Advertisement

ಮಾರ್ಚ್ 05: ಗುರುವಾರದ ನಿಮ್ಮ ರಾಶಿ ಭವಿಷ್ಯ

12:54 PM Mar 06, 2020 | Team Udayavani |

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದೇ ಜ್ಯೋತಿಷ್ಯ ಶಾಸ್ತ್ರ.

Advertisement

ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಅನೇಕ ಕುಟುಂಬಗಳು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಕರೆ ಮಾಡಿ.

ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
888 488 9444

ಶ್ರೀ ಅಷ್ಟ ಲಕ್ಷ್ಮೀ ಜ್ಯೋತಿಷ್ಯ ಮಂದಿರ

ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
ಮನೆ #1191 26th main 9 ನೇ ಬ್ಲಾಕ್ ರಾಗಿಗುಡ್ಡ ಆರ್ಚ್ (ಬಸ್ ಸ್ಟಾಪ್) ಎದುರುಗಡೆ ಜಯನಗರ 9ನೇ ಬ್ಲಾಕ್ ಬೆಂಗಳೂರು 69

ಇಂದಿನ ರಾಶಿ ಭವಿಷ್ಯ ಹೀಗಿದೆ. ಯಾವ ರಾಶಿಯವರು ಏನು ಮಾಡಬೇಕು? ಏನು ಮಾಡಬಾರದು ಎಂಬದನ್ನು ತಿಳಿದುಕೊಳ್ಳಿ.

ಮೇಷ


ವಿವಾಹ ಸಮಸ್ಯೆಗಳಿಗೆ ಬಂಧುಗಳ ನೆರವಿನಿಂದ ಪರಿಹಾರ. ಹಣಕಾಸು ಪರಿಸ್ಥಿತಿ ಉತ್ತಮ. ಮಾನಸಿಕ ನೆಮ್ಮದಿಗಾಗಿ ದೂರ ಪ್ರಯಾಣ. ಬಹುದಿನಗಳ ಆಶೋತ್ತರವೊಂದು ನೆರವೇರಲಿದೆ. ಸಹೋದ್ಯೋಗಿಗಳಿಂದ ಸಹಕಾರ.

ವೃಷಭ


ನಿರ್ಣಯಗಳನ್ನು ಕೈಗೊಳ್ಳುವಾಗ ಉದ್ವೇಗಕ್ಕೆ ಒಳಗಾಗದಿರಿ. ತಾಳ್ಮೆಯಿಂದ ನಡೆದುಕೊಂಡಲ್ಲಿ ದಿನವಿಡಿ ಯಶಸ್ಸು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಪ್ರೀತಿಪಾತ್ರರೊಂದಿಗೆ ಒಡನಾಟ.

Advertisement

ಮಿಥುನ


ಕೆಲಸದಲ್ಲಿರುವವರಿಗೆ ಮುಂಬಡ್ತಿ. ಉದ್ಯೋಗದಲ್ಲಿನ ಬದಲಾವಣೆಯಿಂದಾಗಿ ಸಂಪಾದನೆಯಲ್ಲಿ ಪ್ರಗತಿ. ಅತಿಯಾದ ಹಣದ ಆಸೆಯಿಂದಾಗಿ ಸಂಕಷ್ಟ. ಗೌರವಕ್ಕೆ ಚ್ಯುತಿ ತರುವ ಘಟನೆಗಳ ಸಂಭವ.

ಕಟಕ


ವಿವಾಹ ಮಾತುಕತೆಯಲ್ಲಿ ಪ್ರಗತಿ. ಉದ್ಯೋಗದಲ್ಲಿ ಹೊಸ ಮಾರ್ಗವೊಂದನ್ನು ಕಂಡುಕೊಳ್ಳಲಿದ್ದೀರಿ. ಉದ್ಯೋಗಕ್ಕಾಗಿ ವಿದೇಶ ಪ್ರಯಾಣ ಸಾಧ್ಯತೆ. ಗೃಹ ನಿರ್ಮಾಣ ವಿಷಯದಲ್ಲಿ ನೆಮ್ಮದಿ.

ಸಿಂಹ


ವಿವಾಹಾಕಾಂಕ್ಷಿಗಳಿಗೆ ಕಂಕಣಬಲ ಕೂಡಿರುವ ಸಾಧ್ಯತೆ. ಗೃಹಬಳಕೆ ವಸ್ತುಗಳ ಮಾರಾಟಗಾರರಿಗೆ ಲಾಭ. ಹೊಸ ಯೋಜನೆಯೊಂದಕ್ಕೆ ನಾಂದಿ. ಗೃಹ ನೆಮ್ಮದಿ ನೆಲೆಸುವುದು.

