Advertisement

ನಿಮ್ಮ ಗ್ರಹಬಲ: ಈ ರಾಶಿಯವರ ಜೀವನ ಶೈಲಿ ಬದಲಾಗುವ ಪ್ರಸಂಗ ಸಂಭವಿಸಬಹುದು

07:43 AM Jan 03, 2021 | Team Udayavani |

03-01-2021

Advertisement

ಮೇಷ: ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ ಕಂಡು ಬರಲಿದೆ. ಆರ್ಥಿಕವಾಗಿ ಹಲವಾರು ತರಹದ ಖರ್ಚುವೆಚ್ಚಗಳು ಕಂಡುಬಂದರೂ ಇಚ್ಛಿತ ನಿರ್ಧಾರವು ಕಾರ್ಯರೂಪಕ್ಕೆ ಬರಲಿದೆ. ಅತಿಥಿ ಆಗಮನ.

ವೃಷಭ: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹೆಚ್ಚಿನ ಆಸಕ್ತಿಯು ಮೂಡುವುದು. ನಿಮ್ಮ ಗುಣಾತ್ಮಕ ವರ್ತನೆಯಿಂದ ಹಲವು ಉತ್ತಮ ಕೆಲಸಗಳು ನಡೆದಾವು. ಮಾನಸಿಕವಾಗಿ ಚಂಚಲಿತೆ ಬಿಟ್ಟು ಬಿಡಿರಿ.

ಮಿಥುನ: ನಿಮ್ಮ ಮಾನಸಿಕ ಚಿಂತನೆಗಳು ಉತ್ತಮವಾದ ಫ‌ಲಿತಾಂಶ ನೀಡಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉನ್ನತ ಮಟ್ಟದ ಯಶಸ್ಸು ದೊರಕಲಿದೆ. ಹೊಸ ಸಾಮಾಗ್ರಿಗಳ ಖರೀದಿ ಇದ್ದೀತು.

ಕರ್ಕ: ಮನಸ್ಸಿನ ಭಾವನೆಗಳನ್ನು ಪ್ರಕಟಗೊಳಿಸುವುದು ಉತ್ತಮ. ಹಿತಮಿತ್ರರು ಅದಕ್ಕೆ ಉತ್ತಮ ದಾರಿಗಳನ್ನು ತೋರಿಸಿಯಾರು. ಧರ್ಮಕಾರ್ಯಗಳು ಮನೆಯಲ್ಲಿ ನಡೆದಾವು. ದೇಹವು ಪುಷ್ಟಿಯಾಗಲಿದೆ.

Advertisement

ಸಿಂಹ: ಉತ್ತಮ ಆಲೋಚನೆಗಳು ನಿಮ್ಮ ಮನಸ್ಸನ್ನು ಪ್ರಸನ್ನಗೊಳಿಸಲಿದೆ. ಯಾರೊಡನೆಯೂ ವ್ಯವಹರಿಸುವಾಗ ಜಾಗ್ರತೆ ಮಾಡಿರಿ. ನಿಮ್ಮ ಭಾವನೆಯನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ತಪ್ಪು ಮಾಡಿಯಾರು.

ಕನ್ಯಾ: ನಿಮ್ಮತನವನ್ನು ತೋರಿಸುವಂತಹ ಕೆಲಸ ಕಾರ್ಯಗಳನ್ನು ಮಾಡಲು ಸಿದ್ಧರಾಗಿರಿ. ಮಂಗಲ ಕಾರ್ಯ ನಿಮಿತ್ತ ಪ್ರವಾಸ ಕಂಡುಬರುವುದು. ಮನೆಯ ಹಿರಿಯರ ಆಗಮನ ಹಾಗೂ ಭೇಟಿಯಿಂದ ನಿಮಗೆ ಸಂತಸ.

