Advertisement

ಡೇರಿ ಚುನಾವಣೆ: ಚುನಾವಣಾಧಿಕಾರಿಯೇ ಗೈರು

05:14 PM May 23, 2022 | Team Udayavani |

ಚನ್ನರಾಯಪಟ್ಟಣ: ಚುನಾವಣೆ ಘೋಷಣೆ ಮಾಡಿ ಹಾಗೂ ಚಿಹ್ನೆಯನ್ನು ಸಹ ಅಭ್ಯರ್ಥಿಗಳಿಗೆ ನೀಡಿ ಚುನಾವಣೆ ಮಾಡಲು ಚುನಾವಣಾಧಿಕಾರಿ ಸುನಿಲ್‌ ಸ್ಥಳಕ್ಕೆ ಆಗಮಿಸಿಲ್ಲ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜತ್ತೇನಹಳ್ಳಿ ರಾಮಚಂದ್ರ ಆರೋಪಿಸಿದ್ದಾರೆ.

Advertisement

ಅವರು ತಾಲೂಕಿನ ನುಗ್ಗೇಹಳ್ಳಿ ಹೋಬಳಿ ಹೆಬ್ಬಳಲು ಹಾಲು ಉತ್ಪಾದಕರ ಮಹಿಳಾ ಸಹ ಕಾರ ಸಂಘದ ಚುನಾವಣೆ ಮೇ 22ರಂದು 9 ಗಂಟೆಗೆ ಘೋಷಣೆ ಮಾಡಲಾಗಿದೆ. ಆದರೆ 11ಗಂಟೆಯಾ ದರೂ ಚುನಾವಣಾಧಿಕಾರಿ ಸ್ಥಳಕ್ಕೆ ಆಗಮಿಸಿಲ್ಲ. ಒಟ್ಟು 18 ಜನ ಅಭ್ಯರ್ಥಿ ಒಳಗೊಂಡಂತೆ ಚುನಾ ವಣೆ ನಡೆಸಲಾಗುತ್ತಿದ್ದು, ಇದರಲ್ಲಿ ಎಲ್ಲ ಅಭ್ಯರ್ಥಿ ಗಳು ತಮ್ಮ ತಮ್ಮ ಪರ ಮತದಾರರ ಬಳಿ ಮತಯಾ ಚನೆ ಮಾಡಿದ್ದಾರೆ. ಆದರೆ ಇದರ ಹಿಂದೆ ಸ್ಥಳೀಯ ಶಾಸಕರ ಕೈವಾಡವಿದೆ ಎಂದು ಆರೋಪಿಸಿದರು.

ರಾಜಕೀಯ ದುರುದ್ದೇಶವಿದೆ: ಈ ಗ್ರಾಮದಲ್ಲಿ ಈಗಾಗಲೇ ಡೇರಿ ಕಾರ್ಯದರ್ಶಿಯವರ ಪತಿ ಚುನಾವಣಾ ವಿಚಾರಕ್ಕಾಗಿಯೇ ತಲೆ ಕೆಡಿಸಿಕೊಂಡು ಸಾವನಪ್ಪಿದ್ದಾನೆ. ಆದರೂ ಸಹ ಚುನಾವಣಾಧಿಕಾರಿ ಗಳು ರಾಜಕೀಯದ ದುರುದ್ದೇಶವಿಟ್ಟುಕೊಂಡು ಚುನಾವಣಾ ಸ್ಥಳಕ್ಕೆ ಆಗಮಿಸಿಲ್ಲ. ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು.

