Advertisement

ಮಾರ್ಚ್ 13: ಶುಕ್ರವಾರದ ನಿಮ್ಮ ರಾಶಿ ಭವಿಷ್ಯ

01:38 PM Mar 13, 2020 | Hari Prasad |

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದೇ ಜ್ಯೋತಿಷ್ಯ ಶಾಸ್ತ್ರ.

Advertisement

ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಅನೇಕ ಕುಟುಂಬಗಳು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಕರೆ ಮಾಡಿ.

ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
888 488 9444

ಶ್ರೀ ಅಷ್ಟ ಲಕ್ಷ್ಮೀ ಜ್ಯೋತಿಷ್ಯ ಮಂದಿರ

ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
ಮನೆ #1191 26th main 9 ನೇ ಬ್ಲಾಕ್ ರಾಗಿಗುಡ್ಡ ಆರ್ಚ್ (ಬಸ್ ಸ್ಟಾಪ್) ಎದುರುಗಡೆ ಜಯನಗರ 9ನೇ ಬ್ಲಾಕ್ ಬೆಂಗಳೂರು 69

ಇಂದಿನ ರಾಶಿ ಭವಿಷ್ಯ ಹೀಗಿದೆ. ಯಾವ ರಾಶಿಯವರು ಏನು ಮಾಡಬೇಕು? ಏನು ಮಾಡಬಾರದು ಎಂಬದನ್ನು ತಿಳಿದುಕೊಳ್ಳಿ.

ಮೇಷ


ಸೋಮಾರಿತನದಿಂದಾಗಿ ಉದ್ಯೋಗ ಕ್ಷೇತ್ರದಲ್ಲಿ ಹಿನ್ನಡೆ. ವ್ಯಾಪಾರಿಗಳಿಗೆ ಆರ್ಥಿಕ ಮುನ್ನಡೆ. ಸಂಘ ಸಂಸ್ಥೆಗಳಿಂದ ಸಹಾಯ ದೊರಕುವ ನಿರೀಕ್ಷೆ ಇದೆ. ಪ್ರೀತಿಪಾತ್ರರ ಆಗಮನ ಸಾಧ್ಯತೆ.

ವೃಷಭ


ನಿರುತ್ಸಾಹದಿಂದಾಗಿ ಕೆಲಸ ಕಾರ್ಯಗಳಲ್ಲಿ ಮಂದಗತಿ. ಏನಾದರೊಂದು ಚಿಂತೆ, ಜಂಜಡಗಳು ಎದುರಾಗಲಿವೆ. ವ್ಯಾಪಾರದಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆ. ಆರೋಗ್ಯದಲ್ಲಿ ತೊಂದರೆ ಎದುರಾದೀತು.

Advertisement

ಮಿಥುನ


ವ್ಯಾಪಾರ–ವ್ಯವಹಾರಗಳಲ್ಲಿ ಹಾನಿ ಸಂಭವ. ಕೋಪ–ತಾಪಗಳಿಂದಾಗಿ ಅಹಿತಕರ ಘಟನೆಗಳು ಸಂಭವಿಸಬಹುದು. ತಾಳ್ಮೆಯಿಂದಾಗಿ ಕೆಲಸ ಸಾಧ್ಯವಾಗಲಿದೆ. ಮನೆಯವರ ನೆರವಿನಿಂದಾಗಿ ನೆಮ್ಮದಿ.

ಕಟಕ


ಹಣದ ವ್ಯವಹಾರದಲ್ಲಿನ ಅನುಮಾನಗಳು ಬಗೆಹರಿಯಲಿವೆ. ವೃತ್ತಿಯಲ್ಲಿ ಪ್ರಗತಿ. ಮಿತ್ರರ ಆಗಮನದಿಂದ ಮನೆಯಲ್ಲಿ ಹಬ್ಬದ ವಾತಾವರಣ. ಸಂಗಾತಿಯ ಆಶೋತ್ತರಗಳನ್ನು ಈಡೇರಿಸಲಿದ್ದೀರಿ.

ಸಿಂಹ


ವ್ಯಾಪಾರದಲ್ಲಿ ನಿರೀಕ್ಷೆಗೆ ಮೀರಿದ ಲಾಭ. ಮಹಿಳೆಯರ ಕಲಾ ಕೌಶಲಕ್ಕೆ ಮನ್ನಣೆ ದೊರಕಲಿದೆ. ಬರಹಗಾರರಿಗೆ ಬಿಡುವಿಲ್ಲದ ಕೆಲಸ. ಮದ್ಯಪಾನದಂತಹ ನಶೆಗಳಿಂದ ಅನಾಹುತ ಸಾಧ್ಯತೆ.

