Advertisement

ನಿತ್ಯ ಯೋಗ : ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆಗೆ ಪೂರಕ

03:38 AM Jun 17, 2021 | Team Udayavani |

ಎಲ್ಲ ರೋಗಗಳಿಗೂ ಮೂಲ ಕಾರಣ ಮನಸ್ಸಿನ ಮೇಲಾಗುವ ಒತ್ತಡ. ಇದು ಮಕ್ಕಳನ್ನೂ ಹೊರತಾಗಿಲ್ಲ. ಕೊರೊನಾ ಸಾಂಕ್ರಾ ಮಿಕದ ಈ ಸಂದರ್ಭದಲ್ಲಿ ಕಳೆದ ಎರಡು ವರ್ಷಗಳಿಂದ ಮಕ್ಕಳು ಮನೆಯ ನಾಲ್ಕು ಗೋಡೆಗಳ ಮಧ್ಯೆ ಅಥವಾ ಮನೆ ಕಾಂಪೌಂಡ್‌ನ‌ ಒಳಗೆ ಬಂಧಿ ಯಾಗಿದ್ದಾರೆ. ಜತೆಗೆ ಆನ್‌ಲೈನ್‌ ಶಿಕ್ಷಣದ ಒತ್ತಡವೂ ಅಧಿಕವಾಗಿದೆ. ಇದರೊಂದಿಗೆ ಇನ್ನಿತರ ಹಲವು ಕಾರಣಗಳು ಅವರಲ್ಲೂ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸಿದೆ. ಹೀಗಾಗಿ ನಿತ್ಯ ಯೋಗಾಭ್ಯಾಸವನ್ನು ಮಾಡಿಸುವುದು ಉತ್ತಮ.

Advertisement

ಮಕ್ಕಳಿಗಾಗಿ ಯೋಗ
ಯೋಗದಿಂದ ಮನಸ್ಸಿಗೆ ನೆಮ್ಮದಿ, ದೇಹಕ್ಕೆ ಚೈತನ್ಯ, ಏಕಾಗ್ರತೆ, ಮನೋಬಲ ವೃದ್ಧಿ ಮಾತ್ರವಲ್ಲ ಮಕ್ಕಳ
ದೈಹಿಕ ಬೆಳವಣಿಗೆಯೂ ಉತ್ತಮಗೊಳ್ಳುತ್ತದೆ. ನಿತ್ಯ ಯೋಗದಲ್ಲಿ ಮಕ್ಕಳು ವೃಕ್ಷಾಸನ, ತಾಡಾಸನ, ಭುಜಂಗಾಸನ, ಚಕ್ರಾಸನ, ಮಕರಾಸನ, ಬಾಲಾಸನ, ವೃಕ್ಷಾಸನ, ತ್ರಿಕೋನಾಸನ, ಶಶಂಕಾಸನ ವನ್ನು ಮಾಡಬಹುದು. ಇದರೊಂದಿಗೆ ಸ್ವಲ್ಪ ಹತ್ತು ಕನಿಷ್ಠ 10 ನಿಮಿಷವಾದರೂ ಚಿನ್‌ಮುದ್ರೆಯಲ್ಲಿ ಮಕ್ಕಳನ್ನು ಕುಳಿತುಕೊಳ್ಳುವಂತೆ ಮಾಡಬೇಕು. ಇದರಿಂದ ಅವರ ಮನಸ್ಸು ಶಾಂತವಾಗುವುದು ಜತೆಗೆ ಏಕಾಗ್ರತೆ ವೃದ್ಧಿಗೂ ಸಹಕಾರಿ ಯಾಗುತ್ತದೆ. ಹೆಚ್ಚು ತುಂಟತನ ಮಾಡುವ ಮಕ್ಕಳಿನ್ನು ಚಿನ್‌ಮುದ್ರೆ ಯಲ್ಲಿ ಕೂರಿಸುವುದರಿಂದ ಸಾಕಷ್ಟು ಪ್ರಯೋಜನವಾಗುವುದು.

