Advertisement
ಹೆಬ್ಟಾಳದ ಹೈನುಗಾರಿಕೆ ಮಹಾವಿದ್ಯಾಲಯದ ಹೈನುಗಾರಿಕೆ ತಂತ್ರಜ್ಞಾನ ಮತ್ತು ಸಂಸ್ಕರಣಾ ವಿಭಾ ಗವು ಹಾಲಿನಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ಇದರಿಂದ ಬಿಟೆಕ್ ಡೈರಿ ಟೆಕ್ನಾಲಜಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಷದ ಕೊನೆಯ ಸೆಮಿಸ್ಟರ್ ವಿದ್ಯಾರ್ಥಿಗಳು ಒಂದೇ ತಿಂಗಳಲ್ಲಿ 1.20 ಲಕ್ಷ ರೂ. ನಿವ್ವಳ ಆದಾಯ ಗಳಿಸಿದ್ದಾರೆ.
Related Articles
Advertisement
“ಪ್ರಧಾನಿ ನರೇಂದ್ರ ಮೋದಿ ಅವರು “ರೆಡಿ’ (ಗ್ರಾಮೀಣ ಉದ್ಯಮ ಜಾಗೃತಿ ಮತ್ತು ಅಭಿವೃದ್ಧಿ ಯೋಜನೆ) ಯೋಜನೆ ಅಡಿ ವಿದ್ಯಾರ್ಥಿಗಳಿಗೆ ತಾಂತ್ರಿಕ ತರಬೇತಿನೀಡಲಾಗಿದೆ. ಕಲಿಕೆ ಪೂರೈಸಿ ಹೊರಗೆ ಬರುವವಿದ್ಯಾರ್ಥಿಗಳು ಉದ್ಯೋ ಗಕ್ಕಾಗಿ ಅಲೆದಾಡುವ ಬದಲಿಗೆ, ಅವರೇ ಉದ್ಯೋಗ ಸೃಷ್ಟಿಕರ್ತರಾಗಬೇಕುಎಂಬ ಮುಖ್ಯ ಉದ್ದೇಶದಿಂದ ಕಲಿಕೆ ಹಂತದಲ್ಲೇವಿದ್ಯಾರ್ಥಿಗಳನ್ನು ತಯಾರು ಮಾಡಲಾಗುತ್ತಿದೆ.
ಕೇವಲ 25 ಸಾವಿರ ರೂ. ಮೂಲ ಬಂಡವಾಳದಿಂದ ಶುರುವಾದ ಈ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ತಂತ್ರಜ್ಞಾನವು ಅಲ್ಪಾವಧಿಯಲ್ಲಿ ಫಲ ನೀಡುತ್ತಿದೆ.ಇಂದು ವಿದ್ಯಾರ್ಥಿಗಳು ತಯಾರಿಸಿದ ತುಪ್ಪ ಬೀದರ್‌ವರೆಗೂ ಹೋಗುತ್ತಿದೆ’ ಎಂದು ಹೈನುಗಾರಿಕೆ ತಂತ್ರಜ್ಞಾನಮತ್ತು ಸಂಸ್ಕರಣಾ ವಿಭಾಗದ ಮುಖ್ಯಸ್ಥ ಡಾ.ಮಹೇಶ್ ಕುಮಾರ್ “ಉದಯವಾಣಿ’ಗೆ ತಿಳಿಸಿದರು.
ಹಾಸನ ಜಿಲ್ಲೆಯಿಂದ ಸಾವಯವ ಪ್ರಮಾಣಿಕೃತ ಹೈನುಗಾರಿಕೆ ಮಾಡುವ ರೈತರಿಂದ ಹಾಲು ಖರೀದಿಸಲಾಗುತ್ತದೆ. ಅದನ್ನು ನಮ್ಮ ಪ್ರಯೋಗಾಲಯದಲ್ಲಿ ಸಂಸ್ಕರಿಸಿ, ಹಾಲಿನಲ್ಲಿಯ ಕ್ರೀಮ್ ಅನ್ನು ಬೇರ್ಪಡಿಸಲಾಗುತ್ತದೆ. ನಂತರ ಅದರಿಂದ ತುಪ್ಪ ತಯಾರಿಸಲಾಗುತ್ತದೆ. ಹತ್ತು ಲೀಟರ್ ಹಾಲಿಗೆ ಒಂದು ಕೆಜಿ ತುಪ್ಪ ಬರುತ್ತದೆ ಎಂದು ಮಾಹಿತಿ ನೀಡಿದರು.
