Advertisement

Daily horoscope; ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ, ಉದ್ಯೋಗ ರಂಗದಲ್ಲಿ ಹೊಸ ಸವಾಲುಗಳು

07:23 AM Jul 31, 2024 | Team Udayavani |

ಮೇಷ: ಒಂದು ಬಗೆಯ ನೆಮ್ಮದಿಯ ಅನುಭವ. ಉದ್ಯೋಗ, ವ್ಯವಹಾರಗಳಲ್ಲಿ ಗುರಿ ಮುಟ್ಟಿದ ಸಮಾಧಾನ. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕೊಂಚ ಸಮಾಧಾನ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಸಣ್ಣ ವ್ಯಾಪಾರಸ್ಥರಿಗೆ ಶುಭದಿನ.

Advertisement

ವೃಷಭ: ಲಕ್ಷ್ಮೀ ಕಟಾಕ್ಷ ಚೆನ್ನಾಗಿರುವುದರಿಂದ ಜೀವನ ಸುಲಭ. ಅನೇಕ ಮಂದಿ ಪ್ರಭಾವಿ ವ್ಯಕ್ತಿಗಳೊಂದಿಗೆ ಸಂಪರ್ಕ. ಸರಕಾರಿ ನೌಕರರಿಗೆ ಬೇಕಾದಲ್ಲಿಗೆ ವರ್ಗಾವಣೆ. ಮನೆಯಲ್ಲಿ ನೆಮ್ಮದಿ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ.

ಮಿಥುನ: ವಾರದ ಮಧ್ಯದ ದಿನ ಫಲಗಳು ಉತ್ತಮ ದೀರ್ಘ‌ಕಾಲದ ಸಮಸ್ಯೆಗಳಿಂದ ಬಿಡುಗಡೆ. ಉದ್ಯೋಗಸ್ಥರ ಕಾರ್ಯ ನಿರ್ವಹಣೆ ನಿರಾತಂಕ. ದೃಢವಾದ ಆತ್ಮವಿಶ್ವಾಸದಿಂದ ಕಾರ್ಯ ಜಯ. ಗೃಹಿಣಿಯರು,ಮಕ್ಕಳಿಗೆ ನೆಮ್ಮದಿ.

ಕರ್ಕಾಟಕ: ಉದ್ಯೋಗಸ್ಥರಿಗೆ ಹರ್ಷದ ಅನುಭವಗಳು. ಪಾಲುದಾರಿಕೆ ವ್ಯವಹಾರ ಸುಧಾರಣೆ. ಕಟ್ಟಡ ನಿರ್ಮಾಣ-ಮಾರಾಟ ವ್ಯವ ಹಾರಸ್ಥರಿಗೆ ಉತ್ತಮ ಲಾಭ. ವ್ಯವಹಾರ ಸಂಬಂಧ ಉತ್ತರದ ಕಡೆಗೆ ಪ್ರಯಾಣ.

ಸಿಂಹ: ದಿನದ ಆರಂಭದಲ್ಲಿ ಮಂದಗತಿ, ಉತ್ತರಾರ್ಧದಲ್ಲಿ ವೇಗದ ಓಟ. ಉಡುಪು ತಯಾರಿ ಉದ್ದಿಮೆಯವರಿಗೆ ಅಪಾರ ಲಾಭ. ಹಿರಿಯರ ಯೋಗಕ್ಷೇಮ ವಿಚಾರಿಸಿ. ಗೃಹಿಣಿಯರ ಸ್ವಾವಲಂಬನೆ ಯತ್ನಕ್ಕೆ ಯಶಸ್ಸು.

Advertisement

ಕನ್ಯಾ: ಉದ್ಯೋಗಸ್ಥರಿಗೆ, ಸಹೋದ್ಯೋಗಿಗಳ ಸಹಾಯ. ವ್ಯವಹಾರಸ್ಥರಿಗೆ ಹೊಸ ಅವಕಾಶಗಳು ಲಭ್ಯ. ಉದ್ಯೋಗಾಪೇಕ್ಷಿಗಳಿಗೆ ಯೋಗ್ಯ ಅವಕಾಶ ಗೋಚರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಔಷಧರಹಿತ ಚಿಕಿತ್ಸಕರಿಂದ ಸಹಾಯ.