ಗೊಂದಲ ಸೃಷ್ಟಿಯಾಗಿದೆ: ಇದೇ ವೇಳೆ ಡೇರಿ ಕಾರ್ಯದರ್ಶಿ ಮೇಘನಾ ಮಾತನಾಡಿ, ಚುನಾ ವಣೆ ಮಾಡಲು ಈಗಾಗಲೇ ಚುವಣಾಧಿಕಾರಿಗಳಿಗೆ ತಿಳಿಸಿದೆ ಆದರೆ, ಚುನಾವಣಾಧಿಕಾರಿಗಳು ದಿನಾಂಕ ನಿಗಧಿ ಮಾಡಿ ಭಾನುವಾರ ಚುನಾವಣೆ ನಡೆಸಲು ಸೂಚಿಸಿತ್ತು. ನಮ್ಮ ಮನೆಯಲ್ಲಿ ಸೂತಕದ ಛಾಯೆ ಇದ್ದರೂ ಸಹ ನಾನು ಚುನಾವಣೆ ಮಾಡಲು ಸಿದ್ಧನಿ ದ್ದೇನೆ. ನನ್ನ ಗಂಡ ಮರಣ ಹೊಂದಿದ ಹಿನ್ನೆಲೆ ನನ್ನ ಗಂಡನ ಆಸೆಯಂತೆ ಚುನಾವಣೆ ಮಾಡುವುದು ಸೂಕ್ತವಾಗಿದೆ. ಆದರೆ, ಚುನಾವಣಾಧಿಕಾರಿಯೂ ಸ್ಥಳಕ್ಕೆ ಆಗಮಿಸಿಲ್ಲ. ಹಾಗೂ ಡೇರಿ ಸದಸ್ಯರುಗಳು ಚುನಾವಣೆಯೂ ನಡೆಯದೇ ಗೊಂದಲ ಸೃಷ್ಟಿಯಾಗಿದೆ ಎಂದರು.

ಅಧಿಕಾರಿಯನ್ನು ವಜಾ ಮಾಡಿ: ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ ಮಾತನಾಡಿ, ತಾಲೂಕಿನಲ್ಲಿ ಸಹಕಾರಿ ಸಂಘಗಳಲ್ಲಿ ಚುನಾವಣೆ ಪ್ರತಿಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ತಾಲೂಕು ಸಹಕಾರಿ ಅಭಿವೃದ್ಧಿ ಅಧಿಕಾರಿ ಇಂತಹ ಅನೇಕ ಸಂಘ ಸಂಸ್ಥೆಗಳ ಚುನಾವಣೆಯಲ್ಲಿ ಬಹ ಳಷ್ಟು ಲೋಪದೋಷಗಳನ್ನು ಮಾಡಿದ್ದಾರೆ. ಆದರೂ ಕೂಡ ಇಂತಹ ಅಧಿಕಾರಿಯನ್ನು ಇಟ್ಟು ಕೊಂಡಿರುವುದು ಅಪರಾಧ. ಇದಕ್ಕೆ ಸಂಬಂಧಪಟ್ಟ ಜಿಲ್ಲಾ ಸಂಘ ಸಂಸ್ಥೆಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಇಂತಹ ಬೇಜವಾಬ್ದಾರಿ ಅಧಿ ಕಾರಿಯನ್ನು ಕೂಡಲೇ ಕೆಲಸದಿಂದ ವಜಾ ಮಾಡ ಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಕಾರಿಗಳ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

Advertisement

ಇದೇ ವೇಳೆ ರಾಜ್ಯ ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ತಾಲೂಕು ಅಧ್ಯಕ್ಷೆ ಕಾಂತಮ್ಮ, ಉಪಾಧ್ಯಕ್ಷ ಸ್ವಾಮೀಗೌಡ, ತಾಲೂಕು ಅಧ್ಯಕ್ಷ ಶಿವರಾಂ, ಜಿಲ್ಲಾ ಗೌರವಾಧ್ಯಕ್ಷ ಪ್ರಕಾಶ್‌, ಡೇರಿ ಚುನಾವಣಾ ಅಭ್ಯರ್ಥಿಗಳಾದ ಸೌಮ್ಯ, ರಾಧ, ಯಶೋದಮ್ಮ, ಶೋಭ, ರೇಣುಕಮ್ಮ, ಸಾವಿತ್ರಮ್ಮ, ತಿಮ್ಮಮ್ಮ, ಕಮಲಮ್ಮ, ಗಾಯಿತ್ರಿ ಇನ್ನು ಮುಂತಾದ ಅಭ್ಯರ್ಥಿಗಳು ಸ್ಥಳದಲ್ಲಿ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next