ಕನ್ಯಾ


ಸಮಸ್ಯೆಯನ್ನು ಅತ್ಯಂತ ನಾಜೂಕಿನಿಂದ ಪರಿಹರಿಸುವ ಅವಕಾಶ. ರಾಜಕೀಯ ವ್ಯಕ್ತಿಗಳಾಗಿದ್ದರೆ ದಿನದ ಮಟ್ಟಿಗೆ ರಾಜಕೀಯದಿಂದ ದೂರ ಉಳಿಯುವುದು ಉತ್ತಮ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ.

ತುಲಾ


ಇತರರ ಸಹಾಯಕ್ಕಾಗಿ ಧಾವಿಸಬೇಕಾದ ಅನಿವಾರ್ಯತೆ. ನೆಮ್ಮದಿಯ ದಿನವಾದರೂ ಸ್ವಲ್ಪಮಟ್ಟಿನ ಆರೋಗ್ಯದ ಸಮಸ್ಯೆ ಕಾಡಬಹುದು. ಮಾನಸಿಕ ನೆಮ್ಮದಿಗಾಗಿ ದೇವಾಲಯಗಳಿಗೆ ಭೇಟಿ.

ವೃಶ್ಚಿಕ


ಮೇಲಧಿಕಾರಿಗಳ ಅವಕೃಪೆಗೆ ತುತ್ತಾಗುವುದನ್ನು ತಪ್ಪಿಸಿಕೊಳ್ಳಲು ಸಂಯಮದಿಂದ ವರ್ತಿಸಿ. ದೇವಿ ದರ್ಶನ ಭಾಗ್ಯ. ನಿಮ್ಮ ಬೇಡಿಕೆಗಳಿಗೆ ಸ್ಪಷ್ಟ ರೂಪವನ್ನು ಕೊಟ್ಟು ಮುಂದಿಟ್ಟಲ್ಲಿ ಈಡೇರುವ ಸಾಧ್ಯತೆ.

ಧನು


ಕೃಷಿ ಕ್ಷೇತ್ರದಲ್ಲಿರುವವರಿಗೆ ಸಂತಸ. ಆಸ್ತಮಾದಂತಹ ವ್ಯಾಧಿಯಿಂದ ಬಳಲುವ ಸಾಧ್ಯತೆ. ಸಂಯಮದಿಂದಾಗಿ ಮನೆಯಲ್ಲಿ ಸಂತೋಷದ ವಾತಾವರಣ. ಮಹತ್ತರ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾದ ಸಂದರ್ಭ.

ಮಕರ


ಹಣಕಾಸಿನ ವಿಷಯದಲ್ಲಿ ಉತ್ತಮ ದಿನ. ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರುವುದು ಉತ್ತಮ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಸ್ವಂತ ಉದ್ಯೋಗದಲ್ಲಿ ತೊಡಗಿಕೊಂಡವರಿಗೆ ಉತ್ತಮ ಲಾಭ.

ಕುಂಭ


ಪರಿಶ್ರಮದಿಂದ ಬಹುದಿನಗಳ ಕನಸು ನನಸಾಗಲಿದೆ. ಮನೆಗೆ ಬಂಧುಗಳ ಆಗಮನ ಸಾಧ್ಯತೆ. ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗದ ಬಗೆಗಿನ ದಂದ್ವ ನಿವಾರಣೆಯಾಗಿ ನಿಖರತೆ ಮೂಡಲಿದೆ.

ಮೀನ


ಅದೃಷ್ಟ ನಿಮ್ಮ ಪಾಲಿಗೆ ಇದೆ. ನಿಮ್ಮೆಲ್ಲ ಕೆಲಸ ಕಾರ್ಯಗಳಲ್ಲಿ ಬಂಧುಗಳ ಸಂಪೂರ್ಣ ಸಹಕಾರ ದೊರಕಲಿದೆ. ವಾಹನ ಚಲಾವಣೆಯಲ್ಲಿ ಎಚ್ಚರಿಕೆ. ಕೃಷಿ ಕೆಲಸಗಳು ಸುಗಮವಾಗಿ ಸಾಗುವವು.

Advertisement

Udayavani is now on Telegram. Click here to join our channel and stay updated with the latest news.

Next