Advertisement

ಸೋಮವಾರದ ನಿಮ್ಮ ರಾಶಿಫಲ: ಯಾರಿಗೆ ಶುಭ-ಯಾರಿಗೆ ಲಾಭ?

06:49 AM Jun 07, 2021 | Team Udayavani |

7-6-2021

Advertisement

ಮೇಷ: ಕಾರ್ಯಕ್ಷೇತ್ರದಲ್ಲಿ ಚೇತರಿಕೆಯ ವಾತಾವರಣವು ಗೋಚರಕ್ಕೆ ಬರುವುದು. ಗೃಹದಲ್ಲಿ ಒಂದರ ನಂತರ ಇನ್ನೊಂದು ಎಂಬಂತೆ ತಾಪತ್ರಯಗಳು ಕಾಡಲಿವೆ. ಹೆಚ್ಚು ತಲೆಕೆಡಿಸಿಕೊಳ್ಳದಿರಿ. ಧಾರ್ಮಿಕ ಕಾರ್ಯ ನಡೆದೀತು.

ವೃಷಭ: ಉದ್ಯೋಗರಂಗದಲ್ಲಿ ಭಿನ್ನಮತ ಕರಗಿ ಸೌಹಾರ್ದತೆ ಮೂಡಿಬರುವುದು. ನಿಮ್ಮೆಣಿಕೆಯಂತೆ ಕೆಲಸ ಕಾರ್ಯಗಳು ನಡೆದರೂ ಸಮಾಧಾನ ಸಿಗದು ದೇಶಾರೋಗ್ಯದಲ್ಲ ಏರುಪೇರುಗಳು ಕಂಡುಬಂದು ಬೇಸರವಾದೀತು.

ಮಿಥುನ: ಪ್ರೇಮಿಗಳ ಪ್ರೀತಿ ಪ್ರಣಯವು ಸಕಾರಾತ್ಮಕವಾಗಿ ಬೆಳವಣಿಗೆ ಕಂಡು ಬರುವುದು. ಉದ್ಯೋಗದ ಅಪೇಕ್ಷಿಗಳಿಗೆ ಒಳ್ಳೆಯ ಶುಭ ಸುದ್ದಿ ಇರುವುದು. ವಿದ್ಯಾರ್ಥಿಗಳೂ ಮುನ್ನಡೆ ಸಾಧಿಸಿ ಹೆಮ್ಮೆ ಪಡುವಂತಾಗಲಿದೆ .

ಕರ್ಕ: ನಿಮ್ಮ ಸುತ್ತಮುತ್ತಲಿನ ವಾತಾವರಣ ಉದ್ವಿಗ್ನತೆಯಿಂದ ಕೂಡಿರುತ್ತದೆ. ಕೆಲವು ವಿಷಯಗಳಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಬಹುದು. ಖರ್ಚು ತಂದುಕೊಡುವ ಕೆಲಸಕಾರ್ಯಗಳನ್ನು ತಪ್ಪಿಸಿಕೊಳ್ಳಿರಿ.

Advertisement

ಸಿಂಹ: ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯವುದು ಉತ್ತವಾಗಿರುತ್ತದೆ. ಹಂತಹಂತವಾಗಿ ಆರೋಗ್ಯ ಹಾಗೂ ಆರ್ಥಿಕ ಸ್ಥಿತಿಯು ಅಭಿವೃದ್ಧಿಯಾಗದೆ ಅತ್ತನೂ ಅಲ್ಲ ಇತ್ತನೂ ಅಲ್ಲ ಎನ್ನುವಂತಿರುತ್ತದೆ. ಚಿಂತಿಸದಿರಿ.

ಕನ್ಯಾ: ತಾಳ್ಮೆ ಸಮಾಧಾನದಿಂದ ಮುಂದಿನ ಭವಿಷ್ಯಕ್ಕೆ ಪೂರಕವಾಗಿ ಹೋಗುತ್ತದೆ. ಆತ್ಮವಿಶ್ವಾಸ, ದೃಢ ವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಖಂಡಿತವಾಗಿಯೂ ಹಿಂಬಾಲಿಸಲಿದೆ. ವೃತ್ತಿರಂಗದಲ್ಲಿ ಒತ್ತಡವು ಹೆಚ್ಚಾಗಲಿದೆ.

