Advertisement

ಫೆಬ್ರವರಿ 05: ಬುಧವಾರದ ನಿಮ್ಮದಿನ ಭವಿಷ್ಯ ಹೀಗಿದೆ

10:09 AM Feb 06, 2020 | Hari Prasad |

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದು ಜ್ಯೋತಿಷ್ಯ ಶಾಸ್ತ್ರ.

Advertisement

ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಸಮಾಲೋಚನೆ ಕರೆ ಮಾಡಿ.

ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
888 488 9444
ಶ್ರೀ ಅಷ್ಟ ಲಕ್ಷ್ಮೀ ಜ್ಯೋತಿಷ್ಯ ಮಂದಿರ
ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
ಮನೆ #1191 26th main 9 ನೇ ಬ್ಲಾಕ್ ರಾಗಿಗುಡ್ಡ ಆರ್ಚ್ (ಬಸ್ ಸ್ಟಾಪ್) ಎದುರುಗಡೆ ಜಯನಗರ 9ನೇ ಬ್ಲಾಕ್ ಬೆಂಗಳೂರು 69
8884889444

ಇಂದಿನ ರಾಶಿ ಭವಿಷ್ಯ ಹೀಗಿದೆ

ಮೇಷ


ಕಠಿಣ ಪರಿಶ್ರಮದಿಂದಾಗಿ ಕೆಲಸಗಳಲ್ಲಿ ಪ್ರಗತಿ. ವೆಚ್ಚದ ಬಗ್ಗೆ ಹೆಚ್ಚಿನ ಗಮನ ಅಗತ್ಯ. ಅಪಹಾಸ್ಯದಿಂದ ಪಾರಾಗುವಿರಿ. ಪರರ ಟೀಕೆಯಿಂದ ತಪ್ಪಿಸಿಕೊಳ್ಳುವ ಬಗ್ಗೆ ಯೋಚಿಸುವುದು ಉತ್ತಮ.

Advertisement

ವೃಷಭ


ಸ್ವತಂತ್ರ ಬದುಕನ್ನು ಅಪೇಕ್ಷಿಸುವ ನಿಮ್ಮ ನಿರ್ಧಾರ ಸಾಫಲ್ಯಗೊಳ್ಳುವುದು. ಆ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ವ್ಯವಹರಿಸಿ. ನಿಮ್ಮ ನಡೆ ನುಡಿಗಳು ಇತರರಿಗೆ ಮಾದರಿಯಾಗಿ ಪರಿಣಮಿಸುವುದು.

ಮಿಥುನ


ಕುಟುಂಬ ಸದಸ್ಯರು ಮತ್ತು ಇತರರಿಂದ ನೀವು ಕಠೋರ ಮಾತುಗಳನ್ನು ಎದುರಿಸಬೇಕಾದೀತು. ಸಮಾಧಾನದಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಮಕ್ಕಳ ಸಲುವಾಗಿ ಖರ್ಚು.

ಕಟಕ


ಕಾರ್ಯಸಾಧನೆಗಾಗಿ ಕೋಪ–ತಾಪಗಳನ್ನು ಪ್ರದರ್ಶಿಸುವುದು ಅನಿವಾರ್ಯವಾದೀತು. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತವಾಗುವ ಸಾಧ್ಯತೆ.

ಸಿಂಹ


ಅತಿಯಾದ ಲಾಭವಿದ್ದರೂ ಉಳಿಕೆಯ ಬಗ್ಗೆ ಚಿಂತೆ ಉಂಟಾಗಲಿದೆ. ಸ್ಥಿರಾಸ್ತಿ ಖರೀದಿ ಸಾಧ್ಯತೆ. ಸಂಸಾರದೊಂದಿಗೆ ದೇವಾಲಯ ದರ್ಶನ ಯೋಗ. ಮಕ್ಕಳ ಉನ್ನತ ಶಿಕ್ಷಣದ ಬಗ್ಗೆ ಚಿಂತಿಸುವಿರಿ.