ತುಲಾ: ಕೌಟುಂಬಿಕವಾಗಿ ಬಂಧುಮಿತ್ರರ ಓಲೈಕೆ ಹಿತವೆನಿಸೀತು. ನಿಮ್ಮ ಕೆಲಸಗಳನ್ನು ಆತ್ಮವಿಶ್ವಾಸದಿಂದ ಮುನ್ನಡೆಸಿಕೊಂಡು ಹೋಗಿರಿ. ಪೈಪೋಟಿಗಳು ಎದುರಾದವು. ಯಾವುದೇ ವಿಚಾರದಲ್ಲಿ ಸಂಘರ್ಷಕ್ಕೆ ಇಳಿಯದಿರಿ.

ವೃಶ್ಚಿಕ: ಹಂತಹಂತವಾಗಿ ಮಾನಸಿಕ ಒತ್ತಡಗಳು ಕಡಿಮೆಯಾಗಲಿದೆ. ವೃತ್ತಿರಂಗದಲ್ಲಿ ಉನ್ನತಿಯು ಕಂಡು ಬರುವುದು. ಹಣಕಾಸಿನ ಬಗ್ಗೆ ಸಮತೋಲನವನ್ನು ಕಾಯ್ದುಕೊಳ್ಳಿರಿ. ಪ್ರಣಯ ಪ್ರಸಂಗದಲ್ಲಿ ಅಡೆತಡೆಗಳು ಇರುತ್ತವೆ.

ಧನು: ಕೆಲವೊಂದು ವಿಚಾರಗಳ ಬಗ್ಗೆ ಗೊಂದಲಗಳು ಕಂಡುಬರಬಹುದು. ತಾಳ್ಮೆಯನ್ನು ಕಾಯ್ದು ಕೊಳ್ಳಿರಿ. ಹಣಕಾಸಿನ ವಿಚಾರದಲ್ಲಿ ಬೆಳವಣಿಗೆಯ ಅವಕಾಶ ಗಳು ಕಂಡುಬರುವುದು. ಕಾರ್ಯಾನುಕೂಲವಾಗಿ ಸಂತೃಪ್ತರಾಗುವಿರಿ.

ಮಕರ: ದೂರ ಸಂಚಾರದ ಸಾಧ್ಯತೆ ಕಂಡು ಬರಲಿದೆ. ಮನೆಯಲ್ಲಿ ಪತ್ನಿ ಮಕ್ಕಳಿಂದ ಪ್ರವಾಸದ ಬೇಡಿಕೆ ಬರಲಿದೆ. ಅವಿವಾಹಿತರು ಮುಂದಿರುವ ಆಯ್ಕೆಗಳನ್ನು ಪರಿಶೀಲಿಸಿ ಮುನ್ನಡೆಯುವುದು ಅಗತ್ಯ.

ಕುಂಭ: ನಿಮಗೆ ಹಣಕಾಸಿನ ವಿಚಾರದಲ್ಲಿ ಮುಗ್ಗಟ್ಟು ತೋರಿಬಂದೀತು. ಕೊಟ್ಟ ಸಾಲವನ್ನು ಪ್ರಯತ್ನ ಬಲದಿಂದ ಹಿಂದಕ್ಕೆ ಪಡೆಯುವಂತಾದೀತು. ಸಾಂಸಾರಿಕ ಸಂಬಂಧಗಳು ಸಡಿಲಗೊಳ್ಳಲಿದೆ. ಶುಭ ವಾರ್ತೆ.

ಮೀನ: ದುಡುಕಿ ತಪ್ಪು ಹೆಜ್ಜೆ ಇಟ್ಟಲ್ಲಿ ಪ್ರತಿಕೂಲ ಪರಿಣಾಮ ಕಂಡುಬರಲಿದೆ. ನಿಮ್ಮ ಜೀವನ ಶೈಲಿ ಬದಲಾಗುವ ಪ್ರಸಂಗ ಸಂಭವಿಸಬಹುದು. ಮನೆಯ ನವೀಕರಣಕ್ಕಾಗಿ ಸ್ವಲ್ಪ ಖರ್ಚು ಕಂಡುಬರಲಿದೆ.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next