ತುಲಾ: ಆಪೆ¤àಷ್ಟರ ಕುರಿತಂತೆ ಮನದಲ್ಲಿ ಚಿಂತಿಸಲಿದ್ದೀರಿ. ತಪ್ಪುಗಳಾಗದಂತೆ ಎಚ್ಚರ ವಹಿಸಿರಿ. ಹೊಸ ಗೆಳೆಯರು ದೊರಕಬಹುದು. ಹಂತಹಂತವಾಗಿ ಆರ್ಥಿಕ ಪರಿಸ್ಥಿತಿಯು ಸುಧಾರಿಸಲಿದೆ. ವಿಶ್ವಾಸದಿಂದ ಮುನ್ನಡೆಯಿರಿ.

ವೃಶ್ಚಿಕ: ನಿಮ್ಮ ವ್ಯಕ್ತಿತ್ವವು ಇತರರನ್ನು ಆಕರ್ಷಣೆ ಮಾಡಲಿದೆ. ಇತರರ ಸಲಹೆಗಳನ್ನು ಕುರುಡಾಗಿ ಒಪ್ಪಿಕೊಳ್ಳದಿರಿ. ಹಿಗೆಂದು ನಿಮ್ಮ ಕರ್ತವ್ಯಗಳನ್ನು ತಪ್ಪಿಸಿಕೊಳ್ಳದಿರಿ. ಅವಿವಾಹಿತರ ಸಂಬಂಧಗಳಿಗೆ ತಡೆಯುಂಟಾದೀತು.

ಧನು: ಕೌಟುಂಬಿಕವಾಗಿ ಅನಿರೀಕ್ಷಿತ ವರ್ತನೆಯ ಮೂಲಕ ಇತರರಲ್ಲಿ ಅಸಹನೆ ಮೂಡಿಸಲಿದ್ದೀರಿ. ನಿರ್ಧಾರಗಳಲ್ಲಿ ಅನಿಶ್ಚಿತತೆ ಕಾಡಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಬಿಡುವಿಲ್ಲದ ವಾರವಾದೀತು. ತಲೆಬಿಸಿ ಮಾಡದಿರಿ.

ಮಕರ: ಪ್ರಮುಖ ವಿಚಾರದಲ್ಲಿ ಮುಂದುವರಿಯಲು ಸಕಾಲವಲ್ಲ. ನೌಕರವರ್ಗದವರಿಗೆ ಕಠಿಣ ದುಡಿಮೆಗೆ ಸೂಕ್ತ ಪ್ರತಿಫ‌ಲ ದೊರಕುವುದು. ಸದ್ಯದಲ್ಲೇ ಉದ್ಯೋಗ ಬದಲಾವಣೆಯ ಸಂಭವವಿದೆ. ಶುಭವಿದೆ.

ಕುಂಭ: ಸಣ್ಣ ಮಟ್ಟಿನ ಪ್ರಯಾಣದ ಸಂಭವವು ಕಂಡುಬರುವುದು. ಕೌಟುಂಬಿಕವಾಗಿ ಇತರರೊಡನೆ ಅಸಹನೆ ತೋರಿಬಂದೀತು. ಆರೋಗ್ಯದ ಬಗ್ಗೆ ಕಾಳಜಿ ಅವಶ್ಯಕವಾಗಿದೆ. ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡದಿರಿ.

ಮೀನ: ಮಿತ್ರರಿಂದ ಉಪಯುಕ್ತ ಸಲಹೆಗಳು ದೊರಕಬಹುದು. ವೃತ್ತಿಪರರಿಗೆ ಯಶಸ್ಸು ದೊರಕಲಿದೆ. ಸಾಂಸಾರಿಕವಾಗಿ ಸುಖ ನೆಮ್ಮದಿ ತರಲಿದೆ. ನಿರುದ್ಯೋಗಿಗಳಿಗೆ ಕಾದುನೋಡುವ ಸಮಯವಿದು. ಕೆಲಸದಲ್ಲಿ ಮಿತಿ ಇಲ್ಲದಿರಬಹುದು.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next