ಬೆಂಗಳೂರು: ಚಿಕ್ಕ ಚಿಕ್ಕ ಶಾರ್ಟ್ ನ್ಯೂಸ್, ಟ್ರೆಂಡಿಂಗ್ಸ್ ಮತ್ತು ವೈರಲ್ ವಿಡಿಯೋ ಮೂಲಕ ಬಹುಭಾಷೆಯಲ್ಲಿ ಮಾಹಿತಿ ಒದಗಿಸುವ ಜೋಶ್ (Josh) ಮತ್ತು ಶ್ರೀರಾಮ ಮಂತ್ರ ಪಠಿಸಲು ಜೋಶ್ ಮತ್ತು ಡೈಲಿ ಹಂಟ್ ವರ್ಚುವಲ್ ಮೂಲಕ ವೇದಿಕೆ ಕಲ್ಪಿಸಿದೆ.
ವರ್ಚುವಲ್ ಪಠಣಕ್ಕಾಗಿ ಅತಿದೊಡ್ಡ ಫ್ಲ್ಯಾಟ್ ಫಾರಂಗಳಲ್ಲಿ ಒಂದಾಗಿರುವ ವೇದಿಕೆ ಶ್ರೀರಾಮನ ಮೇಲಿನ ಭಕ್ತಿಯನ್ನು ಕೇಂದ್ರೀಕರಿಸುವ ಆಧ್ಯಾತ್ಮಿಕ ಮಂತ್ರಗಳನ್ನು ಪಠಿಸಲು ಸಾಮೂಹಿಕವಾಗಿ ತೊಡಗಿಸಿಕೊಳ್ಳಲು ಬಳಕೆದಾರರನ್ನು ಆಹ್ವಾನಿಸಿದೆ.
ಜೋಶ್ ಕೊಟ್ಟಿರುವ ಲಿಂಕ್ ಕ್ಲಿಕ್
(https://share.myjosh.in/webview/ram-mandir-event) ಮಾಡಿದರೆ ಶ್ರೀರಾಮ ಚಾಂಟ್ ರೂಮ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಮೊದಲ ಹಂತದಲ್ಲಿ ನಿಮ್ಮ ಹೆಸರು ನಮೂದಿಸಬೇಕು.
ನಂತರ ನೀವು ಎಷ್ಟು ಬಾರಿ ಶ್ರೀರಾಮ ಮಂತ್ರ ಪಠಣ ಮಾಡಲು ಇಷ್ಟಪಡುತ್ತೀರಿ ಎಂದು ಆಯ್ಕೆ ಬರುತ್ತದೆ. ಅದರಲ್ಲಿ 11, 108 ಎಂಬ ಆಯ್ಕೆ ಬರುತ್ತದೆ. ಅದರಲ್ಲಿ ಒಂದನ್ನು ಆಯ್ಕೆ ಮಾಡಿದ ಬಳಿಕ ‘ಶ್ರೀರಾಮ್ ಜೈರಾಮ್ ಜೈ ಜೈ ರಾಮ್’ ಎಂಬ ಮಂತ್ರ ಪಠಣ ಆರಂಭವಾಗುತ್ತದೆ. ನೀವು ಅದನ್ನು ಅನುಸರಿಸಬೇಕಿದೆ.
ಡೈಲಿ ಹಂಟ್ ಆ್ಯಪ್ನಲ್ಲಿ ಬಳಕೆದಾರರು ಲೈವ್ ಫೀಡ್ ಮೂಲಕ ಅಯೋಧ್ಯೆ ರಾಮಮಂದಿರದ ಉದ್ಘಾಟನೆಯ ಲೈವ್-ಸ್ಟ್ರೀಮ್ ಅನುಭವವನ್ನು ಆನಂದಿಸಬಹುದು. ಆಡಿಯೋ ಅಪ್‌ಡೇಟ್‌ಗಳು, ಪಾಡ್‌ಕಾಸ್ಟ್‌ಗಳು, ರಾಮನ ಕಥೆ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವಿವಿಧ ಸಂವಾದಾತ್ಮಕ ವಿಜೆಟ್‌ಗಳನ್ನು ಅನ್ವೇಷಿಸುವ ಮೂಲಕ ಬಳಕೆದಾರರು ಈವೆಂಟ್‌ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು.