ಶ್ರೀ ಶ್ರೀ ಬಿ.ಹೆಚ್. ಆಚಾರ್ಯ ಗುರೂಜಿ
ಮನೆ #1191 26th main 9 ನೇ ಬ್ಲಾಕ್ ರಾಗಿಗುಡ್ಡ ಆರ್ಚ್ (ಬಸ್ ಸ್ಟಾಪ್) ಎದುರುಗಡೆ ಜಯನಗರ 9ನೇ ಬ್ಲಾಕ್ ಬೆಂಗಳೂರು 69
Advertisement
ಬದುಕು ಬರಡಾಗಿ ಸಮಸ್ಯೆ ಸುಳಿಯಾಗಿ ಸಂಭ್ರಮವೇ ಇಲ್ಲದ ಬದುಕಲ್ಲಿ ನಿಮ್ಮ ಬದುಕಿಗೆ ಬೆಳಕಾಗಿ ಕಾಣುವುದೇ ಈ ಜ್ಯೋತಿಷ್ಯ ಶಾಸ್ತ್ರಹಣೆಬರಹ ಬ್ರಹ್ಮನ ಸ್ವಾದಿನವಾದರೆ,ಈ ದೇಹ ನವಗ್ರಹಗಳ ಸ್ವಾಧೀನ. ಅದರಲ್ಲಿ ಹಸ್ತಗಳಿಂದ, ಪಾಪಪುಣ್ಯಗಳ ಫಲದಿಂದ ರೇಖೆಗಳು ಹುಟ್ಟುವವು. ಜ್ಯೋತಿಷ್ಯದಲ್ಲಿ ಜ್ಯೋತಿಯಂತೆ ಮಾರ್ಗದರ್ಶನ ಕೊಡುವವು.
Related Articles
Advertisement
ನಿಮ್ಮ ಸಮಸ್ಯೆಗಳಾದ ವಿದ್ಯೆ,ಉದ್ಯೋಗ, ವ್ಯಾಪಾರದಲ್ಲಿ, ಲಾಭ- ನಷ್ಟಸಾಲದ ಭಾದೆ, ಆರೋಗ್ಯ, ಮನೆಯಲ್ಲಿ ಅಶಾಂತಿ, ಸತಿ-ಪತಿ ತೊಂದರೆ, ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರು ಶೀಘ್ರದಲ್ಲಿ ಪರಿಹಾರ ಮಾಡಿಕೊಡುತ್ತಾರೆ.
ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
888 488 9444 ಮೇಷ
ನಿಮ್ಮ ಮಾತಿನ ಜಾಣ್ಮೆ ಸರಳವಾದ ನಡೆ ನುಡಿಗಳಿಂದ ಜನರ ಪ್ರಶಂಸೆಯನ್ನು ಪಡೆಯಲು ಹೇರಳ ಅವಕಾಶಗಳು ಒದಗಿ ಬರುವುದು. ಸಂಗಾತಿಯ ಸಹಕಾರ ದೊರೆಯುವುದು. ಆರ್ಥಿಕ ಸಮಸ್ಯೆ ಕಡಿಮೆ ಆಗುವುದು. ವೃಷಭ
ಒತ್ತಡಗಳ ನಡುವೆ ಇನ್ನೊಂದಿಷ್ಟು ಒತ್ತಡಗಳು ಸೇರಿಕೊಂಡು ನಿಮ್ಮ ತಾಳ್ಮೆಯ ಪರೀಕ್ಷೆಯನ್ನು ಎದುರಿಸುವಿರಿ. ಮನೋನಿಯಾಮಕ ರುದ್ರದೇವರನ್ನು ಅಂತೆಯೇ ದುರ್ಗಾಸುಳಾದಿಯನ್ನು ಏಕಮನಸ್ಸಿನಿಂದ ಭಜಿಸಿ. ಮಿಥುನ
ಸಾಕ್ಷಾತ್ ಗುರುವೆ ನಿಮ್ಮ ಬಳಿ ಬಂದು ನಿಮ್ಮನ್ನು ತಿದ್ದುವುದಿಲ್ಲ. ಮನೆಯ ಹಿರಿಯರ ರೂಪದಲ್ಲಿ ಇದ್ದು ನಿಮಗೆ ಸಕಾಲಿಕ ಎಚ್ಚರಿಕೆಯನ್ನು ನೀಡುವರು. ಹಾಗಾಗಿ ಹಿರಿಯರ ಮಾತನ್ನು ಉದಾಸೀನ ಮಾಡದಿರಿ. ಕರ್ಕಾಟಕ
ದಿಢೀರಾಗಿ ಅನೇಕ ಸಮಸ್ಯೆಗಳು ಎದುರಾಗುವ ಸಂಭವವಿರುತ್ತದೆ. ವಿದೇಶದಿಂದ ಬರುವ ಸುದ್ದಿಯು ನಿಮಗೆ ಸಂತಸವನ್ನುಂಟು ಮಾಡುತ್ತದೆ. ವಿವಿಧ ಮೂಲಗಳಿಂದ ಹಣಕಾಸು ಒದಗಿ ಬರುವುದರಿಂದ ಇಚ್ಛಿತ ಕಾರ್ಯಗಳು ಕೈಗೂಡುವುದು. ಸಿಂಹ
ಸಂಕಷ್ಟಗಳನ್ನು ಎದುರಿಸುವ ಕಲೆಗಾರಿಕೆ ನಿಮಗೆ ಹೇಳಿಕೊಡಬೇಕಾಗಿಲ್ಲ. ಎಲ್ಲವನ್ನು ನಗುನಗುತ್ತಲೇ ನಿಭಾಯಿಸುವ ಗುಣ ಅನುಕರಣಿಯವಾದುದು. ಆದರೆ ನಿಮ್ಮ ಮನೆ ಮಂದಿಯೇ ನಿಮ್ಮನ್ನು ಆಡಿಕೊಳ್ಳುವುದು ನಿಮಗೆ ನುಂಗಲಾರದ ತುತ್ತಾಗುವುದು. ಕನ್ಯಾ
ಬಹುವಿಧ ಪ್ರತಿಭೆಯು ಅನಾವರಣಗೊಳ್ಳುವುದು. ನಿಮ್ಮ ನಿರೀಕ್ಷೆಯಂತೆಯೇ ಕೆಲಸ ಕಾರ್ಯಗಳು ನಡೆಯುವುದರಿಂದ ಮನಸ್ಸಿಗೆ ಸಮಾಧಾನ ಮತ್ತು ಆತ್ಮಸ್ಥೈರ್ಯ ಹೆಚ್ಚಾಗುವುದು. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರುತ್ತದೆ. ತುಲಾ
ತೋಳ ಗುಂಡಿಗೆ ಬಿದ್ದಾಗ ಆಳಿಗೊಂದು ಕಲ್ಲು ಎನ್ನುವಂತೆ ಯಾವುದೋ ಕಾರಣಕ್ಕೆ ನಿಮ್ಮಿಂದ ತಪ್ಪಾಗಿರುವುದನ್ನೆ ಪುನಃ ಪುನಃ ನೆನೆಸಿ ನಿಮಗೆ ಕಿರುಕುಳ ಕೊಡುವರು. ಇದು ಒಂದು ರೀತಿಯ ಪರೀಕ್ಷೆ ಕಾಲ. ಮನಸಾ ಕುಲದೇವರನ್ನು ಸ್ಮರಿಸಿಕೊಳ್ಳಿರಿ. ವೃಶ್ಚಿಕ
ಪಿತ್ರಾರ್ಜಿತ ಆಸ್ತಿಗೆ ಸಂಬಂಧಪಟ್ಟಂತೆ ತಕರಾರುಗಳನ್ನು ಹಿರಿಯರ ಮೂಲಕ ಸಂಧಾನ ಮಾಡಿಸಿ ಬಗೆಹರಿಸಿಕೊಳ್ಳಿ. ಕೋರ್ಟು ಕಚೇರಿ ಎಂದು ಹೋದರೆ ನಿಮಗೆ ದಕ್ಕಬೇಕಾದ ಆಸ್ತಿಯು ದಕ್ಕದೆ ಹೋಗಬಹುದು. ಧನು
ಸಂಶಯಾತ್ಮ ವಿನಶ್ಯತಿ ಎನ್ನುವಂತೆ ಕೆಲಸ ಕಾರ್ಯಗಳಲ್ಲಿ ಅನಗತ್ಯ ಸಂಶಯವನ್ನು ಹುಟ್ಟುಹಾಕುವುದರಿಂದ ಸಕಾಲದಲ್ಲಿ ಕೆಲಸ ಪೂರೈಸಲು ಆಗುವುದಿಲ್ಲ. ಇದರಿಂದ ಮೇಲಧಿಕಾರಿಗಳ ಕೆಂಗಣ್ಣಿಗೆ ಕಾರಣರಾಗುವಿರಿ. ಮಕರ
ಧೂರ್ತರನ್ನು ಸಾಮ, ದಾನ, ಭೇದ, ದಂಡ ಎಂಬ ಚತುರೋಪಾಯಗಳಿಂದಲೇ ಎದುರಿಸಬೇಕು. ಕೆಲಸ ಮಾಡುವ ಕಚೇರಿಯಲ್ಲಿ ವಿನಾಕಾರಣ ನಿಮಗೆ ಕಿರುಕುಳ ಎದುರಾಗುವುದು. ಅದಕ್ಕೆ ಅಂಜದೆ ಅವರದೇ ರೀತಿಯಲ್ಲಿ ಉತ್ತರ ನೀಡಿ. ಕುಂಭ
ಮನೆಯ ಸಮಸ್ಯೆಗಳನ್ನು ಮನೆಯೊಳಗಿನ ನಾಲ್ಕು ಗೋಡೆಗಳ ಮಧ್ಯೆ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಮನೆಯ ಒಳಗಿನ ಸಮಸ್ಯೆಗಳಿಗೆ ನಿಮ್ಮ ಪರಿಹಾರ ಸೂತ್ರಗಳು ಉಪಯೋಗಕ್ಕೆ ಬರುವುದು ಮತ್ತು ಎಲ್ಲರೂ ಒಪ್ಪುವರು. ಮೀನ
ಮನೆ ಮಂದಿಯ ಸಹಾಯಕ್ಕಿಂತ ಮನೆ ಹೊರಗಿನ ಗೆಳೆಯರೇ ನಿಮ್ಮನ್ನು ಇಷ್ಟಪಡುವರು ಮತ್ತು ನಿಮ್ಮ ಕಾರ್ಯವನ್ನು ಕೊಂಡಾಡುವರು. ನಿಮ್ಮ ಹಳೆಯ ಗೆಳೆಯರಿಗೆ ಫೋನ್ ಮಾಡಿ ಮಾತುಕತೆ ನಡೆಸಿ.