ತುಲಾ: ಪಂಚಮಶನಿಯ ಪ್ರಭಾವದಿಂದ ಕೊಂಚ ಅನಾರೋಗ್ಯ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚುವರಿ ಜವಾಬ್ದಾರಿ. ಆಹಾರಪದಾರ್ಥ ವ್ಯಾಪಾರ ಪ್ರಗತಿ. ಕೃಷಿ ಉತ್ಪನ್ನಗಳಿಂದ ಆದಾಯ ವೃದ್ಧಿ. ಗೃಹಿಣಿ ಯರಿಗೆ ಉಲ್ಲಾಸದ ವಾತಾವರಣ.

ವೃಶ್ಚಿಕ: ವ್ಯವಹಾರಗಳು ನಿರೀಕ್ಷೆಯಂತೆ ನಡೆದು ಸಮಾಧಾನ. ಮಾಲಕ – ನೌಕರರ ಬಾಂಧವ್ಯ ಸುಧಾರಣೆ. ಆಸ್ತಿ ಖರೀದಿ, ಮಾರಾಟ ಮಾತುಕತೆ ಮುಂದುವರಿಕೆ. ಲೇವಾದೇವಿ ವ್ಯವಹಾರಸ್ಥರಿಗೆ ಸ್ವಲ್ಪಮಟ್ಟಿನ ಲಾಭ.

ಧನು: ದೈವಾನುಗ್ರಹ, ಕಾರ್ಯನಿಷ್ಠೆ ಜತೆಗೂಡಿ ಯಶಸ್ಸು. ಸಹೋದ್ಯೋಗಿಗಳ ಅಸೂಯೆಗೆ ಗುರಿಯಾಗದಿರಿ. ಕಾರ್ಯದಕ್ಷತೆಗೆ ಮೇಲಧಿಕಾರಿಗಳಿಂದ ಪ್ರಶಂಸೆ.ವ್ಯವಹಾರ ಸಂಬಂಧ ಪ್ರಯಾಣ ಸಂಭವ. ಮಕ್ಕಳ ಓದಿನತ್ತ ಗಮನವಿರಲಿ.

ಮಕರ: ಉದ್ಯೋಗ ಸ್ಥಾನದಲ್ಲಿ ನೆಮ್ಮದಿ. ಮನೆ ಮಂದಿಯ ಸಹಕಾರ,ಉತ್ತಮ. ಪಾಲುದಾರಿಕೆ ವ್ಯವಹಾರಸ್ಥರಿಗೆ ಸಾಮಾನ್ಯ ಲಾಭ. ಕೆಲವು ವರ್ಗಗಳ ವ್ಯಾಪಾರಿಗಳಿಗೆ ಅಧಿಕ ಅನುಕೂಲ. ಹೆಚ್ಚಿನವರಿಗೆ ಮಿಶ್ರಫಲ ಕೊಡುವ ದಿನ.

ಕುಂಭ: ಸಾಮಾಜಿಕ ಚಟುವಟಿಕೆಗಳ ಒತ್ತಡ. ಉದ್ಯೋಗ ರಂಗದಲ್ಲಿ ಹೊಸ ಸವಾಲುಗಳು. ದಿನವಿಡೀ ಬಿಡುವಿಲ್ಲದ ಚಟು ವಟಿಕೆಗಳು. ಹೊಸ ವ್ಯವಹಾರ ಆರಂಭಕ್ಕೆ ಸಿದ್ಧತೆ. ಗೃಹಿಣಿಯರ ಉದ್ಯಮಗಳ ಜನಪ್ರಿಯತೆ ವೃದ್ಧಿ

ಮೀನ: ತ್ವರಿತಗತಿಯಿಂದ ಚಟುವಟಿಕೆಗಳ ನಿರ್ವಹಣೆ. ಕಾರ್ಯಕ್ಷೇತ್ರದಲ್ಲಿ ಅನುಕೂಲಕರ ಸ್ಪಂದನ. ಹಿರಿಯರ
ಆರೋಗ್ಯದ ಕಡೆ ಗಮನವಿರಲಿ. ಸಮಾನ ಆಸಕ್ತಿಯುಳ್ಳವರಿಂದ ಸಹಕಾರ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

Advertisement

Udayavani is now on Telegram. Click here to join our channel and stay updated with the latest news.

Next