ವೃಕ್ಷಾಸನ, ತಾಡಾಸನ, ಭುಜಂಗಾಸನದಿಂದ ಏಕಾಗ್ರತೆ ವೃದ್ಧಿಸುವುದು, ಬೆನ್ನುಮೂಳೆ, ಮಾಂಸಖಂಡಗಳಿಗೂ ಉತ್ತಮ. ಇದರಿಂದ ಮುಂದೆ ಉತ್ತಮ ನಿಲುವು, ಎತ್ತರ, ಮೈಕಟ್ಟು ಪಡೆಯಲು ಸಾಧ್ಯವಾಗು ವುದು. ಜತೆಗೆ ಸೂರ್ಯ ನಮಸ್ಕಾರವನ್ನು ಅಭ್ಯಾಸ ಮಾಡಿಸುವುದರಿಂದ ಅದರಲ್ಲಿರುವ ವಿವಿಧ ಆಸನಗಳು ಮಕ್ಕಳ ಕೀಲುಗಳು ಮತ್ತು ಮಾಂಸ ಖಂಡಗಳನ್ನು ಸಡಿಲ ವಾಗಿಸಿ ಅವರು ಎತ್ತರ ಬೆಳೆಯಲು ಮತ್ತು ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿ ಆರೋಗ್ಯವಂತರಾಗಿರಲು ಸಹಕಾರಿಯಾಗುತ್ತದೆ.

8 ವರ್ಷ ಮೇಲ್ಪಟ್ಟ ಮಕ್ಕಳಿಗೆ ನಾಡಿ ಶೋಧನಾ ಪ್ರಾಣಾಯಾಮ ಅತ್ಯುತ್ತಮ. ಇದು ಅವರ ಮೆದುಳಿಗೆ ವಿಶ್ರಾಂತಿಯನ್ನು ಕೊಟ್ಟು ಮನಸ್ಸು ಶಾಂತಗೊಳಿಸಲು ಸಹಕಾರಿಯಾಗುವುದು. ಜತಗೆ ಏಕಾಗ್ರತೆಯನ್ನು ವೃದ್ಧಿಸುತ್ತದೆ. ಇದರಿಂದ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುವುದು. ಮಕ್ಕಳು ಪ್ರಾಣಾಯಾಮದ ಅಭ್ಯಾಸ ಮಾಡುವುದರಿಂದ ಅವರ ಶ್ವಾಸಕೋಶದ ಆರೋಗ್ಯವೂ ಉತ್ತಮವಾಗಿರುತ್ತದೆ. ಜತೆಗೆ ಎಲ್ಲ ಅಂಗಾಂಗಗಳಿಗೂ ರಕ್ತಪೂರೈಕೆ ಸಮರ್ಪಕವಾಗಿರುವುದು. ಇದರಿಂದ ದೇಹದ ಕ್ಷಮತೆ ಹೆಚ್ಚಾಗುವುದು.

ದೇಹ ಮತ್ತು ಮನಸ್ಸಿನ ಹೊಂದಾಣಿಕೆ ಮಾಡು ವುದು ದೊಡ್ಡವರಿಗೆ ಸುಲಭ. ಆದರೆ ಮಕ್ಕಳಿಗೆ ಕಷ್ಟ. ನಿತ್ಯ ಯೋಗಾಭ್ಯಾಸದಿಂದ 10 ನಿಮಿಷಗಳ ಕಾಲ ಚಿನ್‌ಮುದ್ರೆಯಲ್ಲಿ ಕೂರಿಸುವುದರಿಂದ ಮಕ್ಕಳಿಗೆ ತಮ್ಮ ದೇಹ ಮತ್ತು ಮನಸ್ಸಿನ ಹೊಂದಾಣಿಕೆ ಮಾಡಿಸುವುದನ್ನು ಕಲಿಸಬಹುದು.

