Advertisement

ರಾಶಿಫಲ: ಈ ರಾಶಿಯವರಿಗಿಂದು ಧನಾರ್ಜನೆಯಲ್ಲಿ ಅನಿರೀಕ್ಷಿತ ಬದಲಾವಣೆ

08:25 AM Jul 31, 2021 | Team Udayavani |

31-7-2021

Advertisement

ಮೇಷ: ಪಿತ್ತ ಪ್ರಕೃತಿ ಪ್ರಧಾನ ಆರೋಗ್ಯ. ಪ್ರಯಾಣ, ಜ್ಞಾನ, ಜವಾಬ್ದಾರಿಯುತ ಕೆಲಸ ಕಾರ್ಯಗಳಿಂದ ಅಧಿಕ ಧನ ಸಂಪತ್ತಿನ ವೃದ್ಧಿ. ಸಹೋದರಾದಿ ವರ್ಗ, ಕಾರ್ಮಿಕ ವರ್ಗದವರಲ್ಲಿ ಸಹನೆಯಿಂದ ವ್ಯವಹರಿಸಿ.

ವೃಷಭ: ಉತ್ತಮ ಧನಾರ್ಜನೆ. ಜವಾಬ್ದಾರಿಯುತ ಸಹೋದರ ಸುಖ. ಭೂಮಿ, ಆಸ್ತಿ ವಿಚಾರದಲ್ಲಿ ಪ್ರಗತಿ. ಮಕ್ಕಳ ವಿಚಾರದಲ್ಲಿ ಸಂತೋಷ. ಉದ್ಯೋಗ ವ್ಯವಹಾರದಲ್ಲಿ ಗೌರವ ಪೂಜ್ಯತೆ. ಆರೋಗ್ಯದತ್ತ ಗಮನವಿರಲಿ.

ಮಿಥುನ:‌ ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಆದರೆ ಸಾಹಸ ಪ್ರವೃತ್ತಿ ಸಲ್ಲದು. ಉದ್ಯೋಗ ವ್ಯವಹಾರದಲ್ಲಿ ಅನ್ಯರ ಸಹಾಯದಿಂದ ಪ್ರಗತಿ. ಹಿರಿಯರ ಆರೋಗ್ಯ ಸುಧಾರಣೆ. ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ.

ಕರ್ಕ: ಆರೋಗ್ಯ ಉತ್ತಮ. ಗೌರವಯುತ ಧನಾರ್ಜನೆ. ಭೂ ಸಂಪತ್ತು ವೃದ್ಧಿ. ಉದ್ಯೋಗ ವ್ಯವಹಾರ ನಿಮಿತ್ತ ಪ್ರಯಾಣ. ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸುವಿಕೆ. ದೇವತಾ ಕಾರ್ಯಗಳಲ್ಲಿ ಪ್ರಗತಿ.

Advertisement

ಸಿಂಹ: ತೃಪ್ತಿದಾಯಕ ಧನಾರ್ಜನೆ. ಸಹೋದರ ಸುಖ ವೃದ್ಧಿ. ಭೂಮಿ, ಆಸ್ತಿ ವಿಚಾರದಲ್ಲಿ ಶ್ರಮ. ಮಕ್ಕಳ ವಿಚಾರದಲ್ಲಿ ಉತ್ಸಾಹ ಸಂತೋಷ. ಹಿರಿಯರ ಆರೋಗ್ಯದಲ್ಲಿ ಪ್ರಗತಿ. ಉದ್ಯೋಗ ವ್ಯವಹಾರದಲ್ಲಿ ನಿರೀಕ್ಷಿತ ಫ‌ಲ.

ಕನ್ಯಾ: ಸಾಹಸ ಪ್ರವೃತ್ತಿ, ಧೈರ್ಯದಿಂದ ಧನಾರ್ಜನೆ. ಸಹೋದರಾದಿ ವರ್ಗದವರಿಂದ ಪ್ರೋತ್ಸಾಹ. ಉದ್ಯೋಗ ವ್ಯವಹಾರ ನಿಮಿತ್ತ ಪ್ರಯಾಣ. ಧಾರ್ಮಿಕ ಕಾರ್ಯಗಳಲ್ಲಿ ವಿಳಂಬ. ವಿದ್ಯಾರ್ಥಿಗಳಲ್ಲಿ ಶ್ರಮದಿಂದ ಕಾರ್ಯ ಸಫ‌ಲತೆ.

