಕೊಳ್ಳಬಹುದಾಗಿದೆ ಎಂದರು.

ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಮಕರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗಣೇಶಪ್ಪ ಬಣಕಾರ, ಗ್ರಾಪಂ ಅಧ್ಯಕ್ಷೆ ನೀಲಮ್ಮ ನಿಟ್ಟೂರ, ಆರ್‌.ಎನ್‌.ಗಂಗೋಳ, ತಾಪಂ ಸದಸ್ಯ ರೇವಣೆಪ್ಪ ಯರಳ್ಳಿ, ಗ್ರಾಪಂ ಉಪಾಧ್ಯಕ್ಷ ಮಾಲತೇಶ ಗಂಗೋಳ, ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ವೀರೇಶ ತರಲಿ, ಜಿ.ಡಿ.ದೇಸಾಯಿ, ಡಾ| ಆರ್‌.ಎಸ್‌.ಹೆಗಡೆ, ಶಿವಪ್ಪ ದೊಡ್ಮನಿ, ವೈ.ಡಬ್ಲು. ಹೆಡಿಗ್ಗೊಂಡ, ಎಂ.ಬಿ.ಬಣಕಾರ, ಪ್ರಶಾಂತ ಎಸ್‌., ಜಗದೀಶ ಮಾಳಗಿ, ಹನುಮಂತಪ್ಪ ಇಂಗಳಗೊಂದಿ, ಮಹ್ಮದ್‌ಹನೀಫ್‌ ಸಾಬ್‌ ರಟ್ಟೀಹಳ್ಳಿ, ಆಶೋಕ ನಾಗಣ್ಣನವರ, ಶಿದ್ದಪ್ಪ ಬಾನಪ್ಪಗೌಡ್ರ, ಲೋಕಪ್ಪ ಶಿವಪ್ಪನವರ ಸೇರಿದಂತೆ ಹಾಲು ಉತ್ಪಾದಕರ ಸಂಘ ಮತ್ತು ಗ್ರಾಪಂ ಸದಸ್ಯರು ಗ್ರಾಮಸ್ಥರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next