Advertisement

ಎಚ್ಚರಿಕೆ ಇರಲಿ
ಯೋಗ ಕಲಿಯುವ ರೀತಿ ಸರಿಯಾಗಿರಬೇಕು. ಹೀಗಾಗಿ ಮಕ್ಕಳು ಯೋಗಾಭ್ಯಾಸ ಮಾಡುವಾಗ ಅವರೊಂದಿಗೆ ಯೋಗದ ಬಗ್ಗೆ ತಿಳಿದಿರುವವರು ಕುಳಿತು ಒಟ್ಟಿಗೆ ಅಭ್ಯಾಸ ಮಾಡಿಸುವುದು ಉತ್ತಮ. ಇಲ್ಲವಾದರೆ ನುರಿತ ತಜ್ಞರಿಂದಲೇ ಯೋಗಾಭ್ಯಾಸ ಮಾಡಿಸುವುದು ಒಳ್ಳೆಯದು. ಯಾವುದೇ ಯೋಗ ಭಂಗಿಯಾಗಿರಲಿ ಬೆನ್ನು ನೇರವಾಗಿರಬೇಕು. ವಿವಿಧ ಭಂಗಿಗಳನ್ನು ಮಕ್ಕಳು ಸುಲಭವಾಗಿ ಮಾಡುತ್ತಾರೆ. ಆದರೆ ತಪ್ಪಿ ಬೀಳುವ ಅಪಾಯಗಳಿರುತ್ತವೆ. ಹೀಗಾಗಿ ಜಾಗ್ರತೆ ವಹಿಸಬೇಕು. ಅಲ್ಲದೇ ತಪ್ಪಾಗಿ ಯಾವುದೇ ಯೋಗವನ್ನು ಮಾಡದಂತೆ ನೋಡಿಕೊಳ್ಳಬೇಕಾಗುತ್ತದೆ.

ಎಷ್ಟು ವರ್ಷದ ಬಳಿಕ ಯೋಗ ಮಾಡಬಹುದು?
ಸಾಮಾನ್ಯವಾಗಿ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಇರುವುದಿಲ್ಲ. ಯಾಕೆಂದರೆ ಅವರು ಹೆಚ್ಚು ಚಟುವಟಿಕೆಯಿಂದ ಇರುತ್ತಾರೆ. ಆದರೆ ಅವರ ಮನಸ್ಸಿನ ಚಟುವಟಿಕೆಗೆ ಅಧಿಕವಾಗಿರುತ್ತದೆ. ಹೀಗಾಗಿ ಅವರ ಮನಸ್ಸು ಸದಾ ಚಂಚಲವಾಗಿರುತ್ತದೆ. ಇದನ್ನು ಶಾಂತಗೊಳಿಸಿ, ಅವರಲ್ಲಿ ಏಕಾಗ್ರತೆಯನ್ನು ವೃದ್ಧಿಸಲು ಯೋಗದ ಅಗತ್ಯವಿರುತ್ತದೆ. 8 ವರ್ಷ ಮೇಲ್ಪಟ್ಟ ಮಕ್ಕಳು ನಿತ್ಯ ಯೋಗಾಭ್ಯಾಸವನ್ನು ಮಾಡುವುದು ಉತ್ತಮ. ಸಣ್ಣ ಮಕ್ಕಳಿಗೆ ಯೋಗ ಮಾಡಿಸುವುದು ಸಾಧ್ಯವಿಲ್ಲ. ಯಾಕೆಂದರೆ ಅವರ ಅಂಗಾಂಗಗಳು ಬೆಳವಣಿಗೆ ಹಂತದಲ್ಲಿರು ತ್ತದೆ. ಈ ಸಂದರ್ಭದಲ್ಲಿ ಯೋಗದ ಅಭ್ಯಾಸ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯೂ ಇರುತ್ತದೆ.

– ಜಯಲಕ್ಷ್ಮಿ ಚಂದ್ರಹಾಸ್‌, ಯೋಗಶಿಕ್ಷಕಿ, ಪದವಿನಂಗಡಿ

Advertisement

Udayavani is now on Telegram. Click here to join our channel and stay updated with the latest news.

Next