ತುಲಾ: ಧನಾರ್ಜನೆ ವಿಷಯದಲ್ಲಿ ಅಭಿವೃದ್ಧಿ. ಕಾರ್ಮಿಕ ವರ್ಗ, ಸಹೋದರರಿಂದಲೂ ಸಲಹೆ ಸಹಕಾರ. ಮಕ್ಕಳ ವಿಚಾರದಲ್ಲಿ ಗೌರವ. ವ್ಯವಹಾರ ಉದ್ಯೋಗದಲ್ಲಿ ಬದಲಾವಣೆ. ಧಾರ್ಮಿಕ ಕಾರ್ಯಗಳಿಗೆ ಪ್ರಯಾಣ.

ವೃಶ್ಚಿಕ: ಗೌರವ ಅಧಿಕಾರಯುತ ಧನ ಸಂಪತ್ತು ವೃದ್ಧಿ. ಕಾರ್ಮಿಕರು, ಬಂಧುಗಳಿಂದ ಪ್ರೋತ್ಸಾಹ. ಭೂಮಿ, ಆಸ್ತಿ, ವಾಹನ ವಿಚಾರದಲ್ಲಿ ಪ್ರಗತಿ. ಮಕ್ಕಳಿಂದ ಲಾಭ, ಗುರುಹಿರಿಯರಿಂದ ಪ್ರೋತ್ಸಾಹ, ಆಶೀರ್ವಾದ

ಧನು: ವಾತ ಕಫ‌ ಪ್ರಧಾನದಿಂದ ಕೂಡಿದ ಶಾರೀರಿಕ ಆರೋಗ್ಯ. ಅತ್ಯುತ್ತಮ ಸ್ವಪ್ರಯತ್ನದಿಂದ ಕೂಡಿದ ಧನಾರ್ಜನೆ. ಕಾರ್ಮಿಕರಿಂದ ಉತ್ತಮ ಸಹಕಾರ. ಪರಿಶ್ರಮದಿಂದ ಕೂಡಿದ ಭಾಗ್ಯ.

ಮಕರ: ಜವಾಬ್ದಾರಿಯುತ ಧನಾರ್ಜನೆ. ಮಕ್ಕಳ ವಿಚಾರದಲ್ಲಿ ಕ್ರಮ. ದಾಂಪತ್ಯ ಸುಖ ತೃಪ್ತಿದಾಯಕ. ಉದ್ಯೋಗ ವ್ಯವಹಾರದಲ್ಲಿ ಸ್ಥಿರ ಪ್ರಗತಿ. ದೇವತಾ ಕಾರ್ಯಗಳಲ್ಲಿ ಆಸಕ್ತಿ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಕಾಲ

ಕುಂಭ: ಧನಾರ್ಜನೆಯಲ್ಲಿ ಅನಿರೀಕ್ಷಿತ ಬದಲಾವಣೆ. ಸಹೋದ್ಯೋಗಿ, ಸಹೋದರಾದಿ ವರ್ಗದಿಂದ ಸಂತೋಷ. ಆರೋಗ್ಯ ವೃದ್ಧಿ. ವ್ಯವಹಾರ ಉದ್ಯೋಗದಲ್ಲಿ ಗೌರವ. ಧಾರ್ಮಿಕ ಕಾರ್ಯಕ್ರಮಗಳಿಗೆ ಧನವ್ಯಯ

ಮೀನ: ಕಫ‌ ವಾತದಿಂದ ಕೂಡಿದ ಶಾರೀರಿಕ ಆರೋಗ್ಯ. ಉತ್ತಮ ಗೌರವದಿಂದ ಕೂಡಿದ ಧನಾರ್ಜನೆ. ಸಹೋದ್ಯೋಗಿಗಳಿಂದ ಸಹೋದರಾದಿ ವರ್ಗ ದವರಿಂದ ಸಾಮಾನ್ಯ ಸಹಕಾರ. ಭೂಮಿ ವಾಹನಾದಿ ಸುಖ ವೃದ್ಧಿ.

Advertisement

Udayavani is now on Telegram. Click here to join our channel and stay updated with the latest news.

Next