ಕನ್ಯಾ


ಹೊಸ ಹೊಸ ವಿಚಾರಗಳು ಉದ್ಭವಿಸುವವು. ಹೂಡಿಕೆ ಮಾಡುವ ವಿಚಾರದಲ್ಲಿ ನಿರ್ಣಯ ಕೈಗೊಳ್ಳುವ ಸಾಧ್ಯತೆ. ಹೊಸ ಸಂಪನ್ಮೂಲದ ಹುಡುಕಾಟದಲ್ಲಿ ಯಶಸ್ಸು. ರಾಜಕೀಯದಿಂದಾಗಿ ಉದ್ಯೋಗಕ್ಕೆ ಕುತ್ತು.

ತುಲಾ


ಆರ್ಥಿಕ ಸ್ಥಿತಿಯು ಸುಧಾರಣೆಗೊಂಡು ಮನಸ್ಸಿನ ಆಸೆ ಆಕಾಂಕ್ಷೆಗಳು ಈಡೇರಲಿವೆ. ಕುಟುಂಬದಲ್ಲಿನ ಆಗುಹೋಗುಗಳ ಬಗ್ಗೆ ಗಮನ ಹರಿಸುವುದು ಸೂಕ್ತ. ಮಾನಸಿಕ ಶಾಂತಿಗಾಗಿ ಕುಲದೇವತಾರಾಧನೆ ಸೂಕ್ತ.

ವೃಶ್ಚಿಕ


ದಿನನಿತ್ಯದ ವ್ಯವಹಾರದಲ್ಲಿ ಸಣ್ಣಪುಟ್ಟ ತೊಡಕುಗಳು ಉಂಟಾಗುವ ಸಾಧ್ಯತೆ. ವ್ಯವಹಾರದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬರದು. ಅಮೂಲ್ಯ ವಸ್ತುಗಳನ್ನು ಸಂಗ್ರಹ ಮಾಡುವ ಅವಕಾಶ.

ಧನು


ವಿರೋಧಿಗಳಿಂದಲೇ ಆಪತ್ಕಾಲದಲ್ಲಿ ಅನಿರೀಕ್ಷಿತವಾದ ಸಹಾಯ ದೊರಕುವ ಸಾಧ್ಯತೆ. ಬಂಧುವರ್ಗದವರ ಆಗಮನದಿಂದಾಗಿ ಸಮಾಧಾನ. ವಿಶೇಷ ಸಮಾರಂಭಗಳಲ್ಲಿ ಭಾಗವಹಿಸುವ ಸಾಧ್ಯತೆ.

ಮಕರ


ರಾಜಕೀಯ ವಲಯದಿಂದ ವಿಪರೀತ ಒತ್ತಡವನ್ನು ಎದುರಿಸುವ ಸಾಧ್ಯತೆ. ಮಹಿಳಾ ಮುತ್ಸದ್ಧಿಗಳಿಗೆ ಮುಜುಗರದ ಪ್ರಸಂಗಗಳು ಎದುರಾಗಲಿದೆ. ಸಾರ್ವಜನಿಕ ವಲಯದಲ್ಲಿ ಯಶಸ್ಸು ನಿಮ್ಮದಾಗಲಿದೆ.

ಕುಂಭ


ಅತಿಯಾದ ಹೃದಯ ವೈಶಾಲ್ಯತೆ ಸಂಕಷ್ಟಕ್ಕೆ ನಾಂದಿಯಾದೀತು. ವಿಶೇಷ ಕೆಲಸದ ನಿಮಿತ್ತ ದೂರ ಪ್ರಯಾಣ. ರಾಜಕೀಯ ವ್ಯಕ್ತಿಗಳಿಂದಾಗಿ ನ್ಯಾಯಾಲಯದ ಮೆಟ್ಟಿಲು ಏರಬೇಕಾಗಬಹುದು.

ಮೀನ


ಹತ್ತಿರ ಸಂಬಂಧಿಯೊಬ್ಬರ ಭಾವನೆಗಳಿಗೆ ಮನ್ನಣೆ ಕೊಡುವುದು ಉಚಿತ. ಬಂಧುಗಳಿಂದ ವಿಶೇಷ ಮನ್ನಣೆ ದೊರಕುವ ಸಾಧ್ಯತೆ. ಬಹುದಿನಗಳ ಅಪೇಕ್ಷೆಯೊಂದು ಈಡೇರಲಿದೆ. ಸಂತಾನ ಪ್ರಾಪ್ತಿ ಯೋಗ ಕಂಡುಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next