ರೈತರಿಗೂ ತರಬೇತಿ :
ವಿದ್ಯಾರ್ಥಿಗಳಿಗೆ ಮಾತ್ರವಲ್ಲ; ರೈತರಿಗೂ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಬಗ್ಗೆ ತರಬೇತಿ ನೀಡಲು ಹೈನುಗಾರಿಕೆ ಮಹಾವಿದ್ಯಾಲಯ ಯೋಜನೆ ರೂಪಿಸಿದೆ. “ಈಗಾಗಲೇ ಕ್ಯಾಂಪಸ್‌ನಲ್ಲಿ ಇನ್‌ಕ್ಯೂಬೇಷನ್ ಸೆಂಟರ್ ತೆರೆಯಲು ಉದ್ದೇಶಿಸಲಾಗಿದೆ. ಅಲ್ಲಿ ರೈತರು ಸೇರಿದಂತೆಆಸಕ್ತರಿಗೆ ತರಬೇತಿ ನೀಡಲಾಗುವುದು. ಹೀಗೆತರಬೇತಿ ಪಡೆದವರು, ಇಲ್ಲಿಯೇ ಉತ್ಪನ್ನಗಳನ್ನುತಯಾರಿಸಿ, ತಮ್ಮದೇ ಬ್ರ್ಯಾಂಡ್ ಮಾಡಿಕೊಂಡುಮಾರಾಟ ಕೂಡ ಮಾಡಲು ಅವಕಾಶ ಇದೆ’ ಎಂದು ಕಾಲೇಜು ಡೀನ್ ಪ್ರೊ.ಎ. ಸಚ್ಚಿಂದ್ರಬಾಬು ತಿಳಿಸಿದರು.
ದುಪ್ಪಟ್ಟಿಗಿಂತ ಹೆಚ್ಚು ಆದಾಯ :
ಕೊರೊನಾ ಹಾವಳಿ ಪರಿಣಾಮ ಹಾಲಿನ ದರ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಈಗ ಬರುವುದಕ್ಕಿಂತ ದುಪ್ಪಟ್ಟು ಆದಾಯತರುವ ತಂತ್ರಜ್ಞಾನವೂ ಇದಾಗಿದೆ. ಕಳೆದಒಂದು ವರ್ಷದಿಂದ ರೈತರಿಂದ ಖರೀದಿಸುವಹಾಲಿನ ದರ ಇಳಿಮುಖವಾಗಿದ್ದು, ಲೀಟರ್‌ಗೆ24-25 ರೂ. ಇದೆ. ಈ ಮೊದಲೇ ನೆರೆ ಮತ್ತಿತರಕಾರಣಗಳಿಂದ ನಷ್ಟ ಅನುಭವಿಸುತ್ತಿರುವವರುಇದರಿಂದ ಮತ್ತಷ್ಟು ತೊಂದರೆಗೆ ಸಿಲುಕಿದ್ದಾರೆ. ಆದರೆ, ಮೌಲ್ಯವರ್ಧಿತ ಉತ್ಪನ್ನಗಳ ಮೂಲಕದುಪ್ಪಟ್ಟಿಗಿಂತ ಹೆಚ್ಚು ಆದಾಯ ಗಳಿಸುವ ತಂತ್ರಜ್ಞಾನವು ವರವಾಗಿ ಪರಿಣಮಿಸಲಿದೆ.
ಲೆಕ್ಕಾಚಾರ ಹೀಗಿದೆ :
ಒಂದು ಲೀಟರ್ ಹಾಲಿಗೆ 30 ರೂ. ಅಂದುಕೊಳ್ಳೋಣ. ಹತ್ತು ಲೀಟರ್ ಹಾಲಿಗೆ300 ರೂ. ಆಗುತ್ತದೆ. ಅದರಲ್ಲಿನ ಕ್ರೀಮ್ ಅನ್ನುಬೇರ್ಪಡಿಸಿ ಒಂದು ಕೆಜಿ ತುಪ್ಪತಯಾರಿಸಬಹುದು. ಒಂದು ಕೆಜಿ ತುಪ್ಪಕ್ಕೆ 500ರೂ. ಆಗುತ್ತದೆ. ಎಲ್ಲ ಖರ್ಚು ತೆಗೆದು ಎರಡು-ಮೂರು ಪಟ್ಟು ಹಣ ಉಳಿತಾಯ ಆಗುತ್ತದೆ. ಅಲ್ಲದೆ, ಉಳಿದ 9 ಲೀ. ಹಾಲಿನಿಂದಪನ್ನೀರ್, ಲಸ್ಸಿ ಮತ್ತಿತರ ಉತ್ಪನ್ನಗಳನ್ನುಮಾಡಬಹುದು ಎಂದು ಡಾ.ಮಹೇಶ್ ಕುಮಾರ್ ತಿಳಿಸಿದರು.
-ವಿಜಯಕುಮಾರ ಚಂದರಗಿ