Advertisement

horoscope: ಮಂಗಳವಾರದ ರಾಶಿಫಲ; ಈ ರಾಶಿಯವರಿಂದು ಅನವಶ್ಯವಾಗಿ ಯಾರಿಗೂ ಸಲಹೆ ನೀಡದಿರಿ

08:02 AM Mar 12, 2024 | Team Udayavani |

12-03-2024

Advertisement

ಮೇಷ: ಚುರುಕು ಬುದ್ಧಿಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗುವ ಸನ್ನಿವೇಶಗಳು. ಉದ್ಯೋಗದಲ್ಲಿ ಜವಾಬ್ದಾರಿಗಳ ಬದಲಾವಣೆ. ಸರಕಾರಿ ಉದ್ಯೋಗಸ್ಥರಿಗೆ ಬದಲಾಗದ ಅನುಭವ. ಸಣ್ಣ ಉದ್ಯಮಿಗಳಿಗೆ ಹೊಸ ಸಮಸ್ಯೆಗಳು.

ವೃಷಭ: ಹಲವು ಯೋಜನೆಗಳ ಕಡೆಗೆ ಗಮನ ಹರಿಸುವ ಯತ್ನ. ಉದ್ಯೋಗಸ್ಥರೆದುರು ವಿಶಿಷ್ಟ ಅವಕಾಶಗಳು. ಖಾದಿಯ ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಲಾಭ. ವೃತ್ತಿಪರಿಣತರಿಗೆ ಉದ್ಯೋಗಾವಕಾಶ. ಕುಟುಂಬದಲ್ಲಿ ಸಾಮರಸ್ಯ ವೃದ್ಧಿ.

ಮಿಥುನ: ಅನುಷ್ಠಾನಗೊಳ್ಳದಿರುವ ಹಳೆಯ ಯೋಜನೆಗಳನ್ನು ಕಾರ್ಯಗತಗೊಳಿಸುವ ಪ್ರಯತ್ನ. ತಪ್ಪು ತಿಳಿವಳಿಕೆಯಿಂದ ಅನವಶ್ಯ ವೈಮನಸ್ಯದ ಸಾಧ್ಯತೆ. ಅನವಶ್ಯವಾಗಿ ಯಾರಿಗೂ ಸಲಹೆ ನೀಡದಿರಿ. ಯುವಜನರಿಗೆ ವೃತ್ತಿಪರ ಶಿಕ್ಷಣ ಆಯೋಜನೆ.

ಕರ್ಕಾಟಕ: ನೇರ ಮಾರ್ಗದ ನಡೆಯಿಂದ ಸುಲಭವಾದ ಕಾರ್ಯಸಾಧನೆ. ಉದ್ಯೋಗಸ್ಥರಿಗೆ ವೇತನ ಏರಿಕೆಯಲ್ಲಿ ವಿಳಂಬ. ಸರಕಾರಿ ಆಸ್ಪತ್ರೆಗಳ ಸುಧಾರಣೆಗೆ ಪ್ರಯತ್ನ ಮುಂದುವರಿಕೆ. ನಿಸ್ವಾರ್ಥಿ ಜನಸೇವಕರ ಹೆಸರು ಕೆಡಿಸುವ ಹುನ್ನಾರ.

Advertisement

ಸಿಂಹ: ಕಾರ್ಯರಂಗದಲ್ಲಿ ತಡೆಯಿಲ್ಲದೆ ಸಾಗುವ ಪ್ರಯತ್ನ. ಒಂದಕ್ಕಿಂತ ಹೆಚ್ಚು ವ್ಯವಹಾರಗಳಿಗೆ ಏಕಕಾಲದಲ್ಲಿ ಗಮನ ಹರಿಸಲು ಒತ್ತಡ. ಉದ್ಯಮಕ್ಕೆ ನವಚೈತನ್ಯ ನೀಡುವ ಪ್ರಕ್ರಿಯೆ ಆರಂಭ. ಪರಿಣತರ ಸಲಹೆಯಂತೆ ಹೊಸ ಕ್ರಮಗಳು.

ಕನ್ಯಾ: ಉದ್ಯೋಗಸ್ಥರಿಗೆ ಸುಲಭವಾದ ಕಾರ್ಯ ನಿರ್ವಹಣೆ. ಸಂಸ್ಥೆಯ ಪ್ರಮುಖರಿಂದ ನೌಕರರಿಗೆ ಪುರಸ್ಕಾರ. ಹಿರಿಯರ ಆಸ್ತಿಯಲ್ಲಿ ಕೃಷಿ ಪ್ರಯೋಗ ಯಶಸ್ಸಿನತ್ತ. ಶಾಶ್ವತ ನೀರಾವರಿ ಒದಗಿಸುವ ಪ್ರಯತ್ನ ಸಫ‌ಲ.

