Advertisement

Daily Horoscope; ಕಳೆದುಹೋದ ಸುಸಂದರ್ಭ ಮರಳಿ ಬರುವ ಸಾಧ್ಯತೆ…

07:16 AM Oct 09, 2024 | Team Udayavani |

ಮೇಷ: ಉದ್ಯೋಗ ಸ್ಥಾನದಲ್ಲಿ ಉತ್ಸಾಹದ ಅನುಭವ. ಉದ್ಯಮಕ್ಕೆ ಕಾಯಕಲ್ಪ ಮಾಡುವ ಪ್ರಯತ್ನ. ಅವಿವಾಹಿತ ಹುಡುಗರಿಗೆ ವಿವಾಹ ಯೋಗ. ಊರಿನ ದೇವಾಲಯಕ್ಕೆ ಭೇಟಿ. ಹಿರಿಯರು ಮತ್ತು ಗೃಹಿಣಿಯರಿಗೆ ಉಲ್ಲಾಸ.

Advertisement

ವೃಷಭ: ವಿವಾಹ ಅಪೇಕ್ಷಿಗಳಿಗೆ ಶುಭವಾರ್ತೆ. ಹಿರಿಯರ ಜೀವನೋತ್ಸಾಹಕ್ಕೆ ಉತ್ತೇಜನ. ಎಂಜಿನಿಯರ್ , ಲೆಕ್ಕ ಪರಿಶೋಧಕರು ಮೊದಲಾದ ವೃತ್ತಿಪರರ ಕ್ಷೇತ್ರ ವಿಸ್ತರಣೆ . ಗೃಹಿಣಿಯರ ಉದ್ಯಮಗಳ ಆದಾಯ ವೃದ್ಧಿ. ವ್ಯಾಪಾರಿಗಳಿಗೆ ಅಧಿಕ ಲಾಭ.

ಮಿಥುನ: ಉದ್ಯೋಗಾನ್ವೇಷಿಗಳಿಗೆ ಶುಭ ಸೂಚನೆ. ಸ್ವತಂತ್ರ ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ. ಸದ್ಗ್ರಂಥ ಅಧ್ಯಯನದಲ್ಲಿ ಆಸಕ್ತಿ. ಸತ್ಸಂಗಗಳಲ್ಲಿ ಕಾಲಯಾಪನೆ. ಕುಟುಂಬ ಸಹಿತ ದೇವಿಯ ಆಲಯಕ್ಕೆ ಭೇಟಿ.

ಕರ್ಕಾಟಕ: ಕುಟುಂಬದ ಹಿರಿಯ ವ್ಯಕ್ತಿಯ ಆಗಮನ. ಶಿಕ್ಷಿತರ ನಿರುದ್ಯೋಗ ಸಮಸ್ಯೆ ನಿವಾರಣೆ . ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಉದ್ಯೋಗ, ಉದ್ಯಮ ಕ್ಷೇತ್ರಗಳಲ್ಲಿ ಅನುಕೂಲ ವಾತಾವರಣ. ನೂತನ ಗೃಹನಿರ್ಮಾಣ ಆರಂಭ.

ಸಿಂಹ: ಎಲ್ಲ ಕ್ಷೇತ್ರಗಳಲ್ಲೂ ಯಶಸ್ಸಿನ ಅನುಭವ. ಇಲಾಖೆಗಳ ಸಕಾಲಿಕ ಸ್ಪಂದನ ದಿಂದ ಕಾರ್ಯಗಳು ಶೀಘ್ರ ಮುಕ್ತಾಯ. ಷೇರು ವ್ಯವಹಾರದಲ್ಲಿ ಉತ್ತಮ ಲಾಭ. ಯಂತ್ರೋಪಕರಣ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ.

Advertisement

ಕನ್ಯಾ: ಸಮಾಜದಲ್ಲಿ ಗೌರವ ವೃದ್ಧಿ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಮುನ್ನಡೆ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ. ದೀರ್ಘಾವಧಿ ಹೂಡಿಕೆಗಳಲ್ಲಿ ಲಾಭ. ಲೇಖನ ವ್ಯವಸಾಯ, ಸ್ವಾಧ್ಯಾಯದಲ್ಲಿ ಹೆಚ್ಚು ಆಸಕ್ತಿ.