ಕನ್ಯಾ


ಶ್ರಮರಹಿತ ಕಾರ್ಯ ಸಾಧನೆ ಮಾಡಲಿದ್ದೀರಿ. ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗುವ ಮನೋಭಾವದಿಂದಾಗಿ ಹಿರಿಯರ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ವ್ಯಾಪಾರದಲ್ಲಿ ಲಾಭ. ವಿದ್ಯಾರ್ಥಿಗಳಿಗೆ ಆಟ ಪಾಠಗಳಲ್ಲಿ ಪ್ರಗತಿ.

ತುಲಾ


ವ್ಯಾಪಾರದಲ್ಲಿ ಗ್ರಾಹಕರೊಂದಿಗೆ ಕಲಹ. ಆರೋಗ್ಯದಲ್ಲಿ ವ್ಯತ್ಯಯ. ಕುಟುಂಬ ಸದಸ್ಯರಲ್ಲಿ ರಕ್ತದೊತ್ತಡದಂತಹ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ. ದೇವತಾ ದರ್ಶನದಿಂದ ಮಾನಸಿಕ ನೆಮ್ಮದಿ.

ವೃಶ್ಚಿಕ


ವ್ಯವಹಾರ ಚತುರತೆಯನ್ನು ಮೆರೆಯಲಿದ್ದೀರಿ. ಲೇವಾದೇವಿ ವ್ಯವಹಾರದಲ್ಲಿ ಅಧಿಕ ಲಾಭ. ಅತಿಯಾಸೆಯಿಂದಾಗಿ ಮುಜುಗರದ ಪ್ರಸಂಗ ಎದುರಾದೀತು. ಆಸ್ತಿ ಕಲಹದಲ್ಲಿ ಅಪಜಯ ಎದುರಿಸಬೇಕಾದೀತು.

ಧನು


ರಾಜಕೀಯ ಅಧಿಕಾರ ಪ್ರಾಪ್ತವಾಗುವ ಸಾಧ್ಯತೆ. ಸ್ಥಿರ ನಿಲುವಿನಿಂದಾಗಿ ಸಮಾಜದಲ್ಲಿ ಪ್ರಶಂಸೆಗೆ ಪಾತ್ರರಾಗಲಿದ್ದೀರಿ. ಸ್ವಯಂ ಉದ್ಯೋಗ ಕೈಗೊಳ್ಳುವ ಯೋಜನೆಯೊಂದನ್ನು ನಿರೂಪಿಸಲಿದ್ದೀರಿ.

ಮಕರ


ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ. ಲೇವಾದೇವಿ ವ್ಯವಹಾರದಲ್ಲಿ ಹಿನ್ನಡೆ. ಬ್ಯಾಂಕ್ ವ್ಯವಹಾರಗಳಲ್ಲಿ ಅಪನಂಬಿಕೆ ಉಂಟಾಗುವ ಸಾಧ್ಯತೆ. ಅಧಿಕಾರಿಗಳೊಂದಿಗೆ ಕಲಹ ಏರ್ಪಡುವ ಸಾಧ್ಯತೆ.

ಕುಂಭ


ಆತ್ಮಬಲದ ವೃದ್ಧಿಯಿಂದಾಗಿ ಅಸಾಧ್ಯ ಕೆಲಸವೊಂದನ್ನು ಮಾಡಿ ಪೂರೈಸಲಿದ್ದೀರಿ. ಮಿತ್ರರೊಂದಿಗೆ ಸಂತಸವನ್ನು ಹಂಚಿಕೊಳ್ಳುವ ಅವಕಾಶ. ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮೀನ


ವಿಶೇಷ ಅಧ್ಯಯನಕ್ಕಾಗಿ ದೂರ ಪ್ರಯಾಣ. ಉದ್ಯೋಗರಂಗದಲ್ಲಿ ಯಶಸ್ಸು. ಅತಿಯಾದ ಕೆಲಸದಿಂದಾಗಿ ದೇಹಾಲಸ್ಯ ಉಂಟಾದೀತು. ವೈದ್ಯಕೀಯ ವೆಚ್ಚವನ್ನು ಭರಿಸಬೇಕಾದ ಅನಿವಾರ್ಯತೆ ಕಂಡುಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next