ತುಲಾ: ಶರೀರಕ್ಕಾದ ಬಾಧೆಯಿಂದ ಚೇತರಿಕೆ. ಉದ್ಯೋಗಸ್ಥರಿಗೆ ಮುಂದುವರಿದ ಹಿತಶತ್ರುಗಳ ಕಾಟ. ಉದ್ಯಮಿಗಳಿಗೆ ಎದುರಾಳಿಗಳ ಪೈಪೋಟಿ ಶಮನ. ಉದ್ಯೋಗ ಅರಸುವವರಿಗೆ ಆಶಾದಾಯಕ ವಾತಾವರಣ. ಲೇವಾದೇವಿ ವ್ಯವಹಾರದಲ್ಲಿ ನಷ್ಟ.

ವೃಶ್ಚಿಕ: ಸದ್ಯೋಭವಿಷ್ಯದಲ್ಲಿ ಯಾವುದೇ ಹಾನಿಯಾಗದು. ಉದ್ಯೋಗಸ್ಥರ ಸ್ಥಾನ ಗೌರವ ಭದ್ರ. ಸರಕಾರಿ ಅಧಿಕಾರಿಗಳಿಗೆ ನಿಶ್ಚಿಂತೆ. ರಾಜಕಾರಣಿಗಳ ಹೆಸರು ಕೆಡಿಸುವ ಪ್ರಯತ್ನ ವಿಫ‌ಲ. ಸಂಸಾರದಲ್ಲಿ ವಿರಸ ಬೆಳೆಸುವ ಪ್ರಯತ್ನ ವಿಫ‌ಲ.

ಧನು: ಸಾಹಸಪೂರ್ಣ ವ್ಯಕ್ತಿತ್ವದ ಮುನ್ನಡೆಗೆ ತೊಂದರೆಯಾಗದು. ಪಟ್ಟು ಬಿಡದ ಪ್ರಯತ್ನದಿಂದ ಘಟಕದ ಕಾರ್ಯವೈಖರಿ ಸುಧಾರಣೆ. ಉದ್ಯಮದ ವೈವಿಧ್ಯೀಕರಣ ಯೋಜನೆಯಲ್ಲಿ ಮುನ್ನಡೆ. ಹಿರಿಯ ನಾಗರಿಕರಿಗೆ ಸರಕಾರಿ ನೆರವು ದೊರಕಿಸಲು ಸಹಾಯ.

ಮಕರ: ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಸೂಚನೆಗಳು. ಉದ್ಯೋಗಸ್ಥರ ಕಾರ್ಯಸಾಮರ್ಥ್ಯಕ್ಕೆ ಹೊಸ ಸವಾಲು ಗಳು. ಹಿತಶತ್ರುಗಳ ಮಸಲತ್ತಿಗೆ ಸೋಲು. ಯಂತ್ರೋಪಕರಣ ಉದ್ಯಮಿಗಳಿಗೆ ಅನುಕೂಲದ ವಾತಾವರಣ.

ಕುಂಭ: ಸಪ್ತಾಹ ಮುಂದುವರಿಯುತ್ತಿದ್ದಂತೆ ಮುಂದೆ ಸಾಗುವ ಕೆಲಸ, ಕಾರ್ಯಗಳು. ಉದ್ಯೋಗಸ್ಥರಿಗೆ ಹಿತಕರವಾದ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆಯ ಅನುಭವ.ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭ. ಸಾಹಿತ್ಯ, ಸಂಗೀತ, ನೃತ್ಯಾದಿ ಲಲಿತ ಕಲೆಗಳಲ್ಲಿ ಆಸಕ್ತರಿಗೆ ಹರ್ಷ.

ಮೀನ: ಅಷ್ಟೊಂದು ಪ್ರೋತ್ಸಾಹಕ ವಾತಾವರಣ ಕಾಣಿಸದಿದ್ದರೂ ಕಾರ್ಯದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಸೇವಾ ರೂಪದ ಕಾರ್ಯಗಳು ಯಶಸ್ವಿ. ನಿಲ್ಲಿಸಿದ್ದ ಉದ್ಯಮ ಮತ್ತೆ ಪ್ರಾರಂಭ. ಪರಿಸರ ಸುಧಾರಣೆಯ ಸಾಮೂಹಿಕ ಕಾರ್ಯಗಳಲ್ಲಿ ಸಕ್ರಿಯ ಪಾತ್ರ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ.

Advertisement

Udayavani is now on Telegram. Click here to join our channel and stay updated with the latest news.

Next