Advertisement

ವೈಜ್ಞಾನಿಕತೆಯಿಂದ ಹೈನುಗಾರಿಕೆ ಲಾಭ: ಕೊಡವೂರು

12:30 AM Feb 22, 2019 | Team Udayavani |

ಬ್ರಹ್ಮಾವರ: ಗ್ರಾಮೀಣ ಭಾಗದ ಹೈನುಗಾರರು ಆಧುನಿಕ ವೈಜ್ಞಾನಿಕ ಪದ್ಧತಿ ಅನುಸರಿಸುತ್ತಿರುವುದರಿಂದ ಹೈನುಗಾರಿಕೆ ಲಾಭವಾಗುತ್ತಿದೆ ಎಂದು ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ಕೊಡವೂರು ರವಿರಾಜ್‌ ಹೆಗ್ಡೆ ಹೇಳಿದರು.

Advertisement

ಅವರು ಪೇತ್ರಿಯಲ್ಲಿ ಚೇರ್ಕಾಡಿ ಹಾಲು ಉತ್ಪಾದಕ ಸಹಕಾರಿ ಸಂಘದ ವಿಸ್ತರಿತ ಕಟ್ಟಡ ಕ್ಷೀರಾಮೃತವನ್ನು ಉದ್ಘಾಟಿಸಿ ಮಾತನಾಡಿದರು.ಪೇಟೆಯಿಂದ ಹಳ್ಳಿಗೆ ಬರುವ ಏಕೈಕ ಆರ್ಥಿಕ ಮೂಲವೆಂದರೆ ಅದು ಹೈನುಗಾರಿಕೆ ಎಂದರು.

ಉತ್ಪಾದನೆ ಏರಿಕೆ
90ರ ದಶಕದಲ್ಲಿ ದ.ಕ. ಹಾಲು ಒಕ್ಕೂಟದಲ್ಲಿ ದಿನವೊಂದಕ್ಕೆ 50 ಸಾವಿರ ಲೀಟರ್‌ ನಷ್ಟು ಹಾಲನ್ನು ಸಂಗ್ರಹಣೆಯಾಗುತ್ತಿತ್ತು. ಬೇರೆ ಜಿಲ್ಲೆಗಳಿಂದ ಹಾಲನ್ನು ಖರೀದಿಸ ಲಾಗುತ್ತಿತ್ತು. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಹರಕೆ ಬಯಲಾಟದಿಂದ ಈಗ ಸರಾಸರಿ 4 ಲಕ್ಷ 50 ಸಾವಿರ ಲೀ. ಹಾಲು ಸಂಗ್ರಹಣೆಯಾಗುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಒಕ್ಕೂಟದಿಂದಲೇ ಹಾಲಿನ ಪೌಡರ್‌ ತಯಾರಿಕಾ ಘಟಕ ಪ್ರಾರಂಭಿಸುವ ಚಿಂತನೆ ನಡೆದಿದೆ ಎಂದು ಹೆಗ್ಡೆ ಹೇಳಿದರು.ಶ್ರೀ ಮುಕುಂದ ಸಭಾಭವನವನ್ನು ಶಾಸಕ ಕೆ. ರಘುಪತಿ ಭಟ್‌ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಕಮಲಾಕ್ಷ ಹೆಬ್ಟಾರ್‌ ಕನ್ನಾರು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಸುಧಾಕರ್‌ ಶೆಟ್ಟಿ ಮೈರ್ಮಾಡಿ, ಚೇರ್ಕಾಡಿ ಗ್ರಾ.ಪಂ. ಅಧ್ಯಕ್ಷ ಹರೀಶ್‌ ಶೆಟ್ಟಿ, ದ.ಕ. ಹಾಲು ಒಕ್ಕೂಟ ನಿರ್ದೇಶಕರಾದ ಅಶೋಕ್‌ ಕುಮಾರ್‌ ಶೆಟ್ಟಿ, ಜಾನಕಿ ಹಂದೆ, ಉಪವ್ಯವಸ್ಥಾಪಕ ಡಾ.ಅನಿಲ್‌ ಕುಮಾರ್‌ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಡಾ| ಬಿ.ವಿ. ಸತ್ಯನಾರಾಯಣ, ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾದ ನಾಗರತ್ನ ಹೆಬ್ಟಾರ್‌, ಸಂತೋಷ್‌ ಸಾವಂತ್‌, ಲಲಿತಾ ಪಿ. ನಾಯ್ಕ, ಕುಶಲಾ ಶೆಡ್ತಿ, ಸೋಮನಾಥ ನಾಯಕ್‌, ಲಕ್ಷಿ ¾à ಪೂಜಾರ್ತಿ, ಬಿ. ರತ್ನ ಬಾಯಿ, ಪಶು ವೈದ್ಯಾಧಿಕಾರಿ ಡಾ| ಅಮೃತ್‌, ಮುಖ್ಯ ಕಾರ್ಯನಿರ್ವಾಹಣಾಧಿ ಕಾರಿ ಚಂದ್ರಶೇಖರ್‌ ಕಾರಂತ, ಹಾಲು ಪರೀಕ್ಷಕ ಅಲ್ವಿನ್‌ ಡಿ’ಸೋಜಾ, ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು, ಕಾರ್ಯನಿರ್ವಹಣಾಧಿಕಾರಿ, ನಿರ್ದೇಶಕರು, ಹೈನುಗಾರರು ಉಪಸ್ಥಿತರಿದ್ದರು.

ಸಂಘದ ಬೆಳವಣಿಗೆಗೆ ಸಹಕರಿಸಿದವರನ್ನು ಸಮ್ಮಾನಿಸಲಾಯಿತು.ಸಂಘದ ಉಪಾಧ್ಯಕ್ಷ ಶ್ಯಾಮ್‌ ಪ್ರಸಾದ್‌ ಭಟ್‌ ಸ್ವಾಗತಿಸಿ, ಸಹಾಯಕ ವ್ಯವಸ್ಥಾಪಕ ಸುಧಾಕರ್‌ ನಿರೂಪಿಸಿದರು.  ಶಂಕರ್‌ ನಾಯಕ್‌ ವಂದಿಸಿದರು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next