ತುಲಾ: ಉದ್ಯೋಗ ಅರಸುವವರಿಗೆ ಮಾರ್ಗದರ್ಶನ. ಹಿರಿಯರು, ಗೃಹಿಣಿ ಯರು, ಮಕ್ಕಳಿಗೆ ಸಮಾಧಾನದ ದಿನ. ಇಷ್ಟ ದೇವರ ಆಲಯಕ್ಕೆ ಭೇಟಿ. ವಿವಾಹ ಸಂಬಂಧ ಕುದುರಿಸಲು ಸಣ್ಣ ಪ್ರಯಾಣ.

ವೃಶ್ಚಿಕ: ಅಲಂಕಾರ ಸಾಮಗ್ರಿ ಖರೀದಿ ಸಂಭವ. ಕಟ್ಟಡ ನಿರ್ಮಾಣ ಗುತ್ತಿಗೆದಾರರಿಗೆ ಮಧ್ಯಮ ಲಾಭ. ಹಿರಿಯರ ಆರೋಗ್ಯ ಸುಧಾರಣೆ. ಗೃಹಿಣಿಯರಿಗೆ ಹರ್ಷ, ಉಲ್ಲಾಸಗಳ ದಿನ. ದೇವತಾರಾಧನೆಯಿಂದ ಮನೆಯಲ್ಲಿ ಹರ್ಷ.

ಧನು: ಸರಕಾರಿ ಅಧಿಕಾರಿಗಳಿಗೆ ಹಿತಶತ್ರು ಬಾಧೆ. ಉಳಿತಾಯ ಯೋಜನೆಗಳ ಏಜೆಂಟರಿಗೆ ಆದಾಯ ವೃದ್ಧಿ. ಪಾರದರ್ಶಕ ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಕೌಟುಂಬಿಕ ವಿಚಾರಕ್ಕಾಗಿ ಪ್ರಯಾಣ.

ಮಕರ: ಕಾರ್ಯರಂಗದಲ್ಲಿ ಗೌರವಾದರ ವೃದ್ಧಿ. ಲೇವಾದೇವಿ ವ್ಯವಹಾರಸ್ಥರಿಗೆ ನಷ್ಟ. ವೈದ್ಯರು, ನ್ಯಾಯವಾದಿಗಳಿಗೆ ಕೀರ್ತಿ. ದ್ರವಪದಾರ್ಥ ವ್ಯಾಪಾರಿಗಳಿಗೆ ಉತ್ತಮ ಲಾಭ. ಆದಾಯದ ಹೊಸ ಮೂಲಗಳು ಲಭ್ಯ.

ಕುಂಭ: ಕಾರ್ಯನಿರ್ವಹಣೆಗೆ ವರಿಷ್ಠರ ಮೆಚ್ಚುಗೆ. ಸಮಾಜ ಸೇವೆಯಿಂದ ಜನಪ್ರಿಯತೆ ವೃದ್ಧಿ. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಲಾಭ. ವಾಸದ ಕಟ್ಟಡಕ್ಕೆ ಹೊಸ ರೂಪ. ಬಂಧುಗಳೊಡನೆ ದೇವಾಲಯ ದರ್ಶನ

ಮೀನ: ಅರ್ಹರಿಗೆ ಸಹಾಯ ಮಾಡುವ ಅವಕಾಶ. ಕಳೆದುಹೋದ ಸುಸಂದರ್ಭ ಮರಳಿ ಬರುವ ಸಾಧ್ಯತೆ. ಕಾರ್ಯ ಯಶಸ್ಸಿಗೆ
ಸಂಬಂಧಪಟ್ಟವರ ಸಹಕಾರ. ದ್ರವ ವ್ಯಾಪಾರಿಗಳಿಗೆ ಶುಭಕಾಲ. ಗುರು, ಹಿರಿಯರ ದರ್ಶನದಿಂದ ಶುಭ.

Advertisement

Udayavani is now on Telegram. Click here to join our channel and stay updated with the latest news.

Next